'ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿ': ಟ್ವಿಟರ್ ಮೂಲಕ ಸ್ಪಷ್ಟೀಕರಣ ನೀಡಿದ ಕೊಹ್ಲಿ

Vinay Bhat | news18
Updated:November 8, 2018, 8:30 PM IST
'ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿ': ಟ್ವಿಟರ್ ಮೂಲಕ ಸ್ಪಷ್ಟೀಕರಣ ನೀಡಿದ ಕೊಹ್ಲಿ
Vinay Bhat | news18
Updated: November 8, 2018, 8:30 PM IST
ನ್ಯೂಸ್ 18 ಕನ್ನಡ

'ಅಭಿಮಾನಿಯೊಬ್ಬರಿಗೆ ನೀವು ಭಾರತ ಬಿಟ್ಟು ಬೇರೆ ದೇಶಕ್ಕೆ ತೊಲಗಿ, ಅಲ್ಲೆ ಬದುಕಿ' ಎಂಬ ಹೇಳಿಕೆಯ ವಿಚಾರದ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟದ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೊಹ್ಲಿ, 'ಟ್ರೋಲ್ ಎಂಬುದು ನನಗೆ ಹೊಸದೇನಲ್ಲ. ನಾನು ಟ್ರೋಲ್ ಗೆ ಅಂಟಿಕೊಂಡಿರುವವನು. ಆ ರೀತಿ ಹೇಳಿರುವುದು ಕೂಡ ಟ್ರೋಲ್ ಮಾಡಿ ಹೀಯಾಳಿಸುವವರಿಗೆ. ನನಗೆ ನನ್ನದೇಯಾದ ನಿಲುವುಗಳಿವೆ. ಅದಕ್ಕೋಸ್ಕರ ನಾನು ಆ ರೀತಿ ಮಾತನಾಡಿದೆ.' ಎಂದು ಹೇಳಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

 
ಏನಿದು ಘಟನೆ:

ಮೊನ್ನೆಯಷ್ಟೆ (ನ. 5) 30ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿ ತಮ್ಮ ಹೊಸ ಆ್ಯಪ್ ಅನ್ನು ಬಿಡುಗಡೆ ಗೊಳಿಸಿದ್ದರು. ಜೊತೆಗೆ ಈ ವಿಡಿಯೋವನ್ನು ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್​ಗೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ಆ ಒಂದು ಕಮೆಂಟ್​ಗೆ ಕೊಹ್ಲಿ ಕೊಟ್ಟ ಉತ್ತರ ಚರ್ಚೆಗೆ ಗ್ರಾಸವಾಗಿತ್ತು.

'ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್​ನಲ್ಲಿ ನನಗೆ ವಿಶೇಷತೆ ಏನು ಕಾಣುತ್ತಿಲ್ಲ. ಭಾರತೀಯರಿಗಿಂತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​​​ಗಳು ಅದ್ಭುತವಾಗಿ ಆಡುತ್ತಾರೆ' ಎಂದು ಒಬ್ಬರು ಕಮೆಂಟ್ ಮಾಡಿದ್ದರು.

ಇದಕ್ಕೆ ಉತ್ತರವಾಗಿ ಕೊಹ್ಲಿ ಹೇಳಿಕೆಯ ವಿಡಿಯೋ ಒಂದು ಬಿಡುಗಡೆಯಾಗಿತ್ತು. 'ಹಾಗಾದ್ರೆ ನೀವು ಭಾರತ ದೇಶದಲ್ಲಿರಿ ಎಂದು ನಾನು ಯೋಚಿಸುವುದಿಲ್ಲ. ನೀವು ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿ, ಅಲ್ಲೆ ಬದುಕಿ. ನಮ್ಮ ದೇಶದಲ್ಲಿ ನೀವು ಯಾಕಿದ್ದೀರಾ? ಮತ್ತು ನಮ್ಮ ದೇಶವನ್ನು ಯಾಕೆ ಪ್ರೀತಿಸುತ್ತೀರಾ?. ನೀವು ನನ್ನನ್ನು ಇಷ್ಟ ಪಡುವುದಿಲ್ಲ ಎಂದರೆ, ನಾನು ಮೈಂಡ್ ಮಾಡಲ್ಲ' ಎಂದು ವಿಡಿಯೋ ಮೂಲಕ ಕೊಹ್ಲಿ ಹೇಳಿದ್ದರು. ಕೊಹ್ಲಿ ಅವರ ಈ ಮಾತಿಗೆ ಸಾಮಾಜಿ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಮಾತುಗಳು ಕೇಳಿಬಂದಿದ್ದವು.

 

First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ