ಇಂಗ್ಲೆಂಡ್ ವಿರುದ್ಧ ಭಾರತ ಜಯ ಸಾಧಿಸುತ್ತದೆ, ಅವರೇನು ಮನುಷ್ಯರಲ್ಲವೇ: ಕ್ರಿಸ್ ಗೇಲ್

news18
Updated:August 3, 2018, 8:36 PM IST
ಇಂಗ್ಲೆಂಡ್ ವಿರುದ್ಧ ಭಾರತ ಜಯ ಸಾಧಿಸುತ್ತದೆ, ಅವರೇನು ಮನುಷ್ಯರಲ್ಲವೇ: ಕ್ರಿಸ್ ಗೇಲ್
news18
Updated: August 3, 2018, 8:36 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನ ಬರ್ಮಿಂಗ್​​​ಹ್ಯಾಮ್​​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಕೊಹ್ಲಿ ಅವರ ಶತಕಕ್ಕೆ ಕ್ರಿಕೆಟ್ ದಿಗ್ಗಜರು ಶುಭ ಕೋರಿದ್ದ, ಸದ್ಯ ವೆಸ್ಟ್​ ಇಂಡೀಸ್ ತಂಡದ ಬ್ಯಾಟ್ಸ್​ಮನ್​​​​ ಕ್ರಿಸ್ ಗೇಲ್ ಕೂಡ ಕೊಹ್ಲಿ ಹಾಗೂ ಟೀಂ ಇಂಡಿಯಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

'ನಾನು ಮುಂಬೈನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿ ಇದ್ದ ಕಾರಣ ಪಂದ್ಯ ವೀಕ್ಷಿಸಲು ಸಾಧ್ಯವಾಗಿಲ್ಲ. ಆದರೆ ಹೈಲೈಟ್ಸ್​​ ಅನ್ನು ನೋಡಿದೆ. ಅದು ಕೊಹ್ಲಿ ಅವರ ನಾಯಕನ ಆಟವಾಗಿತ್ತು. ಆಂಗ್ಲರ ನಾಡಲ್ಲಿ ಯಾವರೀತಿ ಆಡಬೇಕೆಂದು ಕೊಹ್ಲಿ ತೋರಿಸಿ ಕೊಟ್ಟಿದ್ದಾರೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇದೊಂದು ಅದ್ಭುತ ಪ್ರಾರಂಭವಾಗಿದೆ' ಎಂದು ಗೇಲ್ ಹೇಳಿದ್ದಾರೆ. 'ಇಂಗ್ಲೆಂಡ್​​ನಲ್ಲಿ ಕೊಹ್ಲಿ ಅವರ ಫಾರ್ಮ್​​ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ದವು, ಆದರೆ ಕೊಹ್ಲಿ ತನ್ನ ಬ್ಯಾಟ್​ ಮೂಲಕ ಉತ್ತರ ನೀಡಿದ್ದಾರೆ' ಎಂದಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯ ಜಯ ಸಾಧಿಸುತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಗೇಲ್, 'ಭಾರತ ತಂಡ ಏಕೆ ಗೆಲ್ಲಲು ಸಾದ್ಯವಿಲ್ಲ, ಅವರೇನು ಮನುಷ್ಯರಲ್ಲವೇ? ಭಾರತ ತಂಡ ಗೆದ್ದೇ ಗೆಲ್ಲುತ್ತದೆ' ಎಂದು ಹೇಳಿದ್ದಾರೆ. ಜೋ ರೂಟ್ ಗಳಿಸಿದ 80 ರನ್​ ಹಾಗೂ ಕೊಹ್ಲಿ ಬಾರಿಸಿದ 149 ರನ್​ನಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ರೂಟ್ ಅವರ ಆಟವನ್ನು ನೋಡಿಲ್ಲ. ಅವರು ರನೌಟ್​ ಆದ ಗಳಿಗೆಯನ್ನು ಮಾತ್ರ ನೋಡಿದೆ' ಎಂದರು.

ನಾನು ಫಿಟ್ ಆಗಿದ್ದು 2019ರ ವಿಶ್ವಕಪ್​​ ಆಡಲು ತಯಾರಿದ್ದೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಟಿ-20 ವಿಶ್ವಕಪ್ ವರೆಗೆ ಆಡುತ್ತೇನೆ ಎಂದು ತಿಳಿಸಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...