• Home
  • »
  • News
  • »
  • sports
  • »
  • HBD Virat Kohli: ಕೊಹ್ಲಿಯ ಅಪರೂಪದ ಫೋಟೋ ಹಂಚಿಕೊಂಡ ಅನುಷ್ಕಾ, ಮಡದಿಯ ವಿಶ್​ಗೆ ಮನಸೋತ ವಿರಾಟ್

HBD Virat Kohli: ಕೊಹ್ಲಿಯ ಅಪರೂಪದ ಫೋಟೋ ಹಂಚಿಕೊಂಡ ಅನುಷ್ಕಾ, ಮಡದಿಯ ವಿಶ್​ಗೆ ಮನಸೋತ ವಿರಾಟ್

ವಿರಾಟ್-ಅನುಷ್ಕಾ

ವಿರಾಟ್-ಅನುಷ್ಕಾ

HBD Virat Kohli: ವಿರಾಟ್ ಕೊಹ್ಲಿ ಹುಟ್ಟುಹಬ್ಬದಂದು ಅನುಷ್ಕಾ ಶರ್ಮಾ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ಅವರ ತಮಾಷೆಯ ಮುಖಭಾವ ಈ ಚಿತ್ರಗಳಲ್ಲಿ ಕಾಣುತ್ತಿದೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅನುಷ್ಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

  • Share this:

ಅನುಷ್ಕಾ ಶರ್ಮಾ (Anushka Sharma) ತಮ್ಮ ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ (HBD Virat Kohli) ಅವರ ಹುಟ್ಟುಹಬ್ಬದಂದು ಅನೇಕ ಅಪರೂಪದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದಾರೆ. ಪತಿಗಾಗಿ ಪ್ರೇಮ ಪತ್ರವನ್ನೂ ಬರೆದಿದ್ದಾರೆ. ಈ ಚಿತ್ರಗಳಲ್ಲಿ ವಿರಾಟ್ ಅವರ ತಮಾಷೆ ಪೋಟೋಗಳನ್ನು ಕಾಣಬಹುದು. ಅಷ್ಟೇ ಅಲ್ಲ ಮಗಳು ವಾಮಿಕಾ ಅವರ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ವಿರಾಟ್ ತನ್ನ ಮಗಳು ವಾಮಿಕಾಗೆ (Vamika) ಆಹಾರ ನೀಡುತ್ತಿರುವುದನ್ನು ಕಾಣಬಹುದು. ಅನುಷ್ಕಾ ತಮ್ಮ ಪೋಸ್ಟ್‌ನಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ, ವಿರಾಟ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ ಮತ್ತು ವಿರಾಟ್‌ನ ಈ ತಮಾಷೆ ಮನಸ್ಸನ್ನು ಅವರ ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ.


ಪತಿಗೆ ವಿಶ್ ಮಾಡಿದ ಅನುಷ್ಕಾ:


ಅನುಷ್ಕಾ ಶರ್ಮಾ ತಮ್ಮ ಪೋಸ್ಟ್‌ನಲ್ಲಿ, "ಇಂದು ನಿಮ್ಮ ಜನ್ಮದಿನ ನನ್ನ ಪ್ರೀತಿ. ಆದ್ದರಿಂದ ನಿಸ್ಸಂಶಯವಾಗಿ ನಾನು ಈ ಪೋಸ್ಟ್‌ಗಾಗಿ ನಿಮ್ಮ ಅತ್ಯುತ್ತಮ ಫೋಟೋಗಳನ್ನು ಆಯ್ಕೆ ಮಾಡಿದ್ದೇನೆ. ಪ್ರತಿ ಸನ್ನಿವೇಶದಲ್ಲಿ ನಿಮ್ಮನ್ನು ಪ್ರೀತಿಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ ಅನುಷ್ಕಾ ಹಲವಾರು ಕೆಂಪು ಹೃದಯದ ಎಮೋಜಿಗಳನ್ನು ಸಹ ಸೇರಿಸಿದ್ದಾರೆ. ಅನುಷ್ಕಾ ಅವರ ಈ ಪೋಸ್ಟ್‌ಗೆ ಕ್ರಿಕೆಟ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಅನುಷ್ಕಾ ಫೋಸ್ಟ್ಗೆ ವಿರಾಟ್ ಪ್ರತಿಕ್ರಿಯೆ:


ಅನುಷ್ಕಾ ಶರ್ಮಾ ಅವರ ಈ ಪೋಸ್ಟ್‌ಗೆ ಸ್ವತಃ ವಿರಾಟ್ ಕೊಹ್ಲಿ ಕೂಡ ನಗುವ ಮತ್ತು ಕೆಂಪು ಹೃದಯದ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ನಟಿ ರಾಧಿಕಾ ಆಪ್ಟೆ ರೆಡ್ ಹಾರ್ಟ್ ಮತ್ತು ನಗುವ ಎಮೋಜಿ ಕಾಮೆಂಟ್ ಮಾಡಿದ್ದಾರೆ. ಕ್ರಿಕೆಟಿಗ ಎವಿ ಡಿವಿಲಿಯರ್ಸ್ ನಗುವ ಎಮೋಜಿಯೊಂದಿಗೆ 'ಆ ಮುಖ' ಎಂದು ಬರೆದಿದ್ದಾರೆ. ಹಾಸ್ಯನಟ ಡ್ಯಾನಿಶ್ ಸೇಟ್ ಕೂಡ 'ಹಹಹಹ್ಹ!' ಬರೆದಿದ್ದಾರೆ.


ಇದನ್ನೂ ಓದಿ: HBD Virat Kohli: ಕೊಹ್ಲಿ ಕೈ ಮೇಲಿನ ಶಿವನ ಟ್ಯಾಟೂದ ನಿಜವಾದ ಅರ್ಥ ಏನು? ವಿರಾಟ್ ಪ್ರತಿ ಹಚ್ಚೆಯ ಹಿಂದಿದೆ ಇಂಟ್ರಸ್ಟಿಂಗ್​ ಕಹಾನಿ!


ಅನುಷ್ಕಾ ಶರ್ಮಾ ಅವರು ಹಂಚಿಕೊಂಡಿರುವ ಕೊಹ್ಲಿ ಫೋಟೋಗಳು ಅವರಲ್ಲಿನ ಮಗುವಿನಂತಹ ಮನಸ್ಥಿತಿಯನ್ನು ತೋರಿಸುತ್ತವೆ. ವಿರಾಟ್ ಅವರ ಸಂಪೂರ್ಣ ವಿಭಿನ್ನ ಶೈಲಿ ಈ ಚಿತ್ರಗಳಲ್ಲಿ ಕಂಡುಬರುತ್ತಿದೆ. ಕ್ರಿಕೆಟ್ ಗ್ರೌಂಡ್‌ನಿಂದ ಸೋಷಿಯಲ್ ಮೀಡಿಯಾದವರೆಗೆ ಅವರು ಈ ಶೈಲಿಯಲ್ಲಿ ಕಾಣಿಸಿಕೊಂಡಿಲ್ಲ. ಕೊಹ್ಲಿ ಸದ್ಯ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಪಂದ್ಯದಲ್ಲಿ ಅವರ ಪ್ರದರ್ಶನ ಅದ್ಭುತವಾಗಿ ಹೊರಹೊಮ್ಮುತ್ತಿದೆ.


ಸಾವಿರಾರು ಕೋಟಿಗಳ ಒಡೆಯ ಕಿಂಗ್​ ಕೊಹ್ಲಿ:


ಇನ್ನು, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್​ನಲ್ಲಿ ದಾಖಲೆ ಮಾಡಿರದೇ ಆಸ್ತಿ ಗಳಿಯೆಯಲ್ಲಿಯೂ ಮುಂದಿದ್ದಾರೆ, ಅವರು 2022ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದರು. ಇದರ ಜೊತೆಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಳುಗಳ ಸಾಲಿನಲ್ಲಿ 61ನೇ ಸ್ಥಾನ ಪಡೆದಿದ್ದಾರೆ. ವರದಿಯ ಪ್ರಕಾರ ಕೊಹ್ಲಿ ತಿಂಗಳ ಆದಾಯ ಸುಮಾರು ಐದೂವರೆ ಕೋಟಿ ಎನ್ನಲಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 12 ಶತಕೋಟಿ (1200 ಕೋಟಿ) ರೂ. ಆಗಿದೆ.


ಇದನ್ನೂ ಓದಿ: T20 World Cup 2022: ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ, ವಿಶ್ವಕಪ್​ನಲ್ಲಿ ಹೊಸ ಸಾಧನೆ ಮಾಡಿದ ವಿರಾಟ್


ಇದರ ಜೊತೆ ಅವರು ಅನೇಕ ದೊಡ್ಡ ಬ್ರಾಂಡ್‌ಗಳ ಜಾಹೀರಾತುಗಳಿಂದ ಸಂಪಾಧಿಸುತ್ತಾರೆ. ನಾವು ನೋಡಿರುವಂತೆ ಅವರ ಬ್ಯಾಟ್​ ಮೇಲೆ ಅಂಟಿಸಿರುವ MRF ಸ್ಟಿಕರ್​ಗೆ ವಾರ್ಷಿಕ 12 ಕೊಟಿ ಪಡೆಯುತ್ತಾರೆ. ಜೊತೆಗೆ ಸೋಶಿಯಲ್ ಮೀಡಿಯಾದಿಂದ 320 ಕೋಟಿಗೂ ಹೆಚ್ಚಿನ ಆದಾಯ ಗಳಿಸುತ್ತಾರೆ.

Published by:shrikrishna bhat
First published: