ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಜಯ ಸಾಧಿಸಿದ ಟೀಂ ಇಂಡಿಯಾ ಸಖತ್ ರಿಲಾಕ್ಸ್ ಮೂಡಿನಲ್ಲಿದೆ. ಕಳೆದೊಂದು ತಿಂಗಳಿಂದ ಕ್ರಿಕೆಟ್ ಮೈದಾನದಲ್ಲಿ ಬೆವರಿಳಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಟೆನಿಸ್ ಕೋರ್ಟ್ನತ್ತ ಮುಖ ಮಾಡಿದ್ದಾರೆ.
ತನ್ನ ಮುದ್ದಿನ ಮಡದಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರೊಂದಿಗೆ ಕೊಹ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ವೀಕ್ಷಿಸಿದ್ದಾರೆ. ವಿಐಪಿ ಗ್ಯಾಲರಿಯಲ್ಲಿ ಸೀಟುಗಿಟ್ಟಿಸಿದ ವಿರುಷ್ಕಾ ಜೋಡಿ ಖ್ಯಾತ ಆಟಗಾರ ನೊವಾಕ್ ಜೊಕೊವಿಚ್ ಮತ್ತು ಡೆನಿಶ್ ಶಪೊವಲೊವ್ ಅವರ ಪಂದ್ಯವನ್ನು ವೀಕ್ಷಿಸಿದರು. ಅಲ್ಲದೆ ಮಹಿಳಾ ಸಿಂಗಲ್ಸ್ನಲ್ಲಿ ಟೆನಿಸ್ ಧ್ರುವತಾರೆ ಸೆರೆನಾ ವಿಲಿಯಮ್ಸ್ ಮತ್ತು ಡಯಾನಾ ಎಸ್ಟ್ರೆಮ್ಸ್ಕಾ ನಡುವಿನ ಪಂದ್ಯಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಟೀಂ ಇಂಡಿಯಾಗೆ ಐತಿಹಾಸಿಕ ಸರಣಿ ಗೆಲುವು: ಆಸ್ಟ್ರೇಲಿಯಾ ವಿರುದ್ಧ ಗವಾಸ್ಕರ್ ಫುಲ್ ಗರಂ!
ಈ ನಡುವೆ ಬಿಡುವಿನ ವೇಳೆಯಲ್ಲಿ ವಿಶ್ವದ ಸ್ಟಾರ್ ಟೆನಿಸ್ ಆಟಗಾರ ರೋಜರ್ ಫೆಡರರ್ ಅನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ವಿಶ್ವದ ನಂಬರ್- 3 ಆಟಗಾರನೊಂದಿಗೆ ಕೊಹ್ಲಿ ಮತ್ತು ಅನುಷ್ಕಾ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
What a day at the Australian open. ❤😍👌👌 An amazing way to finish the Australian summer. Forever grateful🙏😇❤#ausopen pic.twitter.com/fqOiekjH3F
— Virat Kohli (@imVkohli) January 19, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ