ಈಗಂತೂ ಕ್ರೀಡಾಪಟುಗಳು ಮತ್ತು ಚಿತ್ರೋದ್ಯಮದ ನಟ-ನಟಿಯರು ಯಾವುದಾದರೂ ಒಂದು ಸ್ಥಳಕ್ಕೆ ಅಥವಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಅಂತ ಸ್ವಲ್ಪ ಸುಳಿವು ಸಿಕ್ಕರೆ ಸಾಕು ಅಭಿಮಾನಿಗಳು (Fans) ಅವರಿಗಿಂತಲೂ ಮುಂಚೆಯೇ ಆ ಸ್ಥಳದಲ್ಲಿ ಬಂದು ಅವರಿಗಾಗಿ ಕಾಯುತ್ತಿರುತ್ತಾರೆ. ಅದಕ್ಕೆ ಕಾರಣವೆಂದರೆ ಅವರ ಮೆಚ್ಚಿನ ಸೆಲೆಬ್ರಿಟಿಯ ಫೋಟೋವನ್ನು ಕ್ಲಿಕ್ಕಿಸುವುದಕ್ಕೆ ಅಥವಾ ಅವರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೆ, ಕೊನೆಯದಾಗಿ ಅವರನ್ನು ನೇರವಾಗಿ ನೋಡಬಹುದು ಎಂಬ ಒಂದು ಹಂಬಲದಿಂದ ಹೀಗೆ ಮಾಡುತ್ತಾರೆ. ಇಲ್ಲಿಯೂ ಸಹ ಇದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ಅವರ ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli), ತಮ್ಮ ಮಗಳು ವಮಿಕಾ ಕೊಹ್ಲಿಯನ್ನು (Vamika Kohli) ಈ ಪಾಪರಾಜಿಗಳು ಫೋಟೋಗಳನ್ನು ಕ್ಲಿಕ್ ಮಾಡದಂತೆ ನೋಡಿಕೊಳ್ಳುತ್ತಾರೆ.
ಮಾಧ್ಯಮದ ಕ್ಯಾಮೆರಾ ಕಣ್ಣಿನಿಂದ ಮತ್ತು ಅಭಿಮಾನಿಗಳಿಂದ ಅವಳನ್ನು ಸ್ವಲ್ಪ ದೂರವಿಡುತ್ತಿದ್ದಾರೆ. ಇತ್ತೀಚೆಗೆ, ಕಾರಿನಲ್ಲಿದ್ದ ತನ್ನ ಮಗು ವಮಿಕಾಳ ವೀಡಿಯೋಗಳನ್ನು ರೆಕಾರ್ಡ್ ಮಾಡದಂತೆ ತನ್ನ ಅಭಿಮಾನಿಗಳಿಗೆ ವಿನಮ್ರವಾಗಿ ಕೇಳಿದಾಗ ವಿರಾಟ್ ಅವರ ಕಾಳಜಿಯುಳ್ಳ ತಂದೆಯ ಗುಣವು ಎದ್ದು ಕಂಡಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮಗಳೊಂದಿಗೆ ದೇವಾಲಯಕ್ಕೆ ವಿರಾಟ್ ಭೇಟಿ :
ಕೆಲವು ದಿನಗಳ ಹಿಂದೆ ವಿರಾಟ್ ಮತ್ತು ಅನುಷ್ಕಾ ಅವರ ಮಗಳು ವಮಿಕಾ ಉತ್ತರಾಖಂಡದ ನೈನಿತಾಲ್ ಗೆ ಭೇಟಿ ನೀಡಿದ್ದರು. ದಂಪತಿಗಳು ಪ್ರಸಿದ್ಧ ದೇವಾಲಯವೊಂದರಲ್ಲಿ ಆಶೀರ್ವಾದ ಪಡೆಯುವುದಕ್ಕೆ ಹೋಗುವುದಾಗಿ ನಿರ್ಧರಿಸಿದ್ದರು. ಆ ವಿಚಾರ ವಿರಾಟ್ ಅವರ ಅಭಿಮಾನಿಗಳಿಗೆ ಹೇಗೋ ತಿಳಿದಿದೆ ಮತ್ತು ಅವರು ಅಲ್ಲಿಗೆ ಬರುವ ಮುಂಚೆಯೇ ಆ ಸ್ಥಳದಲ್ಲಿ ಅಭಿಮಾನಿಗಳು ಹಾಜರಿದ್ದರು. ಆದಾಗ್ಯೂ, ದಂಪತಿಗಳ ಡೈ-ಹಾರ್ಡ್ ಅಭಿಮಾನಿಗಳು ಅವರ ಫೋಟೋಗಳನ್ನು ಕ್ಲಿಕ್ಕಿಸಲು ತುಂಬಾನೇ ಉತ್ಸುಕರಾಗಿದ್ದರು. ವಿರಾಟ್ ಅಭಿಮಾನಿ ಕಪಿಲ್ ಎಂಬುವವರು ಅವರ ಗೆಳೆಯರ ಜೊತೆ ಅವರನ್ನು ನೋಡಲು ಬೆಳಿಗ್ಗೆ 6 ಗಂಟೆಗೆ ಕೈಚಿ ಧಾಮ್ ದೇವಾಲಯಕ್ಕೆ ಬೈಕಿನಲ್ಲಿ ಬಂದಿದ್ದರಂತೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಕಿಂಗ್ ಕೊಹ್ಲಿ ಭೇಟಿ ಮಾಡುವ ಮತ್ತು ಭೇಟಿಯ ನಂತರದ ಅನುಭವವನ್ನು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: IND vs BAN: ಪ್ರೈಮ್-ಹಾಟ್ಸ್ಟಾರ್ನಲ್ಲಿ ಭಾರತ-ಬಾಂಗ್ಲಾ ಪಂದ್ಯ ಬರಲ್ಲ! ಹಾಗಿದ್ರೆ ಲೈವ್ ಸ್ಟ್ರೀಮಿಂಗ್ ನೋಡೋದು ಎಲ್ಲಿ?
ಅಭಿಮಾನಿಗೆ ವಿರಾಟ್ ಏನು ಕೇಳಿಕೊಂಡರು?:
ಸುದೀರ್ಘ ಕಾಯುವಿಕೆಯ ನಂತರ, ಅಭಿಮಾನಿ ಕಪಿಲ್ ಅವರು ವಿರಾಟ್ ಕೊಹ್ಲಿಯನ್ನು ಭೇಟಿಯಾದರು, ಅವರು ಸಂತೋಷದಿಂದ ಅಭಿಮಾನಿಗಳ ಜೊತೆ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡರು. ಕಾರಿನೊಳಗಿದ್ದ ತನ್ನ ಮಗಳು ವಮಿಕಾಳ ವೀಡಿಯೋವನ್ನು ರೆಕಾರ್ಡ್ ಮಾಡದಂತೆ ವಿರಾಟ್ ಎಷ್ಟು ವಿನಮ್ರತೆಯಿಂದ ಎಲ್ಲಾರ ಬಳಿ ಕೇಳಿದರು ಎಂದು ಅಭಿಮಾನಿ ಬಹಿರಂಗಪಡಿಸಿದರು. ಅವರ ಅಭಿಮಾನಿಗಳು ಸಹ ಸಂತೋಷದಿಂದ ಅವರ ವಿನಂತಿಯನ್ನು ಒಪ್ಪಿಕೊಂಡರು. ಹೌದು, ವಿರಾಟ್ ಅವರು ಅಭಿಮಾನಿಗಳಿಗೆ "ಕಾರಿನೊಳಗೆ ಮಗು ಇದೆ, ದಯವಿಟ್ಟು ನಾವು ಹೋಗುವಾಗ ವೀಡಿಯೋ ರೆಕಾರ್ಡ್ ಮಾಡಬೇಡಿ" ಅಂತ ಫ್ಯಾನ್ಸ್ ಬಳಿ ಕೇಳಿಕೊಂಡಿದ್ದರಂತೆ.
ತಂದೆಯ ಆಟ ನೋಡಲು ಬಂದಿದ್ದ ಮಗಳು:
ಜನವರಿ 2022ರಲ್ಲಿ, ವಮಿಕಾ ತನ್ನ ತಂದೆ ವಿರಾಟ್ ಕೊಹ್ಲಿ ಅವರ ಆಟವನ್ನು ನೋಡಲು ತನ್ನ ತಾಯಿ ಅನುಷ್ಕಾ ಅವರೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಅವರ ಮೊದಲ ಫೋಟೋಗಳು ವೈರಲ್ ಆಗಿದ್ದವು. ಇದು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾದ ಒಂದು ಸುಂದರ ಕ್ಷಣವಾಗಿತ್ತು. ಆದಾಗ್ಯೂ, ದಂಪತಿಗಳು ಅದನ್ನು ಇಷ್ಟಪಡಲಿಲ್ಲ. ಮುದ್ದಿನ ಪೋಷಕರು ತಮ್ಮ ಮಗಳ ಫೋಟೋಗಳನ್ನು ಕ್ಲಿಕ್ ಮಾಡದಿರುವ ಬಗ್ಗೆ ತಮ್ಮ ನಿಲುವು ಇನ್ನೂ ಹಾಗೆಯೇ ಉಳಿದಿದೆ ಎಂದು ಮತ್ತೆ ಹೇಳಿದ್ದಾರೆ. ಇಬ್ಬರೂ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು ಮತ್ತು ತಮ್ಮ ಮಗಳ ಫೋಟೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಸಹ ವಿನಂತಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ