• Home
  • »
  • News
  • »
  • sports
  • »
  • Virat-Babar: ಕೊಹ್ಲಿ-ಬಾಬರ್ ಬಾಲ್ಯದ ಫೋಟೋ ವೈರಲ್, ಕುಂಭಮೇಳದಲ್ಲಿ ಇಬ್ರೂ ಕಳೆದು ಹೋಗಿದ್ರಾ ಅಂದ ಫ್ಯಾನ್ಸ್!

Virat-Babar: ಕೊಹ್ಲಿ-ಬಾಬರ್ ಬಾಲ್ಯದ ಫೋಟೋ ವೈರಲ್, ಕುಂಭಮೇಳದಲ್ಲಿ ಇಬ್ರೂ ಕಳೆದು ಹೋಗಿದ್ರಾ ಅಂದ ಫ್ಯಾನ್ಸ್!

ವಿರಾಟ್-ಬಾಬರ್

ವಿರಾಟ್-ಬಾಬರ್

Virat-Babar: ವಿರಾಟ್ ಕೊಹ್ಲಿ ಮತ್ತು ಬಾಬರ್ ಆಜಮ್ ಇಬ್ಬರೂ ಈ ಪೀಳಿಗೆಯ ಸ್ಡಾರ್​ ಬ್ಯಾಟ್ಸ್​ಮನ್​ಗಳು. ವಿರಾಟ್ ಮತ್ತು ಬಾಬರ್ ಪರಸ್ಪರ ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರೂ ಸಹ, ಇಬ್ಬರ ನಡುವೆ ಹೋಲಿಕೆಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ. ಇತ್ತೀಚಿಗೆ ಇವರಿಬ್ಬರ ಬಾಲ್ಯದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಭಾರತದ ವಿರಾಟ್ ಕೊಹ್ಲಿ (Virat Kohli) ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ( Babar Azam) ಮೈದಾನದ ಹೊರಗೆ ಸೌಹಾರ್ದ ಸಂಬಂಧವನ್ನ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ಯದ ದೊಡ್ಡ ಹೆಸರುಗಳು ಇವರೇ. ಮೈದಾನದಲ್ಲಿನ ಪ್ರದರ್ಶನದ ವಿಷಯದಲ್ಲಿ ಇಬ್ಬರನ್ನೂ ಹಲವು ಬಾರಿ ಹೋಲಿಸಲಾಗಿದೆ. ಆದರೆ ಇವೆರಡರ ಆಫ್ ಫೀಲ್ಡ್ ಟ್ಯೂನಿಂಗ್ ಕೂಡ ಚೆನ್ನಾಗಿದೆ. ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯದ ಮೊದಲು ಅಥವಾ ಪಂದ್ಯದ ನಂತರ ಇಬ್ಬರೂ ಹಲವು ಬಾರಿ ಮಾತನಾಡಿರುವುದು ಕಂಡುಬಂದಿದೆ. ಈ ಸ್ಟೈಲಿಶ್ ಜೋಡಿ ಸೋಷಿಯಲ್ ಮೀಡಿಯಾದಲ್ಲೂ ಪರಸ್ಪರ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಫಾರ್ಮ್‌ನಲ್ಲಿ ಸಂಕಷ್ಟದಲ್ಲಿರುವ ವಿರಾಟ್‌ಗೆ ಬೆಂಬಲ ಸೂಚಿಸಿ ಬಾಬರ್ ಆಜಮ್ ಮಾಡಿದ್ದ ಟ್ವೀಟ್ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಇವರಿಬ್ಬರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಬಾಬರ್-ವಿರಾಟ್ ಬಾಲ್ಯದ ಫೋಟೋ ವೈರಲ್:


ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. . ಆದರೆ ಈ ಫೋಟೋದಲ್ಲಿರುವ ಸಾಮ್ಯತೆ ನೋಡಿ ಕಮೆಂಟ್ ಗಳು ಬರಲಾರಂಭಿಸಿವೆ. ಈ ಫೋಟೋಗಳಲ್ಲಿ ವಿರಾಟ್ ಮತ್ತು ಬಾಬರ್ ಬಹುತೇಕ ಒಂದೇ ಶರ್ಟ್ ಧರಿಸಿದ್ದಾರೆ. ಇಬ್ಬರದ್ದೂ ಒಂದೇ ಹೇರ್ ಸ್ಟೈಲ್. ಹೀಗಾಗಿ ಕುಂಭಮೇಳದಲ್ಲಿ ಬೇರ್ಪಟ್ಟ ಅಣ್ಣ ತಮ್ಮಂದಿರೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಯಾರೋ ಅವರನ್ನು 'ಕರಣ್-ಅರ್ಜುನ್' ಎಂದು ಕರೆದಿದ್ದಾರೆ.ಏಷ್ಯಾಕಪ್​ ವೇಳೆ ವೈರಲ್ ಆಗಿತ್ತು ಇಬ್ಬರ ಫೋಟೋ:


ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2022 ರಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಸೌಹಾರ್ದ ಸಂಭಾಷಣೆ ನಡೆಸಿದ್ದರು. ಈ ವೇಳೆ ಇವರಿಬ್ಬರೂ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.


ಟ್ವಿಟರ್ ಕಾಮೆಂಟ್


ಸದ್ಯ ಈ ಇಬ್ಬರೂ ಸ್ಟಾರ್​ ಆಟಗಾರರು ತಮ್ಮ ದೇಶದ ಪರವಾಗಿ ಆಡುವಲ್ಲಿ ಬ್ಯುಸಿಯಾಗಿದ್ದಾರೆ. ಲಾಹೋರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬಾಬರ್ ಅಜಮ್ ಬ್ಯುಸಿಯಾಗಿದ್ದರೆ, ಇತ್ತ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಟವಾಡುತ್ತಿದ್ದಾರೆ. ಅಕ್ಟೋಬರ್ 23 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಈ ಜೋಡಿ ಮತ್ತೊಮ್ಮೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ.


ಇದನ್ನೂ ಓದಿ: T20 World Cup 2022: ಬುಮ್ರಾ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್? ಟಿ20 ವಿಶ್ವಕಪ್​ಗೆ ಆಯ್ಕೆ ಆಗ್ತಾರಾ RCB ಬೌಲರ್​?


ಮತ್ತೆ ಭಾರತ-ಪಾಕ್ ಮುಖಾಮುಖಿ:


ಏಷ್ಯಾಕಪ್ ನಂತರ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಮತ್ತೆ ಮುಖಾಮುಖಿಯಾಗಲಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಈ ಎರಡೂ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳು ಒಂದೇ ಗುಂಪಿನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ಎರಡು ಬಾರಿ ಪಾಕಿಸ್ತಾನವನ್ನು ಎದುರಿಸಿತ್ತು. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.


ಸದ್ಯ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಕೊನೆಯ ಅಭ್ಯಾಸ ನಡೆಯುತ್ತಿದೆ. ಈ ಪಂದ್ಯದ ನಂತರ ಎರಡೂ ತಂಡಗಳು ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿವೆ.

Published by:shrikrishna bhat
First published: