ಐಪಿಎಲ್ ಫೀವರ್ ಶುರು: ಬೆಂಗಳೂರಿನಲ್ಲಿ ಕೊಹ್ಲಿ-ಎಬಿಡಿ ಪೋಸ್ಟರ್​​ಗೆ ಹಾಲಿನ ಅಭಿಷೇಕ

ಮೊದಲ ಪಂದ್ಯದಲ್ಲೇ ಆರ್​ಸಿಬಿಗೆ ದೊಡ್ಡ ಚಾಲೆಂಜ್ ಎದುರಾಗಿದ್ದು, ಬೆಂಗಳೂರು ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಅದರಲ್ಲು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್​​ ಆಟ ಕಣ್ತುಂಬಿಕೊಳ್ಳಲೆಂದೆ ಕಾತುರದಿಂದ ಕಾಯುತ್ತಿದ್ದಾರೆ.

Vinay Bhat | news18
Updated:February 19, 2019, 9:37 PM IST
ಐಪಿಎಲ್ ಫೀವರ್ ಶುರು: ಬೆಂಗಳೂರಿನಲ್ಲಿ ಕೊಹ್ಲಿ-ಎಬಿಡಿ ಪೋಸ್ಟರ್​​ಗೆ ಹಾಲಿನ ಅಭಿಷೇಕ
ಅಂದಹಾಗೆ ಈ ಹರಾಜು bidorbuy.co.za ಈ ವೆಬ್ಸೈಟಿನಲ್ಲಿ ನಡೆಯಲಿದ್ದು, ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಈ ಇಬ್ಬರೂ ಆಟಗಾರರು ಮುಂದಿನ ದಿನಗಳಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಲಿದ್ದಾರೆ.
  • News18
  • Last Updated: February 19, 2019, 9:37 PM IST
  • Share this:
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಮಾಡಿದೆ. ಮಾರ್ಚ್​ 23 ರಂದು ಐಪಿಎಲ್​​​ಗೆ ಚಾಲನೆ ಸಿಗಲಿದ್ದು, ಎಪ್ರಿಲ್ 5ರ ವರಗಿನ 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಸೆಣೆಸಾಟ ನಡೆಸಲಿದೆ.

ಮೊದಲ ಪಂದ್ಯದಲ್ಲೇ ಆರ್​ಸಿಬಿಗೆ ದೊಡ್ಡ ಚಾಲೆಂಜ್ ಎದುರಾಗಿದ್ದು, ಬೆಂಗಳೂರು ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಅದರಲ್ಲು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್​​ ಆಟ ಕಣ್ತುಂಬಿಕೊಳ್ಳಲೆಂದೆ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಒದಿ: 'ಆಸೀಸ್ ಸರಣಿಯಲ್ಲಿ ಜಯ ಸಾಧಿಸಿ, ಗೆಲುವನ್ನು ಹುತಾತ್ಮ ಸೈನಿಕರಿಗೆ ಅರ್ಪಿಸುತ್ತೇವೆ'; ಶಮಿ

ಈಗಾಗಲೇ ಬೆಂಗಳೂರಿನಲ್ಲಿ ಐಪಿಎಲ್​​​ ಗುಂಗು ರಂಗೇರಿದ್ದು, ಅಭಿಮಾನಿಗಳು ಸಂಭ್ರಮಾಚರಣೆಯನ್ನು ಆರಂಭಸಿದ್ದಾರೆ. ಹೀಗಿರುವಾಗ ಸಾಮಾಜಿಕ ತಾಣಗಳಲ್ಲಿ ಕೊಹ್ಲಿ ಹಾಗೂ ಎಬಿಡಿ ಫೋಟೋಕ್ಕೆ ಹಾಲಿನ ಅಭಿಷೇಕ ಮಾಡುತ್ತಿರುವ ವಿಡಿಯೋ ಭಾರೀ ಹರಿದಾಡುತ್ತಿದೆ.

ಫೆಬ್ರವರಿ 17 ರಂದು ಎಬಿಡಿ ವಿಲಿಯರ್ಸ್​ ಅವರ 35ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಡಿವಿಲಿಯರ್ಸ್​ ಹಾಗೂ ಕೊಹ್ಲಿ ಅವರ ಪೋಸ್ಟರ್​​​ಗೆ ಹಾಲಿನ ಅಭಿಷೇಕ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಎಲ್ಲ ಕಡೆ ವೈರಲ್ ಆಗುತ್ತಿದೆ.

 First published: February 19, 2019, 9:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading