ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಮತ್ತೊಮ್ಮೆ ವಿವಾದಕ್ಕೆ ಸಿಲುಕೊಂಡಿದ್ದಾರೆ. ವಿನೋದ್ ಅವರ ವಿರುದ್ಧ ಅವರ ಪತ್ನಿ ಆಂಡ್ರಿಯಾ ಹೆವಿಟ್ (Andrea Hewitt) ಮುಂಬೈ ಪೊಲೀಸರಿಗೆ (Police) ದೂರು ನೀಡಿದ್ದಾರೆ. ಮದ್ಯದ ಅಮಲಿನಲ್ಲಿ ವಿನೋದ್ ಕಾಂಬ್ಳಿ ತನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆಂಡ್ರಿಯಾ ಆರೋಪಿಸಿದ್ದಾರೆ. ಕುಡಿದ ಅಮಲಿನಲ್ಲಿ ವಿನೋದ್ ಕಾಂಬ್ಳಿ ತನ್ನ ಮೇಲೆ ಅಡುಗೆ ಪ್ಯಾನ್‌ನ ಹಿಡಿಕೆಯನ್ನು ಎಸೆದು ಹೊಡೆದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಮಾಜಿ ಕ್ರಿಕೆಟಿಗನ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಪತ್ನಿ ಮೇಲೆ ಹಲ್ಲೆ:
ಇನ್ನು, ಭಾರತ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರು ತಮ್ ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಲಾಗಿದೆ. ಈ ಕುರಿತು ಅವರ ಪತ್ನಿ ಆಂಡ್ರಿಯಾ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಪ್ರಕಾರ, ಶುಕ್ರವಾರ ಮಧ್ಯಾಹ್ನ 1 ರಿಂದ 1.30ರ ನಡುವೆ ಘಟನೆ ನಡೆದಿದೆ. ಆಂಡ್ರಿಯಾ ತನ್ನ ದೂರಿನಲ್ಲಿ, 'ವಿನೋದ್ ಕಾಂಬ್ಳಿ ಕುಡಿದ ಅಮಲಿನಲ್ಲಿ ಬಾಂದ್ರಾ ಫ್ಲಾಟ್‌ಗೆ ಬಂದು ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಬಳಿಕ ಅಡುಗೆ ಮನೆಗೆ ಬಂದು ಅಡುಗೆ ಪಾತ್ರೆಯ ಹಿಡಿಕೆ ಎಸೆದು ನನಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Maharashtra | FIR registered against former cricketer Vinod Kambli at Bandra Police Station in Mumbai on the complaint of his wife Andrea. Her complaint stated that he verbally abused and thrashed her under the influence of alcohol. No arrest made yet: Mumbai Police
(File photo) pic.twitter.com/TxKLpst2RP
— ANI (@ANI) February 5, 2023
ಬಾಂದ್ರಾ ಪೊಲೀಸರ ಪ್ರಕಾರ, ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಲು ಬರುವ ಮುನ್ನ ಕಾಂಬ್ಳಿ ಪತ್ನಿ ಆಂಡ್ರಿಯಾ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ಪತ್ನಿಯ ನಡುವಿನ ಜಗಳಕ್ಕೆ 12 ವರ್ಷದ ಪುತ್ರನೇ ಸಾಕ್ಷಿಯಾಗಿದ್ದು, ಇದನ್ನೆಲ್ಲ ನೋಡಿ ಗಾಬರಿಗೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Deepak Chahar: ಟೀಂ ಇಂಡಿಯಾ ಸ್ಟಾರ್ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್
ಇದರ ನಡುವೆ ವಿನೋದ್ ಕಾಂಬ್ಳಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆಂಡ್ರಿಯಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ, 'ಅವರು ನನಗೆ ನಿರಂತರವಾಗಿ ಬೆದರಿಕೆ ಹಾಕುತ್ತಾರೆ. ಅವರು ನನ್ನನ್ನು ಮತ್ತು ನನ್ನ ಮಗುವನ್ನು ನಿಂದಿಸುತ್ತಾರೆ, ಮಗನಿಗೂ ಸಹ ಹೊಡೆಯುತ್ತಾರೆ. ಅಡುಗೆ ಪಾನ್‌ನಿಂದ ಹೊಡೆದ ನಂತರ ಬ್ಯಾಟ್‌ನಿಂದಲೂ ಥಳಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ವಿನೋದ್ ಕಾಂಬ್ಳಿ ಅವರನ್ನು ಪೊಲೀಸರು ಬಂಧಿಸಿದ್ದರು. ಕಾಂಬ್ಳಿ ಕುಡಿದ ಅಮಲಿನಲ್ಲಿ ಮತ್ತೊಂದು ವಾಹನಕ್ಕೆ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದರು.
ಕಾಂಬ್ಳಿ ಕ್ರಿಕೆಟ್ ವೃತ್ತಿ ಜೀವನ:
ವಿನೋದ್ ಕಾಂಬ್ಳಿ 1990 ರ ದಶಕದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ದೀರ್ಘಕಾಲದವರೆಗೆ ತಂಡದ ಭಾಗವಾಗಿದ್ದರು. ODIಗಳಲ್ಲಿ 32.59 ಸರಾಸರಿ ಹೊಂದಿರುವ ವಿನೋದ್ ಕಾಂಬ್ಳಿ, ಭಾರತಕ್ಕಾಗಿ 17 ಟೆಸ್ಟ್‌ಗಳಲ್ಲಿ 54.2 ರ ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. ಅವರು 104 ODIಗಳಲ್ಲಿ 32.59 ಸರಾಸರಿಯಲ್ಲಿ 2,477 ರನ್ ಗಳಿಸಿದರು. ಮಾಜಿ ಕ್ರಿಕೆಟ್ ಆಟಗಾರರಾಗಿರುವ ವಿನೋದ್ ಕಾಂಬ್ಳಿ ಸಚಿನ್ ತೆಂಡೊಲ್ಕರ್ ಜೊತೆಗೆ ಶಾಲಾ ಕ್ರಿಕೆಟ್ನಲ್ಲಿ 664 ರನ್ಗಳ ಜೊತೆಯಾಟ ಆಡಿ ಪ್ರಸಿದ್ಧಿ ಹೊಂದಿದ್ದರು, ಆದರೆ ಅವರು ತಮ್ಮ ನಿರೀಕ್ಷಿತ ಸಾಧನೆಯ ಮಟ್ಟವನ್ನು ತಲುಪಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ