• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Vinesh Phogat Birthday : ಏಷ್ಯನ್​ ಗೇಮ್ಸ್​​ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಕುಸ್ತಿಪಟು ವಿನೇಶ್​ ಪೋಗಾಟ್ ಜನ್ಮ ದಿನ- ಅವರ ಬಗ್ಗೆ ನಿಮಗೆಷ್ಟು ಗೊತ್ತು?

Vinesh Phogat Birthday : ಏಷ್ಯನ್​ ಗೇಮ್ಸ್​​ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಕುಸ್ತಿಪಟು ವಿನೇಶ್​ ಪೋಗಾಟ್ ಜನ್ಮ ದಿನ- ಅವರ ಬಗ್ಗೆ ನಿಮಗೆಷ್ಟು ಗೊತ್ತು?

ವಿನೇಶ್ ಫೋಗಾಟ್

ವಿನೇಶ್ ಫೋಗಾಟ್

Vinesh Phogat: 2014ರಲ್ಲಿ ಉತ್ತರ ಕೋರಿಯಾದ ಇಂಚಿಯಾನ್ ನಲ್ಲಿ ನಡೆದ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಚಿನ ಪದಕವನ್ನು ವಿನೇಶ್ ಗಳಿಸಿದ್ದರು.

  • Share this:

Wrestler:  ಏಷ್ಯನ್ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಜನ್ಮ ದಿನ ಇಂದು. ವಿನೇಶ್ ಕಾಮನ್ ವೆಲ್ತ್ ಮತ್ತು ಏಷ್ಯಾನ್ ಎರೆಡು ಪಂದ್ಯಗಳಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇನ್ನು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿನೇಶ್ ಅವರ ಜನ್ಮ ದಿನದಂದು ನಿಮಗೆ ಗೊತ್ತಿರದ ಹಲವು ಮಾಹಿತಿಗಳು ಇಲ್ಲಿದೆ.   


ವಿನೇಶ್ ಫೋಗಟ್ ಅವರು ಕುಸ್ತಿಪಟು ಮಹಾವೀರ ಸಿಂಗ್ ಅವರ ಕಿರಿಯ ಸಹೋದರನ ಮಗಳು ಹಾಗೂ .


ಅಂತರಾಷ್ಟ್ರೀಯ ಕುಸ್ತಿಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ವಿನೇಶ್ ಫೋಗಟ್ ಅವರ ಸಹೋದರಿಯರು.


ಇನ್ನು ಈ ಇವರಿಬ್ಬರೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.


ವಿನೇಶ್ ಫೋಗಟ್ ಹಾಗೂ ಅವರ ಸಹೋದರಿಯನ್ನು ಕುಸ್ತಿಪಟುಗಳಾಗಿ ಮಾಡಲು ಅವರ ತಂದೆ  ಮತ್ತು ಚಿಕ್ಕಪ್ಪ ಬಹಳ ಶ್ರಮಪಟ್ಟಿದ್ದರು, ಊರಿನ ಜನರಿಂದ ಬಹಳ ಸಮಸ್ಯೆಗಳನ್ನು ಸಹ ಅನುಭವಿಸಿದ್ದರು. ನಮ್ಮ ಸಮುದಾಯದ ನೈತಿಕತೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.


ವಿನೇಶ್ ಅವರ ಸಹೋದರಿ ರಿತು ಫೋಗಟ್ ಸಹ ಅಂತರಾಷ್ಟ್ರೀಯ ಕುಸ್ತಿಪಟು ಆಗಿದ್ದು, 2018 ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.


ಇನ್ನು ವಿನೇಶ್ ಅವರ ವೃತ್ತಿ ಜೀವನದಲ್ಲಿ ಹಲವಾರು ಸ್ಫರ್ಧೆಗಳಲ್ಲಿ ಭಾಗವಹಿಸಿದ್ದಾರೆ.


2013 ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್​ಶಿಪ್


2013ರಲ್ಲಿ  ನವದೆಹಲಿಯಲ್ಲಿ ನಡೆದ ಮಹಿಳೆಯರ 52 ಕೆ.ಜಿ. ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು 3-೦ ಅಂತರದಲ್ಲಿ ಗೆದ್ದು ಕಂಚು ಪದಕವನ್ನು ತಮ್ಮದಾಗಿಸಿಕೊಂಡಿದ್ದರು


2013 ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್​ಶಿಪ್


ವಿನೇಶ್ ಫೋಗಟ್ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದು ಬೀಗಿದ್ದರು.


ಇದನ್ನೂ ಓದಿ: ಟೋಕಿಯೋಗೆ ಬರಲಾಗದ ಅಫ್ಘನ್ ಸ್ಪರ್ಧಿಗಳು; ಪಾರಾಲಿಂಪಿಕ್ಸ್​ನಲ್ಲಿ ಇಲ್ಲ ಅಫ್ಘಾನಿಸ್ತಾನ ಸ್ಪರ್ಧೆ


ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್​ಶಿಪ್


2014ರಲ್ಲಿ ಉತ್ತರ ಕೋರಿಯಾದ ಇಂಚಿಯಾನ್ ನಲ್ಲಿ ನಡೆದ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಚಿನ ಪದಕವನ್ನು ವಿನೇಶ್ ಗಳಿಸಿದ್ದರು.


ಕಾಮನ್ವೆಲ್ತ್ ಗೇಮ್ಸ್


2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ವ್ರೆಸ್ಲಿಂಗ್  48 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.


2018  ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್


2018ರಂದು ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನ ಮಹಿಳೆಯರ 5೦ ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.


ಏಷ್ಯಿಯನ್ ಗೇಮ್ಸ್


2018  ಏಷ್ಯಿಯನ್ ಗೇಮ್ಸ್ ನಲ್ಲಿ ಮಹಿಳೆಯರ‌ ೫೦ ಕೆ.ಜಿ. ವಿಭಾಗದಲ್ಲಿ ವಿನೇಶ್ ಅವರು ಜಪಾನದ ಯುಕಿ ಐರಿ ಅವರನ್ನು ೬-೨ ಅಂತರದಲ್ಲಿ ಸೋಲಿಸಿ, ಏಷ್ಯಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.


2019  ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್​ಶಿಪ್


2019 ರಂದು ನಡೆದ ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ವಿಜೇತರಾದ ಚೀನಾದ ಕಿಯಾಂವ್ ಪಾಂಗ್ ಅವರನ್ನು ಸೋಲಿಸಿ, ಕಂಚಿನ ಪದಕವನ್ನು ಪಡೆದರು.


2020ರ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್​ಶಿಪ್


2020ರ ಜನವರಿಯಲ್ಲಿ ನಡೆದ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ ನ ರೋಮ್ ರ್ಯಾಂಕಿಂಗ್ ಸರಣಿಯಲ್ಲಿ ಲೂಯಿಸಾ ಎಲಿಜಬೆತ್ ವಾಲ್ವೆರ್ಡ್ ಅವರನ್ನು ಸೋಲಿಸಿ, ಚಿನ್ನದ ಪದಕಗಳಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

Published by:Sandhya M
First published: