ವಿಜಯ್ ಅಜೇಯ 87: ಕಿವೀಸ್ ವಿರುದ್ಧ ಭಾರತ ಎ ತಂಡಕ್ಕೆ 4 ವಿಕೆಟ್​ಗಳ ಭರ್ಜರಿ ಜಯ

42 ರನ್​ ಗಳಿಸಿರುವಾಗ ಪಾಂಡೆ ಬೌಲ್ಡ್​ ಆದರೆ, ಅಯ್ಯರ್​(54) ಅರ್ಧಶತಕ ಬಾರಿಸಿ ಔಟ್ ಆದರು. ಬಳಿಕ ನಡೆದಿದ್ದು ವಿಜಯ್ ಶಂಕರ್ ಆಟ. ಕಿವೀಸ್ ಬೌಲರ್​ಗಳ ಬೆವರಿಳಿಸಿದ ವಿಜಯ್ ಬಿರುಸಿನ ಆಟ ಪ್ರದರ್ಶಿಸಿದರು

Vinay Bhat | news18
Updated:December 7, 2018, 5:00 PM IST
ವಿಜಯ್ ಅಜೇಯ 87: ಕಿವೀಸ್ ವಿರುದ್ಧ ಭಾರತ ಎ ತಂಡಕ್ಕೆ 4 ವಿಕೆಟ್​ಗಳ ಭರ್ಜರಿ ಜಯ
ಶ್ರೇಯಸ್ ಅಯ್ಯರ್
Vinay Bhat | news18
Updated: December 7, 2018, 5:00 PM IST
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಎ ತಂಡ ಮೊದಲ ಅನಧಿಕೃತ ಏಕದಿನ ಪಂದ್ಯ ಗೆಲ್ಲುವ ಮೂಲಕ ಭರ್ಜರಿ ಆರಂಭ ಪಡೆದುಕೊಂಡಿದೆ. ವಿಜಯ್ ಶಂಕರ್ ಹಾಗೂ ಶ್ರೇಯಸ್ ಅಯ್ಯರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ದೊಡ್ಡ ಮೊತ್ತವನ್ನು ಬೆನ್ನೆತ್ತಿ 4 ವಿಕೆಟ್​ಗಳ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್ ಎ ತಂಡ ನೀಡಿದ್ದ ಬೃಹತ್ 309 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಎ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಮಯಾಂಕ್ ಅಗರ್ವಾಲ್(24) ಹಾಗೂ ಶುಭ್ಮನ್ ಗಿಲ್(37) ಮೊದಲ ವಿಕೆಟ್​ಗೆ 61 ರನ್​ಗಳ ಕಾಣಿಕೆ ನೀಡಿ ನಿರ್ಗಮಿಸಿದರು. ಬಳಿಕ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ನಾಯಕ ಮನೀಶ್ ಪಾಂಡೆ ತಂಡದ ರನ್​ಗತಿಯನ್ನು ಮತ್ತಷ್ಟು ಏರಿಸಿದರು. ಆದರೆ 42 ರನ್​ ಗಳಿಸಿರುವಾಗ ಪಾಂಡೆ ಬೌಲ್ಡ್​ ಆದರೆ, ಅಯ್ಯರ್​(54) ಅರ್ಧಶತಕ ಬಾರಿಸಿ ಔಟ್ ಆದರು. ಬಳಿಕ ನಡೆದಿದ್ದು ವಿಜಯ್ ಶಂಕರ್ ಆಟ. ಕಿವೀಸ್ ಬೌಲರ್​ಗಳ ಬೆವರಿಳಿಸಿದ ವಿಜಯ್ ಬಿರುಸಿನ ಆಟ ಪ್ರದರ್ಶಿಸಿದರು. ಪರಿಣಾಮ ಭಾರತ ಇನ್ನು ಒಂದು ಓವರ್​ ಬಾಕಿ ಇರುವಂತೆ 6 ವಿಕೆಟ್ ಕಳೆದುಕೊಂಡು 311 ರನ್ ಬಾರಿಸುವ ಮೂಲಕ ಗೆಲುವಿನ ದಡ ಸೇರಿತು. ವಿಜಯ್ 80 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್​​​ನೊಂದಿಗೆ ಅಜೇಯ 87 ರನ್ ಸಿಡಿಸಿದರೆ, ಇವರಿಗೆ ಉತ್ತಮ ಸಾತ್ ನೀಡಿದ ಇಶಾನ್ ಕಿಶನ್ 47 ರನ್ ಗಳಿಸಿ ಕೊನೆ ಕ್ಷಣದಲ್ಲಿ ಔಟ್ ಆದರು.

ಇದನ್ನೂ ಓದಿಮಿಂಚಿದ ಟೀಂ ಇಂಡಿಯಾ ಬೌಲರ್ಸ್​​: 2ನೇ ದಿನದಾಟಕ್ಕೆ ಆಸೀಸ್ 191/7

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಎ ತಂಡ ಜೇಮ್ಸ್​​ ನೀಶಮ್ ಅವರ 79, ಹಮಿಶ್ ರುಥೆರ್ಫುರ್ಡ್​​​ 70 ಹಾಗೂ ಟಿಮ್ ಸೈಫೆರ್ಟ್​ ಅವರ 59 ರನ್​ಗಳ ನೆರವಿನಿಂದ ನಿಗದಿತ 50 ಓವರ್​​ನಲ್ಲಿ 6 ವಿಕೆಟ್ ಕಳೆದುಕೊಂಡು 308 ರನ್ ಕಲೆಹಾಕಿತು. ಭಾರತ ಎ ಪರ ಸಿದ್ಧಾರ್ಥ್​ ಕೌಲ್ 2 ವಿಕೆಟ್ ಪಡೆದರು. ಎರಡನೇ ಅನಧಿಕೃತ ಏಕದಿನ ಪಂದ್ಯ ಡಿ. 9 ರಂದು ನಡೆಯಲಿದೆ.
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...