ಭಾರತ-ಇಂಗ್ಲೆಂಡ್​​ 5ನೇ ಟೆಸ್ಟ್​ ವೇಳೆ ಸೆರೆಸಿಕ್ಕ ವಂಚಕ ವಿಜಯ್​ ಮಲ್ಯ

news18
Updated:September 8, 2018, 5:12 PM IST
ಭಾರತ-ಇಂಗ್ಲೆಂಡ್​​ 5ನೇ ಟೆಸ್ಟ್​ ವೇಳೆ ಸೆರೆಸಿಕ್ಕ ವಂಚಕ ವಿಜಯ್​ ಮಲ್ಯ
news18
Updated: September 8, 2018, 5:12 PM IST
ನ್ಯೂಸ್ 18 ಕನ್ನಡ

ಭಾರತದ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ಲಂಡನ್​​ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ವೇಳೆ ಕ್ಯಾಮೆರಾ ಕಣ್ಣಲ್ಲಿ ಸೆರೆಸಿಕ್ಕಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯ ಲಂಡನ್​ನ ಓವೆಲ್ ಮೈದಾನದಲ್ಲಿ ನಡೆಯುತ್ತಿದ್ದು, ವಿಜಯ ಮಲ್ಯ ತನ್ನ ಸಂಗಡಿಗರ ಜೊತೆ ಕ್ರೀಡಾಂಗಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಮಲ್ಯ ಅವರು ಕ್ರೀಡಾಂಗಣ ಪ್ರವೇಶಿಸುತ್ತಿರುವ 15 ಸೆಕೆಂಡ್​​​ಗಳ ವಿಡಿಯೋವನ್ನು ಎಎನ್​​ಐ ಹಂಚಿಕೊಂಡಿದ್ದು, ಬಿಳಿ ಪ್ಯಾಂಟ್, ಕಪ್ಪಿ ಕೋಟ್​ನಲ್ಲಿ ಪಂದ್ಯ ವೀಕ್ಷಿಸಲು ತೆರಳಿದಿದ್ದಾರೆ.

 ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತವನ್ನು ಹಾಗೂ ನಾಯಕ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಬೇಕೆಂದು ಇತ್ತೀಚೆಗಷ್ಟೆ ಮಲ್ಯ ಅವರು ಹೇಳಿದ್ದರು. ಆದರೆ ಇದಕ್ಕೆ ಕೊಹ್ಲಿ ನಿರಾಕರಿಸಿದ್ದು, ಬಿಸಿಸಿಐ ಕೂಡ ಯಾವುದೇ ಕಾರಣಕ್ಕೂ ಮಲ್ಯ ಟೀಂ ಇಂಡಿಯಾ ಆಟಗಾರರನ್ನು ಭೇಟಿ ಆಗಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಈಗ ಮತ್ತೆ ಭಾರತ-ಇಂಗ್ಲೆಂಡ್ ಟೆಸ್ಟ್​ ವೇಳೆ ಮಲ್ಯ ಕ್ಯಾಮೆರ ಕಣ್ಣಿಗೆ ಕಾಣಿಸಿದ್ದು ಸಾಕಷ್ಟು ಅಚ್ಚರಿ ಮೂಡಿಸಿದೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...