ವಿದರ್ಭಕ್ಕೆ ಅಲ್ಪ ಮುನ್ನಡೆ: ಕುತೂಹಲ ಕೆರಳಿಸಿದೆ ರಣಜಿ ಫೈನಲ್ ಪಂದ್ಯ

ಕೊನೆಯ ವಿಕೆಟ್​ಗೆ ಜೊತೆಯಾದ ನಾಯಕ ಜಯದೇವ್ ಉನಾದ್ಕಟ್ ಹಾಗೂ ಚೇತನ್ ಸಕರ್ಯ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಮತ್ತೆ ಜೀವ ತಂದುಕೊಟ್ಟರು.

Vinay Bhat | news18
Updated:February 6, 2019, 6:01 PM IST
ವಿದರ್ಭಕ್ಕೆ ಅಲ್ಪ ಮುನ್ನಡೆ: ಕುತೂಹಲ ಕೆರಳಿಸಿದೆ ರಣಜಿ ಫೈನಲ್ ಪಂದ್ಯ
ವಾಸಿಮ್ ಜಾಫರ್ (ವಿದರ್ಭ ತಂಡದ ಆಟಗಾರ)
Vinay Bhat | news18
Updated: February 6, 2019, 6:01 PM IST
ನಾಗ್ಪುರ (ಫೆ. 05): ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಸಾಗುತ್ತಿರುವ ಪ್ರಸಕ್ತ ಸಾಲಿನ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಅಲ್ಪ ಮುನ್ನಡೆಯೊಂದಿಗೆ 3ನೇ ದಿನದಾಟವನ್ನು ಅಂತ್ಯಗೊಳಿಸಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ 312 ರನ್​​ಗೆ ಆಲೌಟ್ ಆಗಿ, ಸೌರಾಷ್ಟ್ರವನ್ನು 307 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ವಿದರ್ಭ 5 ರನ್​ಗಳ ಮುನ್ನಡೆ ಸಾಧಿಸಿತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ವಿದರ್ಭ ದಿನದಾಟಕ್ಕೆ 55 ರನ್​ಗೆ ನಾಯಕ ಫಜಲ್(10) ಹಾಗೂ ಸಂಜಯ್(16) ವಿಕೆಟ್ ಕಳೆದುಕೊಂಡು 60 ರನ್​ಗಳ ಮುನ್ನಡೆ ಸಾಧಿಸಿದೆ.  ಗಣೇಶ್ ಸತೀಶ್ 24 ಹಾಗೂ ವಾಸಿಮ್ ಜಾಫರ್ 5 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿದ್ದ ಸೌರಾಷ್ಟ್ರ ಇಂದು ರನ್​​ ಗಳಿಸಲು ಕಠಿಣ ಹೋರಾಟ ನಡೆಸಿತು. 87 ರನ್ ಗಳಿಸಿ ಸ್ನೆಲ್ ಪಟೇಲ್ ಹಾಗೂ 16 ರನ್ ಗಳಿಸಿ ಪ್ರೇರಕ್ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಆದರೆ, ದಿನದಾಟದ ಆರಂಭದಲ್ಲೆ ಶತಕ ಗಳಿಸಿ 102 ರನ್​ಗೆ ಸ್ನೆಲ್ ನಿರ್ಗಮಿಸಿದರೆ, 21 ರನ್​ಗೆ ಪ್ರೇರಕ್ ಬ್ಯಾಟ್ ಕೆಳಗಿಟ್ಟರು. ಬಳಿಕ ಬಂದ ಬ್ಯಾಟ್ಸ್​ಮನ್​​ಗಳ ಪೈಕಿ ಕಮಲೇಶ್ 27 ಹಾಗೂ ಡಿ. ಜಡೇಜಾ 23 ರನ್ ಗಳಿಸಿ ತಂಡದ ರನ್​​ಗತಿಯನ್ನು ಕೊಂಚ ಏರಿಸಲು ನೆರವಾದರು. ಕೊನೆಯ ವಿಕೆಟ್​ಗೆ ಜೊತೆಯಾದ ನಾಯಕ ಜಯದೇವ್ ಉನಾದ್ಕಟ್ ಹಾಗೂ ಚೇತನ್ ಸಕರ್ಯ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಮತ್ತೆ ಜೀವ ತಂದುಕೊಟ್ಟರು.

ಇದನ್ನೂ ಓದಿ: ರಣಜಿ ಫೈನಲ್: ವಿದರ್ಭ-ಸೌರಾಷ್ಟ್ರ ಸಮಬಲದ ಹೋರಾಟ

ಕೊನೆಯ ವಿಕೆಟ್​ಗೆ 60 ರನ್​ಗಳ ಜೊತೆಯಾಟವಾಡಿದ ಉನಾದ್ಕಟ್ ಹಾಗೂ ಚೇತನ್ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಇನ್ನೇನು ಸೌರಾಷ್ಟ್ರ ಮುನ್ನಡೆ ಸಾಧಿಸಿತ್ತೆ ಎಂಬೊತ್ತಿಗೆ 46 ರನ್ ಗಳಿಸಿದ್ದ ಉನಾದ್ಕಟ್ ಔಟ್ ಆದರು. ಈ ಮೂಲಕ ಸೌರಾಷ್ಟ್ರ 307 ರನ್​ಗೆ ಸರ್ವಪತನ ಕಂಡು 5 ರನ್​ಗಳ ಹಿನ್ನಡೆ ಅನುಭವಿಸಿತು. ಚೇತನ್ 28 ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತ ವಿದರ್ಭ ಪರ ಆದಿತ್ಯ ತಾರೆ 5 ವಿಕೆಟ್ ಕಿತ್ತರೆ, ಅಕ್ಷಯ್ ವಾಕ್ರೆ 4 ವಿಕೆಟ್ ಪಡೆದರು.

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...