ಸೌರಾಷ್ಟ್ರ ಮಣಿಸಿ ಎರಡನೇ ಬಾರಿ ರಣಜಿ ಕಿರೀಟ ತೊಟ್ಟ ವಿದರ್ಭ

ಆದಿತ್ಯ ಸರ್ವಾಟೆ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಸೌರಾಷ್ಟ್ರ ಬ್ಯಾಟ್ಸ್​ಮನ್​​​ಗಳು ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಕನಸಾಗೆ ಉಳಿದಿದೆ. ನಿನ್ನೆ 4ನೇ ದಿನದಾಟಕ್ಕೆ ಸೌರಾಷ್ಟ್ರ 5 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿತ್ತು.

Vinay Bhat | news18
Updated:February 7, 2019, 2:07 PM IST
ಸೌರಾಷ್ಟ್ರ ಮಣಿಸಿ ಎರಡನೇ ಬಾರಿ ರಣಜಿ ಕಿರೀಟ ತೊಟ್ಟ ವಿದರ್ಭ
ಸಂಭ್ರಮಾಚರಣೆಯಲ್ಲಿ ವಿದರ್ಭ ತಂಡದ ಆಟಗಾರರು
Vinay Bhat | news18
Updated: February 7, 2019, 2:07 PM IST
ನಾಗ್ಪುರ (ಫೆ. 07): ಭಾರೀ ಕುತೂಹಲ ಕೆರಳಿಸಿದ್ದ ಈ ಬಾರಿಯ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ವಿದರ್ಭ ತಂಡ ಭರ್ಜರಿ ಜಯ ಸಾಧಿಸಿದೆ. 78 ರನ್​​ಗಳಿಂದ ಗೆದ್ದು ಬೀಗಿದ ವಿದರ್ಭ ಸತತ ಎರಡನೇ ಬಾರಿ ಚಾಂಪಿಯನ್​ ಪಟ್ಟಕ್ಕೇರಿದೆ.

ಆದಿತ್ಯ ಸರ್ವಾಟೆ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಸೌರಾಷ್ಟ್ರ ಬ್ಯಾಟ್ಸ್​ಮನ್​​​ಗಳು ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಕನಸಾಗೆ ಉಳಿದಿದೆ. ನಿನ್ನೆ 4ನೇ ದಿನದಾಟಕ್ಕೆ ಸೌರಾಷ್ಟ್ರ 5 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿತ್ತು. ಅಂತೆಯೆ ಗೆಲ್ಲಲು ಇನ್ನು 148 ರನ್​ಗಳ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿದ್ದ ವಿಶ್ವರಾಜ್ ಜಡೇಜಾ 23 ಹಾಗೂ ಕಮಲೇಶ್ ಮಕ್ವಾನ 2 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ತಂಡವನ್ನು ಗೆಲುವಿನ ದಡ ಸೇರಿಸಬೇಕೆಂದು ಇಂದು ಇನ್ನಿಂಗ್ಸ್​ ಆರಂಭಿಸಿದ ಈ ಜೋಡಿಗೆ ಆರಂಭದಲ್ಲೆ ಆದಿತ್ಯ ಶಾಕ್ ನೀಡಿದರು. 14 ರನ್ ಗಳಿಸುತ್ತಿದ್ದಂತೆ ಕಮಲೇಶ್​ ಬೌಲ್ಡ್​ ಆದರೆ, ಪ್ರೇರಕ್ 2, ಡಿ. ಜಡೇಜಾ 17, ನಾಯಕ ಉನಾದ್ಕಟ್ 7 ರನ್​​ಗೆ ನಿರ್ಗಮಿಸಿದರು. ಇತ್ತ ವಿಶ್ವರಾಜ್ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರಾದರು52 ರನ್​ಗೆ ಬ್ಯಾಟ್ ಕೆಳಗಿಟ್ಟಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು. ಪರಿಣಾಮ ಕೇವಲ 127 ರನ್​ಗೆ ಸೌರಾಷ್ಟ್ರ ಸರ್ವಪತನ ಕಂಡಿತು.

ಇದನ್ನೂ ಓದಿ: ಕ್ರಿಕೆಟ್​ ಜಗತ್ತಿನ ಅತ್ಯಂತ ಹೀನಾಯ ಪಂದ್ಯ: ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್!

ವಿದರ್ಭ ಪರ ಆದಿತ್ಯ 6 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಅಕ್ಷಯ್ ವಾಕ್ರೆ 3 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದು. ಈ ಮೂಲಕ ತವರಿನಲ್ಲೆ 78 ರನ್​​ಗಳ ಭರ್ಜರಿ ಗೆಲುವಿನೊಂದಿಗೆ ಸತತ ಎರಡನೇ ಬಾರಿ ವಿದರ್ಭ ರಣಜಿ ಟ್ರೋಫಿ ಎತ್ತಿಹಿಡಿದಿದೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ 312 ರನ್​ಗೆ ಆಲೌಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ಸೌರಾಷ್ಟ್ರ 307 ರನ್​ಗೆ ಆಲೌಟ್ ಆದರೆ, ವಿದರ್ಭ ತನ್ನ 2ನೇ ಇನ್ನಿಂಗ್ಸ್​ನಲ್ಲಿ 200 ರನ್​ಗೆ ಆಲೌಟ್ ಆಗಿತ್ತು ಈ ಮೂಲಕ ಸೌರಾಷ್ಟ್ರಕ್ಕೆ ಗೆಲ್ಲಲು 206 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಕೇವಲ 127 ರನ್​ಗೆ ಆಲೌಟ್ ಆಗುವ ಮೂಲಕ ಸೋಲುಂಡಿದೆ.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...