ಮತ್ತೆ ನಂಬರ್ 1 ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ: ದಾಖಲೆಯ ಸರಮಾಲೆ ತೊಟ್ಟ ರನ್​ ಮೆಶಿನ್

news18
Updated:August 23, 2018, 8:21 PM IST
ಮತ್ತೆ ನಂಬರ್ 1 ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ: ದಾಖಲೆಯ ಸರಮಾಲೆ ತೊಟ್ಟ ರನ್​ ಮೆಶಿನ್
news18
Updated: August 23, 2018, 8:21 PM IST
ಸಾಗರ್ ಕನ್ನೆಮನೆ, ನ್ಯೂಸ್ 18 ಕನ್ನಡ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ನಂಬರ್ 1 ಪಟ್ಟಕ್ಕೇರಿದ್ದಾರೆ. ಟೆಸ್ಟ್ ಕ್ರಿಕೆಟ್ ಬ್ಯಾಟ್ಸ್​​ಮನ್​​ಗಳ ರ್ಯಾಂಕಿಂಗ್​​ನಲ್ಲಿ ನಂಬರ್ 1 ಪಟ್ಟಕ್ಕೇರುವುದರ ಜೊತೆಗೆ ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಕೊಹ್ಲಿ ಸೇರಿಸಿಕೊಂಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ 149 ಹಾಗೂ 51 ರನ್ ಕಲೆಹಾಕಿದ್ದ ಕೊಹ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದರು. ಆದರೆ ಲಾರ್ಡ್ಸ್​​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಫ್ಲಾಪ್  ಶೋ ತೋರಿದ ಪರಿಣಾಮ ಮತ್ತೆ 2ನೇ ಸ್ಥಾನಕ್ಕೆ ಕುಸಿದರು. ಬಳಿಕ ಟ್ರೆಂಟ್​​ಬ್ರಿಡ್ಜ್​​ನಲ್ಲಿ ನಡೆದ 3ನೇ ಟೆಸ್ಟ್​​ನಲ್ಲಿ ಕೊಹ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 97 ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 103 ರನ್ ಕಲೆಹಾಕಿ ಒಟ್ಟಾರೆ 200 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದರು. ಜೊತೆಗೆ ಒಟ್ಟು 18 ಪಾಯಿಂಟ್ಸ್ ಸಂಪಾದಿಸಿ ಒಟ್ಟಾರೆ 937 ಪಾಯಿಂಟ್​ಗಳೊಂದಿಗೆ ಬ್ಯಾಟ್ಸ್​ಮನ್​ಗಳ ರ್ಯಾಂಕಿಂಗ್​ನಲ್ಲಿ ಅಗ್ರ ಪಟ್ಟಕ್ಕೇರಿದ್ದಾರೆ.

ಇದು ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್​​ರ ಅತ್ಯುನ್ನತ ಸಾಧನೆಯಾಗಿದೆ. ಇದರ ಜೊತೆಗೆ 6 ಬಾರಿ ಪಂದ್ಯವೊಂದರಲ್ಲಿ 200 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣವಾದ ಮೊದಲ ನಾಯಕ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಆಸೀಸ್ ಕ್ರಿಕೆಟ್ ದಿಗ್ಗಜ ದಂತಕತೆ ಡೊನಾಲ್ಡ್ ಬ್ರಾಡ್ಮನ್ ಹಾಗೂ ಗ್ರೇಟೆಸ್ಟ್ ಕ್ಯಾಪ್ಟನ್ ರಿಕಿ ಪಾಂಟಿಂಗ್ 5 ಬಾರಿ 200 ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಆದರೆ ಕೊಹ್ಲಿ ಇವರಿಬ್ಬರ ದಾಖಲೆ ಮುರಿಯುವುದರ ಜೊತೆಗೆ ನಾಯಕನಾದ ಬಳಿಕ 10ನೇ ಬಾರಿಗೆ 200 ರನ್ ಕಲೆಹಾಕಿದ ಸಾಧನೆಗೆ ಪಾತ್ರರಾಗಿದ್ದಾರೆ. ಇನ್ನು ಕಳೆದ ಹಲವು ವರ್ಷಗಳಿಂದ ವರ್ಷಕ್ಕೆ ಸಾವಿರಕ್ಕೂ ಹೆಚ್ಚು ರನ್ ಕಲೆಹಾಕುತ್ತಿರುವ ಕೊಹ್ಲಿ ಪ್ರಸಕ್ತ ಕ್ಯಾಲೆಂಡೆರ್ ವರ್ಷದಲ್ಲಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದಾರೆ. ಇಷ್ಟಲ್ಲದೆ ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 440 ರನ್ ಕಲೆಹಾಕಿದ್ದು ಎಲ್ಲಾ ಬ್ಯಾಟ್ಸ್​ಮನ್​​ಗಳ ಹಿಂದಿಕ್ಕಿದ್ದಾರೆ. ಹೀಗಾಗೆ ವಿರಾಟ್​ರನ್ನು ಸದ್ಯದ ವಿಶ್ವ ಶ್ರೇಷ್ಠ  ಬ್ಯಾಟ್ಸ್​​ಮನ್​​​ ಎಂದೇ ಕರೆಯಲಾಗುತ್ತಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...