ಆರ್ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ: ಪ್ರಮುಖರಿಗೆ ಗೇಟ್ ಪಾಸ್..?
news18
Updated:August 24, 2018, 5:37 PM IST
news18
Updated: August 24, 2018, 5:37 PM IST
ನ್ಯೂಸ್ 18 ಕನ್ನಡ
ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಕೋಚಿಂಗ್ ತಂಡ ಕಟ್ಟಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಮುಖ್ಯ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಹೊರಕ್ಕೆ ಕಳುಹಿಸಿದ್ದು, ಹೊಸ ಕೋಚ್ ಅನ್ನು ಹುಡುಕಾಡುತ್ತಿದೆ ಎಂದು ತಿಳಿದುಬಂದಿದೆ. ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್ ಹಿಲ್ ಹಾಗೂ ಬೌಲಿಂಗ್ ಕೋಚ್ ಆಂಡ್ರ್ಯೂ ಮೆಕ್ ಡೋನಾಲ್ಡ್ ಅವರನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ. ಇನ್ನು ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಗೂ ಆಹ್ವಾನ ಸಿಗಬಹುದೆಂದು ಕೇಳಿಬಂದಿದೆ.
ಆರ್ಸಿಬಿ ಕಳೆದ 11 ವರ್ಷದಿಂದ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಲು ಹೋರಾಡುತ್ತಲೇ ಇದೆ. ಆದರೆ ಆ ಕನಸು ಮಾತ್ರ ಈ ವರೆಗೆ ನನಸಾಗಿಲ್ಲ. ಇನ್ನಾದರು 2019ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆಯಬೇಕೆಂದು, ಇದಕ್ಕೆ ಈಗಾಗಲೇ ತಯಾರಿ ಆರಂಭಿಸಿದಂತಿದೆ.

Loading...