'ವಿಶ್ವಕಪ್' ವಿಚಾರವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಯುವರಾಜ್ ಸಿಂಗ್

ಕ್ರೀಡಾಭಿಮಾನಿಗಳ ಪ್ರಮುಖ ಆಸೆ ಎಂದರೆ ಸಿಕ್ಸರ್​ಗಳ ಸರದಾರ ಯುವರಾಜ್ ಸಿಂಗ್ ವಿಶ್ವಕಪ್​​ನಲ್ಲಿ ಆಡಬೇಕು ಎಂಬುದು. ಸದ್ಯ ಸ್ವತಃ ಯುವರಾಜ್ ಅವರೆ ವಿಶ್ವಕಪ್ ವಿಚಾರವಾಗಿ ಮಾತನಾಡಿದ್ದಾರೆ.

Vinay Bhat | news18
Updated:January 7, 2019, 3:18 PM IST
'ವಿಶ್ವಕಪ್' ವಿಚಾರವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಯುವರಾಜ್ ಸಿಂಗ್
2011ರ ವಿಶ್ವಕಪ್ ಟ್ರೋಫಿ ಜೊತೆ ಯುವರಾಜ್ ಸಿಂಗ್
Vinay Bhat | news18
Updated: January 7, 2019, 3:18 PM IST
2019ರ ವಿಶ್ವಕಪ್​​​ಗೆ ಇನ್ನೇನು ಕೆಲವೇ ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಬರುವ ಮೇ ತಿಂಗಳಲ್ಲಿ ಆರಂಭವಾಗಲಿರುವ ಈ ಕ್ರೀಡಾ ಹಬ್ಬಕ್ಕೆ ಎಲ್ಲಾ ತಂಡಗಳು ಈಗಿನಿಂದಲೇ ಭರ್ಜರಿ ತಯಾರಿಯಲ್ಲಿದೆ.

ಅದರಲ್ಲೂ ಟೀಂ ಇಂಡಿಯಾ ಯುವ ಪಡೆ ಜೊತೆ ಸಜ್ಜಾಗುತ್ತಿದೆ. ಅಂತೆಯೆ ಕ್ರೀಡಾಭಿಮಾನಿಗಳ ಪ್ರಮುಖ ಆಸೆ ಎಂದರೆ ಸಿಕ್ಸರ್​ಗಳ ಸರದಾರ ಯುವರಾಜ್ ಸಿಂಗ್ ವಿಶ್ವಕಪ್​​ನಲ್ಲಿ ಆಡಬೇಕು ಎಂಬುದು. ಸದ್ಯ ಸ್ವತಃ ಯುವರಾಜ್ ಅವರೆ ವಿಶ್ವಕಪ್ ವಿಚಾರವಾಗಿ ಮಾತನಾಡಿದ್ದಾರೆ.

'ಮುಂಬರುವ ಏಕದಿನ ವಿಶ್ವಕಪ್​​​ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ನಾನು ಶಕ್ತಮೀರಿ ಪ್ರಯತ್ನ ನಡೆಸುತ್ತೇನೆ' ಎಂದಿದ್ದಾರೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: ಆಸೀಸ್ ಸರಣಿಯಲ್ಲಿ ರಿಷಭ್: 'ಕೀಪಿಂಗ್, ಬ್ಯಾಟಿಂಗ್ ಜೊತೆ ಸ್ಲೆಡ್ಜಿಂಗ್'​​​ನಲ್ಲೂ ಮಿಂಚಿದ ಪಂತ್

'ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ನಾನು ಯಾವಾಗ ಪಂದ್ಯವನ್ನು ಆಡುವುದು ನಿಲ್ಲಿಸುತ್ತೇನೊ, ಆಗ ಉತ್ತಮವಾದುದನ್ನು ನೀಡಲು ಬಯಸುವೆ. ಯಾವುದೇ ವಿಷಾದದೊಂದಿಗೆ ನಿರ್ಗಮಿಸಲು ಬಯಸುವುದಿಲ್ಲ' ಎಂದು 2011ರ ವಿಶ್ವಕಪ್ ಹೀರೋ ಹೇಳಿದ್ದಾರೆ. 'ಈಗ ನಾನು ಪಂಜಾಬ್ ಪರ ರಣಜಿ ಪಂದ್ಯವನ್ನು ಆಡುತ್ತಿರುವೆ. ಇದಾದ ಬಳಿಕ ಐಪಿಎಲ್​​ ಟೂರ್ನಮೆಂಟ್​​ ಇದೆ. ಎಲ್ಲದರಲ್ಲು ನನ್ನಿಂದ ಎಷ್ಟು ಸಾಧ್ಯವೊ ಅಷ್ಟು ಚೆನ್ನಾಗಿ ಆಡಲು ಪ್ರಯತ್ನಿಸುತ್ತೇನೆ' ಎಂದಿದ್ದಾರೆ.

ಇನ್ನು ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಮಾತನಾಡಿರುವ ಯುವಿ, 'ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಅದರಲ್ಲು ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ, ರಿಷಭ್ ಪಂತ್ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರತಿ ಬಾರಿ ನಾವು ಆಸ್ಟ್ರೇಲಿಯಾ ಪ್ರವಾಸದ ಬೆಳೆಸಿದ ವೇಳೆ ಅದೊಂದು ಕಷ್ಟದ ಸರಣಿ ಆಗುತ್ತಿತ್ತು. ಗೆಲ್ಲುವ ಪಂದ್ಯವು ಡ್ರಾ ಆಗಿತ್ತು. ಹೀಗಾಗಿ ಅಂದು ನಾವು 2-1 ರಿಂದ ಸರಣಿ ಕೈ ಚೆಲ್ಲಬೇಕಾಯಿತು' ಎಂದು ಹಿಂದಿನ ಪ್ರವಾಸವನ್ನು ನೆನೆದರು.

ಇನ್ನು 'ಟೀಂ ಇಂಡಿಯಾಕ್ಕೆ ಯುವ ಆಟಗಾರರು ಕಾಲಿಡಲು ತುದಿ ಗಾಲಿನಲ್ಲಿ ನಿಂತಿದ್ದಾರೆ. ಆಪೈಕಿ ಶುಭ್ಮನ್ ಗಿಲ್ ಕೂಡ ಒಬ್ಬರು. ಶುಭ್ಮನ್ ಅವರಿಗೆ ವಿಶೇಷವಾದ ಪ್ರತಿಭೆಯಿದೆ. ಬಹಳ ಸಮಯದ ನಂತರ ಯುವ ಆಟಗಾರ ಗಿಲ್ ಅವರ ಅದ್ಭುತ ಆಟ ನಾನು ನೋಡಿದೆ' ಎಂದಿದ್ದಾರೆ.
Loading...

First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ