Duleep Trophy 2022: ತಲೆಗೆ ಏಟು ಬಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್

Duleep Trophy 2022: ಇಂದು ನಡೆದ ದುಲೀಪ್ ಟ್ರೋಫಿ 2022ರ ಪಂದ್ಯದಲ್ಲಿ ಬೌಲರ್ ಚಿಂತನ್ ಗಜಾ ಎಸೆದ ಬೌಲ್​ ನೇರವಾಗಿ ಬ್ಯಾಟರ್​ ವೆಂಕಟೇಶ್​ ಅಯ್ಯರ್ ತಲೆಗೆ ತಗುಲಿ ಅಯ್ಯರ್ ಸ್ಥಳದಲ್ಲಿಯೇ ಕುಸಿದುಬಿದ್ದ ಘಟನೆ ನಡೆದಿದೆ.

ವೆಂಕಟೇಶ್ ಅಯ್ಯರ್

ವೆಂಕಟೇಶ್ ಅಯ್ಯರ್

  • Share this:
ಕ್ರಿಕೆಟ್​ ಅಂಗಳದಲ್ಲಿ ಆಟಗಾರರು ಗಾಯಕ್ಕೆ ಒಳಗಾಗುವುದು ಸಾಮಾನ್ಯ. ಫೀಲ್ಡಿಂಗ್​ ಮಾಡುವಾಗ, ಬೌಲಿಂಗ್​ ಮಾಡುವಾಗ ಹೀಗೆ ಆಟದ ನಡುವೆ ಗಾಯವಾಗಿ ಪೇವಿಲಿಯನ್​ ಸೇರುವ ಆಟಗಾರರನ್ನು ನಾವು ನೋಡುತ್ತಿರುತ್ತೇವೆ. ಆದರೆ ಇಂದು ನಡೆದ ದುಲೀಪ್ ಟ್ರೋಫಿ 2022ರ (Duleep Trophy 2022) ಸೆಮಿಫೈನಲ್ ಪಂದ್ಯದಲ್ಲಿ ನಡೆದ ಘಟನೆ ಬೇರೆಯದೇ ಆಗಿದೆ. ಇಲ್ಲಿ ಬ್ಯಾಟ್ಸ್​ಮನ್ ಬೌಲರ್​ಗೆ ಸಿಕ್ಸರ್​ ಸಿಡಿಸಿದ ಕಾರಣಕ್ಕೆ ನಂತರದ ಬೌಲರ್​​ ನೇರವಾಗಿ ಬ್ಯಾಟರ್​ ತಲೆಗೆ ಬೌಲ್​ ಒಗೆದು​ ಬ್ಯಾಟರ್​ ಅನ್ನು ಗಾಯಗೊಳಿಸಿದ್ದಾನೆ. ಹೌದು, ವೆಸ್ಟ್ ಜೋನ್ ಬೌಲರ್ ಚಿಂತನ್ ಗಜಾ (Chintan Gaja) ಎಸೆತದಲ್ಲಿ ಸೆಂಟ್ರಲ್ ಜೋನ್ ತಂಡದ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ (Venkatesh Iyer) ಭರ್ಜರಿ ಸಿಕ್ಸರ್ ಸಿಡಿಸಿದರು. ಇದರ ನಂತರದ ಎಸೆತವನ್ನು ಅಯ್ಯರ್ ಕಟ್​ ಮಾಡಿದರು.

ಈ ವೇಳೆ ಬೌಲರ್ ಚಿಂತನ್ ಗಜಾ ಬಾಲ್‌ನ್ನು ತಿರುಗಿ ಅಯ್ಯರ್‌ನತ್ತ ಬಲವಾಗಿ ಎಸೆದಿದ್ದಾರೆ. ಅದು ನೇರವಾಗಿ ಅಯ್ಯರ್ ತಲೆಗೆ ತಗುಲಿದ್ದು, ಅಯ್ಯರ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಹೀಗಾಗಿ ಮೈದಾನಕ್ಕೆ ಆ್ಯಂಬುಲೆನ್ಸ್ (Ambulance ) ಬಂದಿದ್ದು, ವೆಂಕಟೇಶ್ ಅಯ್ಯರ್ ಅವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

ಮೈದಾನಕ್ಕೆ ಬಂತು ಆ್ಯಂಬುಲೆನ್ಸ್:

ಹೌದು, ಬಲವಾದ ಪೆಟ್ಟು ಬಿದ್ದ ಕಾರಣ ವೆಂಕಟೇಶ್​ ಅಯ್ಯರ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಇದರಿಂದಾಗಿ ತಕ್ಷಣವೇ ಮೈದಾನಕ್ಕೆ ಆ್ಯಂಬುಲೆನ್ಸ್ ಬಂದಿದ್ದು, ಅಯ್ಯರ್ ಅವರನ್ನು ಆ್ಯಂಬುಲೆನ್ಸ್ ಕರೆದೊಯ್ಯಲಾಯಿತು.  ಎಸ್ ಎನ್ಆರ್ ಕ್ರಿಕೆಟ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಚಿಕಿತ್ಸೆ ಪಡೆದ ನಂತರ ಅಯ್ಯರ್ ಮತ್ತೆ ಆಟಕ್ಕೆ ಹಿಂತಿರುಗಿದ್ದಾರೆ. ಆದರೆ ಒಂದು ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ ಅವರು 9 ಎಸೆತಗಳಲ್ಲಿ 14 ರನ್ ಗಳಿಸಿ ತನುಷ್ ಕೋಟ್ಯಾನ್ ಓವರ್​ನಲ್ಲಿ ಔಟ್​ ಆಗಿ ಹೋಗಿದ್ದಾರೆ.





ಟೀಂ ಇಂಡಿಯಾದಲ್ಲೂ ಮಿಂಚಿದ್ದ ಅಯ್ಯರ್:

ವೆಂಕಟೇಶ್ ಅಯ್ಯರ್ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಭಾರತ ತಂಡಕ್ಕೆ ಎಂಟ್ರಿ ನೀಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ODI ಪಂದ್ಯದ ಮೂಲಕ ಏಕದಿನ ಕ್ರಿಕೆಟ್​ಗೆಎಂಟ್ರಿ ಕೊಟ್ಟರು. ಅಯ್ಯರ್ ಈವರೆಗೆ ಟೀಂ ಇಂಡಿಯಾ ಪರ 2 ಏಕದಿನ, 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅದರಂತೆಯೇ ಅಯ್ಯರ್ ಐಪಿಎಲ್​ ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಆಡುತ್ತಿದ್ದಾರೆ. ಐಪಿಎಲ್​ ನಲ್ಲಿ 22 ಪಂದ್ಯವಾಡಿರುವ ಅವರು 5 ಅರ್ಧಶತಕವನ್ನು ಸಿಡಿಸಿದ್ದಾರೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ ಬಳಿಕ ನಿವೃತ್ತಿ ಹೇಳ್ತಾರಂತೆ ಟೀಂ ಇಂಡಿಯಾದ ಇಬ್ಬರು ಸ್ಟಾರ್​ ಪ್ಲೇಯರ್ಸ್?

WZ vs CZ ಪಂದ್ಯದ ವಿವರ:

ಇನ್ನು, ಮೊದಲು ಬ್ಯಾಟ್​ ಮಾಡಿದ ವೆಸ್ಟ್ ಜೋನ್ ​ 257 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು. ನಂತರ ಬ್ಯಾಟ್​ ಮಾಡಿದ ಸೆಂಟ್ರಲ್​ ಜೋನ್​ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 128 ರನ್​ ಗಳಿಗೆ ಸರ್ವಪತನ ಕಂಡಿತು. ಇದೀಗ 2ನೇ ಇನ್ನಿಂಗ್ಸ್ ನಲ್ಲಿ ವೆಸ್ಟ್ ಜೋನ್ 3ನೇ ದಿನದ ಅಂತ್ಯಕ್ಕೆ 29 ಓವರ್​ ಗೆ 3 ವಿಕೆಟ್​ ಕಳೆದುಕೊಂಡು 130 ರನ್ ಗಳಿಸುವ ಮೂಲಕ 259 ರನ್ ಗಳ ಮುನ್ನಡೆ ಸಾಧಿಸಿದೆ.
Published by:shrikrishna bhat
First published: