Ranaji 2022: ಕೂಲಿ ಕೆಲಸಗಾರರಿಗಿಂತ ಈ ಕ್ರಿಕೆಟ್ ಆಟಗಾರರ ಸಂಬಳ ಕಡಿಮೆಯಂತೆ, ಛೆ ಅನ್ಯಾಯ! ಹೀಗ್ಯಾಕಾಯ್ತು?

ಉತ್ತರಾಖಂಡ ಕ್ರಿಕೆಟ್ (Uttarakhand Cricket Team) ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಬಹಿರಂಗವಾಗಿದೆ. ಈ ಪಂದ್ಯದ ವೇಳೆ ಉತ್ತರಾಖಂಡ ಆಟಗಾರರು ಹಸಿವಿನಿಂದ ಬಳಲುತ್ತಿದ್ದರು. ಅವರಿಗೆ ಯಾವುದೇ ದಿನಭತ್ಯೆ (DA) ನೀಡಲಾಗುತ್ತಿಲ್ಲ ಎಂಬ ಕಹಿ ಸತ್ಯವೊಂದು ಬಹಿರಂಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಣಜಿ ಟ್ರೋಫಿಯ  (Ranji Trophy) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ (Mumbai) ಉತ್ತರಾಖಂಡ ತಂಡವನ್ನು 725 ರನ್ ಗಳಿಂದ ಸೋಲಿಸುವ ಮೂಲಕ ಮುಂಬೈ ತಂಡ ಇತಿಹಾಸ ನಿರ್ಮಿಸಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲಾಗಿದ್ದು, ಈ ಮೂಲಕ ಮುಂಬೈ ತಂಡವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ತಂಡದ ದಾಖಲೆಯನ್ನು ಮುರಿದಿದೆ. ಆದರೆ ಇದೀಗ ಉತ್ತರಾಖಂಡ ಕ್ರಿಕೆಟ್ (Uttarakhand Cricket Team) ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಬಹಿರಂಗವಾಗಿದೆ. ಈ ಪಂದ್ಯದ ವೇಳೆ ಉತ್ತರಾಖಂಡ ಆಟಗಾರರು ಹಸಿವಿನಿಂದ ಬಳಲುತ್ತಿದ್ದರು. ಅವರಿಗೆ ಯಾವುದೇ ದಿನಭತ್ಯೆ (DA) ನೀಡಲಾಗುತ್ತಿಲ್ಲ ಎಂಬ ಕಹಿ ಸತ್ಯವೊಂದು ಬಹಿರಂಗವಾಗಿದೆ. ಸ್ವಿಗ್ಗಿ ಅಥವಾ ಝೊಮಾಟೊದಲ್ಲಿ ಊಟ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.

ಉತ್ತರಾಖಂಡ್ ಆಟಗಾರರಿಗೆ ದಿನಭತ್ಯೆಯಾಗಿ ಕೇವಲ 100 ರೂಪಾಯಿಗಳನ್ನು ನೀಡಲಾಗುತ್ತಿದೆ. ಅಂದರೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಕಾರ್ಮಿಕರಿಗೆ ದಿನಭತ್ಯೆಗಿಂತ ಕಡಿಮೆ ವೇತನ ನೀಡಲಾಗುತ್ತಿದೆ.

ಆಘಾತಕಾರಿ ಅಂಶ ಬಯಲು:

ಟೈಮ್ಸ್ ನೌ ನ್ಯೂಸ್ ನೀಡಿರುವ ವರದಿಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ. ವರದಿಯ ಪ್ರಕಾರ, ಆಟಗಾರರೊಬ್ಬರು ತಂಡದ ಮ್ಯಾನೇಜರ್‌ಗೆ ದೈನಂದಿನ ಭತ್ಯೆ ನೀಡುವಂತೆ ಕೇಳಿದ್ದರಂತೆ ಈ ವೇಳೆ ಅವರು, ನಿಮ್ಮ ಖರ್ಚುಗಳನ್ನು ನೀವು ನಿಭಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರಂತೆ. ಅಲ್ಲದೇ ನೀವು ಯಾಕೆ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ? ಸ್ವಿಗ್ಗಿ ಅಥವಾ ಝೊಮಾಟೊ ಮೂಲಕ ತಿನ್ನಲು ವ್ಯವಸ್ಥೆ ಮಾಡಿಕೊಳ್ಳಿ‘ ಎಂದು ಆಟಗಾರನಿಗೆ ಸಲಹೆ ನೀಡಿದ್ದರಂತೆ.

ಇದನ್ನೂ ಓದಿ: Virat Kohli: ಆಡದೇ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಕೊಹ್ಲಿ! ವಿಶೇಷ ದಾಖಲೆ ಬರೆದ ವಿರಾಟ್

ಇದಲ್ಲದೇ, ಈ ಪ್ರಕರಣದಲ್ಲಿ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದ್ದು, ಉತ್ತರಾಖಂಡದ ಆಟಗಾರರಿಗೆ ಅಧಿಕೃತವಾಗಿ 1,500 ರೂ.ಗಳ ದೈನಂದಿನ ಭತ್ಯೆಯನ್ನು ನಿಗದಿಪಡಿಸಲಾಗಿದೆ. ಅದನ್ನು ಈಗ 2000 ರೂ.ಗೆ ಹೆಚ್ಚಿಸಲಾಗಿದೆ. ಅದಾದ ನಂತರವೂ ಕಳೆದ ವರ್ಷದಿಂದ ಕ್ರಿಕೆಟಿಗರಿಗೆ ದಿನಕ್ಕೆ 100 ರೂ ಮಾತ್ರ ನೀಡಲಾಗುತ್ತಿದೆಯಂತೆ.

ತಂಡದ ಆಯ್ಕೆಯಿಂದ ಹಿಡಿದು ಬ್ಯಾಕ್ ರೂಂ ಸಿಬ್ಬಂದಿ ನೇಮಕದವರೆಗೆ ಹಲವಾರು ಕ್ಷೇತ್ರಗಳಲ್ಲಿ ಹಣಕಾಸು ಹಗರಣಗಳು ನಡೆದಿವೆ ಎಂದು ವರದಿ ಮೂಲಕ ತಿಳಿದುಬಂದಿದೆ. ಮಾರ್ಚ್ 31, 2021ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ (CAU) ಆಡಿಟ್ ವರದಿಯನ್ನು ಸಲ್ಲಿಸಿದೆ. ಈ ವರದಿಗೆ ಆಟಗಾರರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಪೂರ್ಣ ಪಂದ್ಯ ಶುಲ್ಕ ಮತ್ತು ದೈನಂದಿನ ಭತ್ಯೆಗಳನ್ನು ನೀಡುತ್ತಿಲ್ಲ ಎಂದು ಆಟಗಾರರು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಬಾಳೆ ಹಣ್ಣಿಗೆ 35 ಲಕ್ಷವಾದರೆ ನೀರು ಬಾಟಲಿಗೆ 22 ಲಕ್ಷ:

ಹೌದು, ಆಟಗಾರರಿಗೆ ಕೇವಲ 100 ರೂ. ಭತ್ಯೆ ನೀಡುತ್ತಿರುವ ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆ ತನ್ನ ವಾರ್ಷಿಕವಾಗಿ ಬಿಡುಗಡೆ ಮಾಡುವ ಆರ್ಥಿಕ ವರದಿಯಲ್ಲಿ ಆಹಾರ ವಿಭಾಗ ಮತ್ತು ಅಡುಗೆಗಾಗಿ 1,74,07,346 ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಿಕೊಂಡಿದೆ. ದಿನಭತ್ಯೆಗೆ 49,58,750 ರೂ., ಬಾಳೆಹಣ್ಣಿಗೆ 35 ಲಕ್ಷ ರೂ., ನೀರಿನ ಬಾಟಲಿಗೆ 22 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: Ranji Trophy: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಮುಂಬೈ ವಿಶ್ವ ದಾಖಲೆ; 93 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಪೃಥ್ವಿ ಶಾ ಪಡೆ

ಕೊಲೆ ಬೆದರಿಕೆ ಸಹ ಬಂದಿದೆ:

ಇನ್ನು, ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆ ವಿರುದ್ಧ ಕ್ರಿಕೆಟಿಗರ ಪೋಷಕರು ಸಹ ಬೇಸರ ಹೊರಹಾಕಿದ್ದು, ‘ಸಿಎಯು ಅಲ್ಲಿ ಆಯ್ಕೆ ಆಗಲು ಯಾವುದೇ ಮಾನದಂಡಗಳನ್ನೂ ನಿಗದಿಪಡಿಸಿಲ್ಲ. ಹೀಗಾಗಿ ಕೇವಲ ಶಿಫಾರಸು ಆಧಾರದ ಮೇಳೆ  ಆಯ್ಕೆಗಳು ನಡೆಯುತ್ತವೆ‘ ಎಂದು ಆಟಗಾರನ ತಂದೆ ಒಬ್ಬರು ಹೇಳಿಕೊಂಡಿದ್ದಾರೆ. (ಆಟಗಾರರ ಹೆಸರನ್ನು ತಿಳಿಸಲಾಗಿಲ್ಲ). ಇದಲ್ಲದೇ ಆರ್ಯ ಸೇಥಿ ಎಂಬ ಆಟಗಾರನ ತಂದೆ ಮಾತನಾಡಿ ಕಳೆದ ವರ್ಷ 2021ರ ಡಿಸೆಂಬರ್​ ನಲ್ಲಿ ತಮ್ಮ ಮಗನಿಗೆ ಜೀವ ಬೆದರಿಕೆ ಸಹ ಬಂದಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
Published by:shrikrishna bhat
First published: