ಕೆಪಿಎಲ್ 2018: ರೋಚಕ ಪಂದ್ಯದಲ್ಲಿ ಉತ್ತಪ್ಪ ತಂಡಕ್ಕೆ ಒಲಿದ ಜಯ

news18
Updated:August 25, 2018, 10:05 PM IST
ಕೆಪಿಎಲ್ 2018: ರೋಚಕ ಪಂದ್ಯದಲ್ಲಿ ಉತ್ತಪ್ಪ ತಂಡಕ್ಕೆ ಒಲಿದ ಜಯ
news18
Updated: August 25, 2018, 10:05 PM IST
ನ್ಯೂಸ್ 18 ಕನ್ನಡ

ಮೈಸೂರು (ಆ. 25): ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್​​ನ ಇಂದಿನ ಎರಡನೇ ಪಂದ್ಯದಲ್ಲಿ ರಾಬಿನ್ ಉತ್ತಮ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್​ ತಂಡ 2 ವಿಕೆಟ್​​ಗಳ ರೋಚಕ ಜಯ ಕಂಡಿದೆ. ಶಿವಮೊಗ್ಗ ಲಯನ್ಸ್​​ ನೀಡಿದ ಸುಲಭ ಗುರಿಯನ್ನು ಕಷ್ಟಪಟ್ಟಾದರು ಬೆಂಗಳೂರು ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡ ನಿಗದಿತ 20 ಓವರ್​​ನಲ್ಲಿ 6 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿತು. ಆರಂಭದಲ್ಲೇ ಲಿಯಾನ್ ಖಾನ್ ವಿಕೆಟ್ ಕಳೆದುಕೊಂಡಿತಾದರು 2ನೇ ವಿಕೆಟ್​​ಗೆ ಜೊತೆಯಾದ ನಿಹಾಲ್ ಉಳ್ಳಾಲ್ ಹಾಗೂ ರೋಹಿತ್ ಭರ್ಜರಿ ಜೊತೆಯಾಟ ನೀಡಿದರು. ಈ ಜೋಡಿ 69 ರನ್​​ಗಳ ಕಾಣಿಕೆ ನೀಡಿ 36 ರನ್​​​ ಬಾರಿಸಿ ರೋಹಿತ್ ಔಟ್ ಆದರು. ಇದರ ಬೆನ್ನಲ್ಲೆ ನಿಹಾಲ್ 34 ರನ್​ಗೆ ತಮ್ಮ ಇನ್ನಿಂಗ್ಸ್​ ಕೊನೆ ಗೊಳಿಸಿದರು. ಬಳಿಕ ಕೊನೆ ಹಂತದಲ್ಲಿ ಜೊನಥನ್(37) ಹಾಗೂ ನಾಯಕ ಅನಿರುದ್ಧ್(28) ಒಂದಿಷ್ಟು ರನ್​ ಗಳಿಸಿದ ಪರಿಣಾಮ ಎದುರಾಳಿಗೆ 147 ರನ್​​ಗಳ ಟಾರ್ಗೆಟ್ ನೀಡಿತು. ಬೆಂಗಳೂರು ಪರ ಅರ್ಷದೀಪ್ ಸಿಂಗ್ 2 ವಿಕೆಟ್ ಕಿತ್ತರೆ, ಕೌಶಿಕ್, ಅಭಿಷೇಕ್, ಮನೋಜ್ ಹಾಗೂ ಆನಂದ್ ತಲಾ 1 ವಿಕೆಟ್ ಪಡೆದರು.

147 ರನ್​ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗಿತು. ಈ ಮಧ್ಯೆ ಪವನ್ ದೇಶ್​ಪಾಂಡೆ ಬ್ಯಾಟ್ ಬೀಸಿ​​ ತಂಡಕ್ಕೆ ಚೇತರಿಕೆ ನೀಡಿದರಾದರು 34 ರನ್​ಗೆ ಔಟ್ ಆಗುವ ಮೂಲಕ ತಂಡ ಸೋಲಿನ ಸುಳಿಗೆ ಸಿಲುಕಿತು. ಈ ಸಂದರ್ಭ ಜೊತೆಯಾದ ಭರತ್ ಹಾಗೂ ಅಭಿಷೇಕ್ ಮತ್ತೆ ತಂಡಕ್ಕೆ ಗೆಲುವಿನ ರುಚಿ ನೀಡಿದರು. ಆದರೆ 38 ರನ್ ಗಳಿಸಿ ಭರತ್ ಕೂಡ ಔಟ್ ಆದರು. ಬಳಿಕ ಹೊಡಿಬಡಿ ಆಟಕ್ಕೆ ಮುಂದಾದ ಅಭಿಷೇಕ್ ಕೇವಲ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸ್​​ನೊಂದಿಗೆ ಅಜೇಯ 40 ರನ್ ಸಿಡಿಸಿ ಕೊನೆಯ ಓವರ್​​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಶಿವಮೊಗ್ಗ ಪರ ಆದಿತ್ಯ 3 ವಿಕೆಟ್ ಕಿತ್ತರೆ, ಪೃಥ್ವಿ 2 ವಿಕೆಟ್ ಪಡೆದರು.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626