VIDEO: ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್: ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ ಕಳುಹಿಸಿದ ಖ್ವಾಜಾ

ಉಸ್ಮಾನ್ ಖ್ವಾಜಾ ಗಾಳಿಯಲ್ಲಿ ಹಾರಿ ಹಿಡಿದ ಈ ಅದ್ಭುತ ಕ್ಯಾಚ್ ವೀಡಿಯೊ ಈಗ ಭಾರೀ ವೈರಲ್ ಆಗಿದೆ.

zahir | news18
Updated:December 6, 2018, 9:36 PM IST
VIDEO: ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್: ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ ಕಳುಹಿಸಿದ ಖ್ವಾಜಾ
catch
zahir | news18
Updated: December 6, 2018, 9:36 PM IST
ಅಡಿಲೇಡ್​ನ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಅತ್ಯುತ್ತಮ ಫಾರ್ಮ್​ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೃಹತ್ ಮೊತ್ತ ಪೇರಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಆಸೀಸ್ ತಂಡದ ಯುವ ಆಟಗಾರ ಉಸ್ಮಾನ್ ಖ್ವಾಜಾ ಮಾಡಿದ ಅದ್ಭುತ ಫೀಲ್ಡಿಂಗ್​ನಿಂದ ಕೊಹ್ಲಿ ಬೇಗನೆ ನಿರ್ಗಮಿಸಬೇಕಾಯಿತು.

ಅಮೋಘ ಬ್ಯಾಟಿಂಗ್ ನಿರೀಕ್ಷೆ ಹೊಂದಿದ್ದ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಎಡಗೈ ದಾಂಡಿಗ ಉಸ್ಮಾನ್ ಖ್ವಾಜಾ ಶಾಕ್ ನೀಡಿದ್ದರು. 11 ನೇ ಓವರ್​ನಲ್ಲಿ ಪ್ಯಾಟ್ ಕಮಿನ್ಸ್​ ಎಸೆತವನ್ನು ಕೊಹ್ಲಿ ಕವರ್ ಡ್ರೈವ್ ಮೂಲಕ ಬಾರಿಸುವ ಪ್ರಯತ್ನ ಮಾಡಿದ್ದರು. ಆದರೆ ಬ್ಯಾಟ್​ಗೆ​ ತಗುಲಿದ ಚೆಂಡು ಸೀದಾ ಗಲ್ಲಿಯತ್ತ ಚಿಮ್ಮಿತ್ತು. ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಖ್ವಾಜಾ ಒಂದೇ ಕೈಯಲ್ಲಿ ಹಿಡಿದ ಕ್ಯಾಚಿನಿಂದ ಕೊಹ್ಲಿ ಹೊರ ನಡೆಯಬೇಕಾಯಿತು.ಉಸ್ಮಾನ್ ಖ್ವಾಜಾ ಗಾಳಿಯಲ್ಲಿ ಹಾರಿ ಹಿಡಿದ ಈ ಅದ್ಭುತ ಕ್ಯಾಚ್ ವೀಡಿಯೊ ಈಗ ಭಾರೀ ವೈರಲ್ ಆಗಿದೆ. ಕೊಹ್ಲಿಯನ್ನು ಕೇವಲ 3 ರನ್​ಗೆ ಪೆವಿಲಿಯನ್​ಗೆ ಅಟ್ಟಿದ್ದರಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತವನ್ನು 9 ವಿಕೆಟ್ ನಷ್ಟಕ್ಕೆ 250 ರನ್​ಗೆ ಕಟ್ಟಿ ಹಾಕಲು ಆಸ್ಟ್ರೇಲಿಯನ್ ಬೌಲರ್​ಗಳಿಗೆ ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.
Loading...

ಇದನ್ನೂ ಓದಿ: ಎಚ್ಚರ: ನೀವು ಮೊಬೈಲ್​ನಲ್ಲಿ ಅಶ್ಲೀಲ ವೀಡಿಯೊ ನೋಡುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...