• Home
  • »
  • News
  • »
  • sports
  • »
  • Usain Bolt: ಉಸೇನ್ ಬೋಲ್ಟ್‌ ಖಾತೆಯಿಂದ 100 ಕೋಟಿಗೂ ಹೆಚ್ಚು ಹಣ ಮಂಗಮಾಯ! ಕೆಲವೇ ಕ್ಷಣಗಳಲ್ಲಿ ಬಡವನಾದ ವಿಶ್ವದ ವೇಗದ ವ್ಯಕ್ತಿ!

Usain Bolt: ಉಸೇನ್ ಬೋಲ್ಟ್‌ ಖಾತೆಯಿಂದ 100 ಕೋಟಿಗೂ ಹೆಚ್ಚು ಹಣ ಮಂಗಮಾಯ! ಕೆಲವೇ ಕ್ಷಣಗಳಲ್ಲಿ ಬಡವನಾದ ವಿಶ್ವದ ವೇಗದ ವ್ಯಕ್ತಿ!

ಉಸೇನ್ ಬೋಲ್ಟ್‌

ಉಸೇನ್ ಬೋಲ್ಟ್‌

Usain Bolt: ವಿಶ್ವದ ಅತಿ ವೇಗದ ಮನುಷ್ಯ ಎಂದು ಕರೆಸಿಕೊಳ್ಳುವ ಅಥ್ಲೀಟ್ ಉಸೇನ್ ಬೋಲ್ಟ್ ಅವರ ಹೂಡಿಕೆ ಖಾತೆಯಲ್ಲಿ ಲಕ್ಷಾಂತರ ಡಾಲರ್ ನಷ್ಟ ಅನುಭವಿಸಿದ್ದಾರಂತೆ.

  • Share this:

ವಿಶ್ವದ ಅತ್ಯಂತ ವೇಗದ ಓಟಗಾರ ಮತ್ತು ಅಥ್ಲೆಟಿಕ್ಸ್ ದಿಗ್ಗಜ ಉಸೇನ್ ಬೋಲ್ಟ್ (Usain Bolt) ಅವರ ಹೂಡಿಕೆ ಖಾತೆಯಿಂದ ಲಕ್ಷಾಂತರ ಡಾಲರ್ ನಷ್ಟವಾಗಿದೆ. ಬೋಲ್ಟ್ ಅವರ ಮ್ಯಾನೇಜರ್ ನ್ಯೂಜೆಂಟ್ ವಾಕರ್ ಅವರು ಜಮೈಕಾದ (Jamaica) ಪತ್ರಿಕೆ ಗ್ಲೀನರ್‌ಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಜಮೈಕಾದ ಹಣಕಾಸು ತನಿಖಾ ಇಲಾಖೆ ಮತ್ತು ಹಣಕಾಸು ಸೇವಾ ಆಯೋಗವು ಜಂಟಿಯಾಗಿ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ. ಉಸೇನ್ ಬೋಲ್ಟ್‌ ಅವರಿಂದ ಹಣ ನಾಪತ್ತೆಯಾಗಿರುವ ಖಾತೆಯು ಸ್ಟಾಕ್ಸ್ (Stock) ಮತ್ತು ಸೆಕ್ಯುರಿಟೀಸ್ ಲಿಮಿಟೆಡ್ (SSL) ನಲ್ಲಿದೆ. ಮಾಹಿತಿಯ ಪ್ರಕಾರ, ಈ ಸಂಬಂಧ SSL ಪೊಲೀಸರನ್ನೂ ಸಂಪರ್ಕಿಸಿದೆ. ಬೋಲ್ಟ್ 2012ರಲ್ಲಿ ಜಮೈಕಾದ ಬ್ರೋಕರೇಜ್ ಸಂಸ್ಥೆ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಖಾತೆಯನ್ನು ತೆರೆದು ಹೂಡಿಕೆ ಮಾಡಿದ್ದರು.


ಬೋಲ್ಟ್​ ಕೋಟಿ ಹಣ ನಾಪತ್ತೆ:


ಅಕ್ಟೋಬರ್ 31, 2022ರಂದು ಈ ಖಾತೆಯಿಂದ 2 ಶತಕೋಟಿ ಜಮೈಕಾದ ಡಾಲರ್‌ಗಳು (ಸುಮಾರು ಒಂದು ಮಿಲಿಯನ್ ಯುಎಸ್ ಡಾಲರ್‌) ನಮ್ಮ ಕರೆನ್ಸಿಯಲ್ಲಿ 101 ಕೋಟಿಗಳ ಅಪಾರ ಪ್ರಮಾಣದ ನಗದು ನಾಪತ್ತೆಯ ಹಿಂದೆ ಕಂಪನಿಯ ಸಂಪತ್ತು ಸಲಹೆಗಾರರ ​​ಕೈವಾಡವಿದೆ ಎಂದು ತಿಳಿದುಬಂದಿದೆ. ಇನ್ನು, ಉಸೇನ್ ಬೋಲ್ಟ್ SSL ಕಂಪನಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಹೂಡಿಕೆ ಮಾಡಿದ್ದಾರೆ ಎಂದು ಬೋಲ್ಟ್‌ನ ಮ್ಯಾನೇಜರ್ ನ್ಯೂಜೆಂಟ್ ವಾಕರ್ ಜಮೈಕಾ ಗ್ಲೀನರ್ ಪತ್ರಿಕೆಗೆ ತಿಳಿಸಿದ್ದಾರೆ.


ಅಲ್ಲದೇ 2 ಬಿಲಿಯನ್ ಜಮೈಕಾದ ಡಾಲರ್‌ಗಳನ್ನು ಮರು ಪಾವತಿಸಬೇಕು ಎಂದು SSL ಗೆ 10 ದಿನಗಳ ಗಡುವು ನೀಡಿದೆ. ಹತ್ತು ದಿನದೊಳಗೆ ಹಣ ಹಿಂತಿರುಗಿಸದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಜಮೈಕಾದ ಹಣಕಾಸು ಅಧಿಕಾರಿಗಳು ಈಗ ಬೋಲ್ಟ್‌ನ ಹೂಡಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜಮೈಕಾದ ಹಣಕಾಸು ಸೇವಾ ಆಯೋಗ (ಎಫ್‌ಎಸ್‌ಸಿ) ಕಳೆದ ಗುರುವಾರ ಹೇಳಿಕೆಯಲ್ಲಿ ಎಸ್‌ಎಸ್‌ಎಲ್‌ನಲ್ಲಿ ಸಂಪೂರ್ಣ ಕಣ್ಗಾವಲು ಇರಿಸಿದೆ ಎಂದು ಹೇಳಿದೆ.


ಇದನ್ನೂ ಓದಿ: World Cup 2023: ಏಕದಿನ ವಿಶ್ವಕಪ್​ನಿಂದ ಟೀಂ ಇಂಡಿಯಾದ 9 ಆಟಗಾರರು ಔಟ್​? ಬಿಸಿಸಿಐ ಮಹತ್ವದ ನಿರ್ಧಾರ!


8 ಬಾರಿ ಒಲಿಂಪಿಕ್ ಚಾಂಪಿಯನ್:


ಉಸೇನ್ ಬೋಲ್ಟ್ ವಿಶ್ವದ ಅತ್ಯಂತ ವೇಗದ ಓಟಗಾರ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು 8 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ. ಬೋಲ್ಟ್ ಸಾರ್ವಕಾಲಿಕ ಶ್ರೇಷ್ಠ ಸ್ಪ್ರಿಂಟ್ ಕ್ರೀಡಾಪಟು ಎಂದು ಪರಿಗಣಿಸಲಾಗಿದೆ. ಅವರು 100ಮೀ, 200ಮೀ ಮತ್ತು 4×100ಮೀ ರಿಲೇಯಲ್ಲಿ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. 2009ರ ಬರ್ಲಿನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್‌ ತಲುಪಲು ಬೋಲ್ಟ್ ಕೇವಲ 9.58 ಸೆಕೆಂಡುಗಳನ್ನು ತೆಗೆದುಕೊಂಡರು. ಯಾವುದೇ ಓಟಗಾರನು 100 ಮೀಟರ್‌ಗಳನ್ನು 9.58 ಸೆಕೆಂಡುಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಓಡಲಿಲ್ಲ. ಬೋಲ್ಟ್ ಈಗ 36 ವರ್ಷ ವಯಸ್ಸಿನವರಾಗಿದ್ದು, 2017ರಲ್ಲಿ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ.




SSL ನಲ್ಲಿ ಬಹುಕೋಟಿ ಹಗರಣ:


ಇನ್ನು, ಎಸ್‌ಎಸ್‌ಎಲ್‌ನಲ್ಲಿ ಸಂಪತ್ತಿನ ಸಲಹೆಗಾರರೊಬ್ಬರು 30ಕ್ಕೂ ಹೆಚ್ಚು ಜನರ ಹೂಡಿಕೆಯನ್ನು ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವು ವರದಿಗಳ ಪ್ರಕಾರ SSL ಕಂಪನಿಯು ಆಗಸ್ಟ್‌ನಲ್ಲಿ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆದರೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಜಮೈಕಾದ ಪತ್ರಿಕೆಯ ಪ್ರಕಾರ, ಬೋಲ್ಟ್ ಖಾತೆಯಲ್ಲಿನ ಹಗರಣದಲ್ಲಿ SSL ಉದ್ಯೋಗಿ ಭಾಗಿಯಾಗಿರಬಹುದು ಎನ್ನಲಾಗುತ್ತಿದೆ. ಇದರ ನಡುವೆ ಬೋಲ್ಟ್ ಅವರ ಮ್ಯಾನೇಜರ್ ವಾಕರ್ ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

Published by:shrikrishna bhat
First published: