ಯುಎಸ್ ಓಪನ್: ಇತಿಹಾಸ ಸೃಷ್ಟಿಸಿದ ನವೋಮಿ: ಸೋತ ಸೆರೆನಾ ಪಂದ್ಯದ ಮಧ್ಯೆ ಕಿರಿಕ್

news18
Updated:September 9, 2018, 2:14 PM IST
ಯುಎಸ್ ಓಪನ್: ಇತಿಹಾಸ ಸೃಷ್ಟಿಸಿದ ನವೋಮಿ: ಸೋತ ಸೆರೆನಾ ಪಂದ್ಯದ ಮಧ್ಯೆ ಕಿರಿಕ್
news18
Updated: September 9, 2018, 2:14 PM IST
ನ್ಯೂಸ್ 18 ಕನ್ನಡ

ಯುಎಸ್ ಓಪನ್ ಟೆನಿಸ್ ಮಹಿಳಾ ವಿಭಾಗದ ಸಿಂಗಲ್ಸ್​ನಲ್ಲಿ ಜಪಾನ್​​ನ ನವೋಮಿ ಒಸಾಕಾ ಅವರು ಗೆಲುವು ದಾಖಲಿಸಿ ದಾಖಲೆ ಬರೆದಿದ್ದಾರೆ.

ಫೈನಲ್​​ನಲ್ಲಿ ಅಮೆರಿಕದ ಬಲಿಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-4 ಸೆಟ್​ಗಳಿಂದ ಸೋಲಿಸಿ ಗ್ರ್ಯಾಡ್​​​​ಸ್ಲಾಂ ಸಿಂಗಲ್ಸ್​​ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಜಪಾನಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ. ಇದರೊಂದು ಹಾಲಿ ಚಾಂಪಿಯನ್ ಸೆರೆನಾಗೆ ತವರಿನಲ್ಲೇ ತೀವ್ರ ಮುಖಭಂಗವಾಗಿದೆ.

ಇನ್ನು ಇದೇ ಸಂದರ್ಭ ಸೆನೆರಾ ಹಾಗೂ ರೆಫರಿ ಕಾರ್ಲೋಸ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಸೆರೆನಾಗೆ ಕೋಚ್ ಪ್ಯಾಟ್ರಿಕ್ ಕೈಸನ್ನೆ ಮಾಡಿದ್ದರು. ರ್ಯಾಕೆಟ್​ ಅನ್ನು ಕೋರ್ಟ್​ಗೆ ಬಡಿದ ಕಾರಣಕ್ಕೆ ಸೆರೆನಾ ವಿರುದ್ಧ ಅಂಪೈರ್ ಪೆನಾಲ್ಟಿ ಪಾಯಿಂಟ್ ವಿಧಿಸಿದರು. ಈ ವೇಳೆ ಸೆರೆನಾ ಅವರು ರೆಫರಿ ಕಾರ್ಲೋಸ್ ವಿರುದ್ಧ ಸುಳ್ಳ, ನನ್ನ ಗೆಲುವು ನೀನು ಕಸಿದಿದ್ದಿ ಎಂದು ಬೊಬ್ಬ ಹೊಡೆದಿದ್ದರು. ಅಂತಿಮವಾಗಿ ನವೋಮಿ ಅವರು ಸೆರೆನಾ ಅವರನ್ನು ಸೋಲಿಸಿ ನವೋಮಿ ಅವರು ಟ್ರೋಫಿ ಹಾಗೂ 38 ಲಕ್ಷ ಡಾಲರ್ ಬಹುಮಾನ ಮೊತ್ತ ತಮ್ಮದಾಗಿಸಿದರು.

First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...