• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Novak Djokovic- ಹತಾಶೆ, ಕ್ಷಮೆ, ಅಭಿನಂದನೆ- ಇತಿಹಾಸದ ಹೊಸ್ತಿಲಲ್ಲಿ ಚಾಂಪಿಯನ್ ಆಟಗಾರ ಎಡವಿದ ಕ್ಷಣಗಳು

Novak Djokovic- ಹತಾಶೆ, ಕ್ಷಮೆ, ಅಭಿನಂದನೆ- ಇತಿಹಾಸದ ಹೊಸ್ತಿಲಲ್ಲಿ ಚಾಂಪಿಯನ್ ಆಟಗಾರ ಎಡವಿದ ಕ್ಷಣಗಳು

ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೋವಿಚ್

ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೋವಿಚ್

Frustrated moments in US Open final- ಯುಎಸ್ ಓಪನ್ ಟೆನಿಸ್ ಫೈನಲ್ ಪಂದ್ಯದ ವೇಳೆ ಸೋಲಿನ ಸುಳಿಗೆ ಸಿಕ್ಕಿದ್ದಾಗ ನೊವಾಕ್ ಜೊಕೋವಿಚ್ ಕೈಲಿದ್ದ ಟೆನಿಸ್ ರ್ಯಾಕೆಟನ್ನು ನೆಲಕ್ಕೆ ಬಡಿದು ಹತಾಶೆ ತೋರ್ಪಡಿಸಿದ ಘಟನೆ ನಡೆಯಿತು.

  • News18
  • 4-MIN READ
  • Last Updated :
  • Share this:

ನ್ಯೂಯಾರ್ಕ್, ಸೆ. 13: ಸರ್ಬಿಯಾದ ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೋವಿಚ್ (Novak Djokovic) ಯುಎಸ್ ಓಪನ್ ಟೆನಿಸ್ ಟೂರ್ನಿ (US Open Tennis) ಗೆಲ್ಲಲು ವಿಫಲರಾಗಿದ್ಧಾರೆ. ಇಂದು ಬೆಳಗ್ಗೆ ನಡೆದ ಫೈನಲ್ ಪಂದ್ಯದಲ್ಲಿ 34 ವರ್ಷದ ಜೋಕೋವಿಚ್ 4-6, 4-6, 4-6 ನೇರ ಸೆಟ್​ಗಳಿಂದ ರಷ್ಯಾದ ಡೇನಿಲ್ ಮೆಡ್ವೆಡೆವ್ (Daniil Medvedev of Russia) ವಿರುದ್ಧ ಸೋತರು. ಈ ಮೂಲಕ ವರ್ಷದ ನಾಲ್ಕೂ ಗ್ರ್ಯಾನ್ ಸ್ಲಾಮ್​ಗಳನ್ನ (Grand Slams) ಗೆಲ್ಲುವ ದಶಕಗಳ ಹಿಂದಿನ ಸಾಧನೆಯನ್ನ ಸರಿಗಟ್ಟುವಲ್ಲಿ ವಿಫಲರಾದರು. ಹಾಗೆಯೇ, ಅತೀ ಹೆಚ್ಚು ಗ್ರ್ಯಾನ್ ಸ್ಲಾಮ್ ಟೂರ್ನಿಗಳನ್ನ ಗೆದ್ದ ಆಟಗಾರನೆಂದ ದಾಖಲೆಯಿಂದ ವಂಚಿತರಾಗಿದ್ದಾರೆ. ಜೋಕೋವಿಚ್, ರೋಜರ್ ಫೆಡರರ್ (Roger Federer) ಮತ್ತು ರಾಫೇಲ್ ನಡಾಲ್ (Rafael Nadal) ಈ ಮೂವರು ತಲಾ 20 ಗ್ರ್ಯಾನ್ ಸ್ಲಾಮ್​ಗಳನ್ನ ಗೆದ್ದು ಅಗ್ರಸ್ಥಾನ ಹಂಚಿಕೊಂಡಿದ್ದರೆ. ಇವತ್ತಿನ ಫೈನಲ್ ಗೆದ್ದಿದ್ದರೆ ಜೋಕೋವಿಚ್ ಅವರು ಅತೀ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ಕೀರ್ತಿಗೆ ಬಾಜನರಾಗುತ್ತಿದ್ದರು.


ಫೈನಲ್ ಪಂದ್ಯಕ್ಕೆ ಮುನ್ನ ಸರ್ಬಿಯಾದ ಆಟಗಾರ ತಾನು ಈ ಪಂದ್ಯವನ್ನು ಮಾಡು ಇಲ್ಲ ಮಡಿ ಪಂದ್ಯದಂತೆ ಭಾವಿಸುತ್ತೇನೆ. ಇದು ನನ್ನ ವೃತ್ತಿ ಜೀವನದ ಕೊನೆಯ ಪಂದ್ಯವೆಂಬಂತೆ ಪರಿಗಣಿಸಿ ಗೆಲುವಿಗೆ ಶತಾಯಗತಾಯ ಯತ್ನಿಸುತ್ತೇನೆ ಎಂದು ಹೇಳಿದ್ದರು. ಆದರೆ, 25 ವರ್ಷದ ಡೇನಿಲ್ ಮೆಡ್ವೆಡೆವ್ ಅವರು ಅದ್ಭುತ ಪ್ರದರ್ಶನ ನೀಡಿ ಜೋಕೊವಿಚ್​ಗೆ ಹೆಚ್ಚು ಅವಕಾಶ ನೀಡಲಿಲ್ಲ. ಜೋಕೋವಿಚ್ ಎಷ್ಟು ಹತಾಶಗೊಂಡಿದ್ದರೆಂದು ಎರಡನೇ ಸೆಟ್​​ನಲ್ಲಿ ಅವರು ಪಾಯಿಂಟ್​ವೊಂದನ್ನ ಗಳಿಸಲು ವಿಫಲರಾದ ಕ್ಷಣ ತಮ್ಮ ರ್ಯಾಕೆಟನ್ನು ನೆಲಕ್ಕೆ ಮೂರ್ನಾಲ್ಕು ಬಾರಿ ಬಡಿದು ಹತಾಶೆ (Frustration) ತೋರ್ಪಡಿಸಿದ್ದರು. ಅವರಿಗೆ ಈ ಪಂದ್ಯ ಅತಿ ಮುಖ್ಯವಾಗಿತ್ತು. 34 ವರ್ಷದ ಅವರಿಗೆ ಈ ರೀತಿ ವರ್ಷದ ನಾಲ್ಕೂ ಗ್ರ್ಯಾನ್ ಸ್ಲಾಮ್ ಗೆದ್ದು ಗೋಲ್ಡನ್ ಸ್ಲಾಮ್ ಸಾಧನೆ ಮಾಡುವ ಅವಕಾಶ ಮತ್ತೊಮ್ಮೆ ಒದಗಿ ಬರುವುದು ಬಹಳ ಕಷ್ಟ.



ಇದೇ ವೇಳೆ, ಜೊಕೋವಿಚ್ ಅವರನ್ನ ಮಣಿಸಿದ ಡೇನಿಲ್ ಮೆಡ್ವೆಡೆವ್ ಅವರಿಗೆ ಇದು ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ. ಹಾಗೆಯೇ, ಈ ಸಾಧನೆ ಮಾಡಿದ ಮೂರನೇ ರಷ್ಯನ್ ಪುರುಷ ಆಟಗಾರ. ಯುಎಸ್ ಓಪನ್ ಗೆದ್ದ ಎರಡನೇ ರಷ್ಯನ್ ಪುರುಷ ಆಟಗಾರ. ಯವ್ಜೆನಿ ಕಫೆಲ್ನಿಕೋವ್ ಮತ್ತು ಮರತ್ ಸಾಫಿನ್ ಅವರು ಈ ಹಿಂದೆ ಎರಡೆರಡು ಗ್ರ್ಯಾನ್ ಸ್ಲಾಮ್​ಗಳನ್ನ ಜಯಿಸಿದ್ದರು.


ಇದನ್ನೂ ಓದಿ: Ajay Jadeja| ಟಿ20 ವಿಶ್ವಕಪ್‌ಗೆ ಧೋನಿ ಮೆಂಟರ್‌: ಬಿಸಿಸಿಐ ತೀರ್ಮಾನವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೇ..?


ಕ್ಷಮೆ ಕೋರಿದ ಮೆಡ್ವೆಡೆವ್: ರಷ್ಯಾದ ನೂತನ ಯುಎಸ್ ಓಪನ್ ಚಾಂಪಿಯನ್ ಡೇನಿಲ್ ಮೆಡ್ವೆಡೆವ್ ಅವರು ಪಂದ್ಯದ ಬಳಿಕ ನೊವಾಕ್ ಜೊಕೋವಿಚ್ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿ ಕ್ರೀಡಾಸ್ಫೂರ್ತಿ ಮೆರೆದ ಘಟನೆ ಗಮನ ಸೆಳೆಯಿತು. ಜೊಕೋವಿಚ್ ಇತಿಹಾಸ ನಿರ್ಮಿಸಲು ನಾನು ತಡೆಯಾಗಿ ನಿಂತಿದ್ದಕ್ಕೆ ಕ್ಷಮೆ ಇರಲಿ ಎಂದು ಅವರು ಹೇಳಿದರು. “ನೊವಾಕ್ ಅವರು ಯಾವ ಗುರಿಯೊಂದಿಗೆ ಆಡುತ್ತಿದ್ದರೆಂಬುದು ನಮಗೆಲ್ಲಾ ಗೊತ್ತಿದೆ. ಅವರಿಗೆ ಮತ್ತವರ ಫ್ಯಾನ್ಸ್​ಗೆ ಕ್ಷಮೆ ಕೋರುತ್ತೇನೆ… ನೊವಾಕ್ ನೀವು ನಿಮ್ಮ ವೃತ್ತಿ ಜೀವನದಲ್ಲಿ ಮಾಡಿರುವ ಸಾಧನೆಗೆ ನೀವು ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಟೆನಿಸ್ ಆಟಗಾರನೆಂದು ನಾನು ಭಾವಿಸುತ್ತೇನೆ” ಎಂದು ಡೇನಿಲ್ ಮೆಡ್ವೆಡೆವ್ ತಿಳಿಸಿದರು.


ಇದಕ್ಕೆ ಸ್ಪಂದಿಸಿದ ನೊವಾಕ್ ಜೊಕೋವಿಚ್, ಈ ಸಂದರ್ಭದಲ್ಲಿ ಯಾರಾದರೂ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅರ್ಹತೆ ಹೊಂದಿದ್ದರೆ ಅದು ತಾವೆಯೇ ಎಂದು 25 ವರ್ಷದ ಮೆಡ್ವೆಡೆವ್​ಗೆ ಅಭಿನಂದನೆ ಸಲ್ಲಿಸಿದರು.

top videos
    First published: