Serena Williams: ಟೆನಿಸ್​ ಲೋಕಕ್ಕೆ ವಿದಾಯ ಹೇಳಿದ ಗ್ರ್ಯಾಂಡ್ ಸ್ಲಾಮ್ ರಾಣಿ ಸೆರೆನಾ ವಿಲಿಯಮ್ಸ್

Serena Williams: ಕಳೆದ ಎರಡು ದಶಕಗಳಿಂದ ಟೆನಿಸ್ ಲೋಕವನ್ನು ಆಳಿದ ಅಮೆರಿಕದ ಖ್ಯಾತ ಟೆನ್ನಿಸ್​ ಆಟರ್ಗಾತಿ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಸೆರೆನಾ ವಿಲಿಯಮ್ಸ್

ಸೆರೆನಾ ವಿಲಿಯಮ್ಸ್

  • Share this:
ಕಳೆದ ಎರಡು ದಶಕಗಳಿಂದ ಟೆನಿಸ್ ಲೋಕವನ್ನು ಆಳಿದ ಅಮೆರಿಕದ ಖ್ಯಾತ ಟೆನಿಸ್​ ಆಟರ್ಗಾತಿ ಸೆರೆನಾ ವಿಲಿಯಮ್ಸ್ (Serena Williams) ತಮ್ಮ ವೃತ್ತಿಜೀವನಕ್ಕೆ ವಿದಾಯ (Retirement) ಹೇಳಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವರು  ಮುಂಬರುವ ಯುಎಸ್ ಓಪನ್ ತನ್ನ ಕೊನೆಯ ಗ್ರ್ಯಾಂಡ್ ಸ್ಲಾಮ್ (Grand Slam)  ಪಂದ್ಯವಾಗಿರಲಿದೆ ಎಂದು ಹೇಳಿಕೊಂಡಿದ್ದರು. ಅದರ ಭಾಗವಾಗಿ ಇಂದು ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಹಣಾಹಣಿಯಲ್ಲಿ ಸೆರೆನಾ ವಿಲಿಯಮ್ಸ್ ಅವರು ಆಸ್ಟ್ರೇಲಿಯಾದ ಅಜ್ಲಾ ಟೊಮಿಜಾನೊವಿಚ್ ವಿರುದ್ಧ 7-5, 6-7 , 6-1 ಸೆಟ್‌ಗಳಿಂದ ಸೋತರು. ಮೂರು ಸೆಟ್ ಗಳ ಕಾಲ ನಡೆದ ಈ ಪಂದ್ಯದಲ್ಲಿ ಕೊನೆಯವರೆಗೂ ಸೆಣಸಾಡಿದರೂ ಸೆರೆನಾ ಸೋಲಿನ ಮೂಲಕ ವಿದಾಯ ಹೇಳಬೇಕಾಯಿತು. ನಂತರ ಮಾತನಾಡಿ ತನ್ನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

ಟೆನಿಸ್​ ಲೋಕದ ದಂತಕತೆ ಈ ಸೆರೆನಾ:

ಇನ್ನು, 16ನೇ ವಯಸ್ಸಿನಲ್ಲಿ, ಅಕ್ಕ ವೀನಸ್ ವಿಲಿಯಮ್ಸ್ ಅವರ ಹೆಜ್ಜೆಗಳನ್ನು ಅನುಸರಿಸಿ, ಸೆರೆನಾ ವಿಲಿಯಮ್ಸ್ 1995 ರಲ್ಲಿ ತಮ್ಮ ವೃತ್ತಿಪರ ಟೆನಿಸ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಆರಂಭದಲ್ಲಿ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಆದರೆ 1999 ರಲ್ಲಿ, ಅವರು ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದ ನಂತರ ತಮ್ಮ ಪ್ರಶಸ್ತಿ ಬೇಟೆಯನ್ನು ಪ್ರಾರಂಭಿಸಿದರು. ಅವರು ಈವರೆಗೆ ಒಟ್ಟು 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಮಾರ್ಗರೆಟ್ ಕೋರ್ಟ್ (24) ನಂತರ ಸೆರೆನಾ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ್ತಿಯಾಗಿದ್ದಾರೆ. ಟೆನಿಸ್ ಲೋಕದ ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್ ಅವರು ಸೆರೆನಾಗಿಂತ ಕಡಿಮೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸೆರೆನಾ 2017ರಲ್ಲಿ ಕೊನೆಯ ಗ್ರ್ಯಾನ್‌ಸ್ಲಾಮ್‌ ಗೆದ್ದಿದ್ದರು.





ಸೆರೆನಾ ಅವರ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು:

ವಿಂಬಲ್ಡನ್ - 7
ಆಸ್ಟ್ರೇಲಿಯನ್ ಓಪನ್ - 7
ಅಮೇರಿಕನ್ ಓಪನ್ - 6
ಫ್ರೆಂಚ್ ಓಪನ್ - 3

ಇದನ್ನೂ ಓದಿ: Virat Kohli: ಮಾಸ್ಕ್ ಹಾಕಿಕೊಂಡು ಅಭ್ಯಾಸ ಮಾಡಿದ ಕೊಹ್ಲಿ, ಇದನ್ನು ಯಾಕೆ ಬಳಸುತ್ತಾರೆ ಗೊತ್ತಾ?

ಸೆರೆನಾ ವಿಲಿಯಮ್ಸ್ ಸಾಧನೆ:

ಯುಎಸ್ ಓಪನ್ 2022ರ ನಂತರ ನಿವೃತ್ತಿ ಹೊಂದಲಿರುವ ಅಮೇರಿಕನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ತಮ್ಮ ವೃತ್ತಿಜೀವನದಲ್ಲಿ 73 ಸಿಂಗಲ್ಸ್ ಮತ್ತು 23 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಟೆನಿಸ್ ಅಸೋಸಿಯೇಷನ್ ​​(WTA) ಪ್ರಕಾರ, 1995ರಲ್ಲಿ ವೃತ್ತಿಪರರಾಗಿ ಹೊರಹೊಮ್ಮಿದ 40 ವರ್ಷ ವಯಸ್ಸಿನ ಸೆರೆನಾ ಅವರು ಒಟ್ಟು $94,588,910 ಆಸ್ತಿಯನ್ನು ಹೊಂದಿದ್ದಾರಂತೆ. ಸೆರೆನಾ 23 ಬಾರಿ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿದ್ದಾರೆ. ಅವರು 365 ಗ್ರ್ಯಾಂಡ್ ಸ್ಲಾಮ್ ಪಂದ್ಯಗಳನ್ನು ಗೆದ್ದಿದ್ದಾರೆ.




ನಾಲ್ಕು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು 2012 ರಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು. ಅವರು 2000, 2008 ಮತ್ತು 2012 ರಲ್ಲಿ ಡಬಲ್ಸ್‌ನಲ್ಲಿ ಈ ಸಾಧನೆ ಮಾಡಿದರು. ಸೆರೆನಾ ವಿಲಿಯಮ್ಸ್  ಸೆಪ್ಟೆಂಬರ್ 1, 2017 ರಂದು ಹೆಣ್ಣು ಮಗುವಿಗೆ ಜನ್ಮ ನೀಡದರು. ಅಲ್ಲದೇ ಇದೇ ಸೆಪ್ಟೆಂಬರ್ 26ರಂದು 41ನೇ ವಯಸ್ಸಿಗೆ ಸೆರೆನಾ ಕಾಲಿಡಲಿದ್ದಾರೆ.

ಇದನ್ನೂ ಓದಿ: SRH ತಂಡದಲ್ಲಿ ಮಹತ್ವದ ಬದಲಾವಣೆ, IPL ಪ್ರಾರಂಭಕ್ಕೂ ಮುನ್ನ ಬದಲಾಗ್ತಿದ್ದಾರೆ ಕೋಚ್​

ವಿದಾಯದ ಬಳಿಕ ಭಾವುಕರಾದ ಸೆರೆನಾ:

ಇನ್ನು, ಟೆನಿಸ್​ ಲೋಕಕ್ಕೆ ವಿದಾಯ ಹೇಳಿದ ಸೆರೆನಾ, ‘ನನ್ನ ಟೆನಿಸ್ ವೃತ್ತಿಜೀವನದಲ್ಲಿ ನನ್ನನ್ನು ಹುರಿದುಂಬಿಸಿದ ಪ್ರತಿಯೊಬ್ಬ ನನ್ನ ಅಭಿಮಾನಿಗಳಿ್ಗೂ ನಾನು ಚಿರಋಣಿಯಾಗಿದ್ದೇನೆ. ನಿಮ್ಮೆಲ್ಲರ ಮುಂದೆ ನಾನು ಆಡುತ್ತಿರುವುದಕ್ಕೆ  ಸಂತಸವಿದೆ. ಈ ನನ್ನ ಸಾಧನೆಗೆ ಪೋಷಕರ ಪರಿಶ್ರಮ ಹಾಗೂ ಬೆಂಬಲ ಪ್ರಮುಖ ಕಾರಣ. ಅವರು ನನ್ನೆಲ್ಲ ಯಶಸ್ಸಿನ ನಿಜವಾದ ಸೂತ್ರದಾರಿಗಳು‘ ಎಂದು ಹೇಳಿದ್ದಾರೆ.
Published by:shrikrishna bhat
First published: