US Open 2019: ಫೆಡರರ್​ಗೆ ಸೋಲಿನ ಆಘಾತ; 78ನೇ ರ್ಯಾಂಕ್​ನ ಡಿಮಿಟ್ರೊವ್ ಸೆಮೀಸ್​ಗೆ

ರೋಜರ್ ಫೆಡರರ್  ಹಾಗೂ ಡಿಮಿಟ್ರೊವ್

ರೋಜರ್ ಫೆಡರರ್ ಹಾಗೂ ಡಿಮಿಟ್ರೊವ್

ದಾಖಲೆಯ ಮಟ್ಟದಲ್ಲಿ 20 ಗ್ರ್ಯಾನ್ ಸ್ಲಾಮ್ ಗೆದ್ದ ಸಾಧನೆ ಮಾಡಿರುವ ಫೆಡರರ್‌ 11 ವರ್ಷಗಳ ಬಳಿಕ ಅಮೆರಿಕನ್ ಓಪನ್ ಪ್ರಶಸ್ತಿ ಗೆಲ್ಲುವಲ್ಲಿ ಮತ್ತೆ ವಿಫಲವಾಗಿದ್ದಾರೆ.

  • Share this:

ಬೆಂಗಳೂರು (ಸೆ. 04): ಐದು ಬಾರಿಯ ಚಾಂಪಿಯನ್, ಹಿರಿಯ ಟೆನಿಸ್ ಪಟು ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಎಡವಿ ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್​ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಫೆಡರರ್ ಮೂರನೇ ಶ್ರೇಯಾಂಕಿತ ಫೆಡರರ್ ಅವರು 78ನೇ ರ್ಯಾಂಕಿನ ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್ ವಿರುದ್ಧ 6-3, 4-6, 6-3, 4-6, 2-6 ಸೆಟ್​ಗಳಿಂದ ಸೋತಿದ್ದಾರೆ.

US Open: 'Baby Fed' Grigor Dimitrov Emerges Out of Roger Federer's Shadow, Knocks Him Out in Quarterfinals
ರೋಜರ್ ಫೆಡರರ್


ನಾನು ಅಂಡರ್-19 ವಿಶ್ವಕಪ್ ಗೆದ್ದು 7 ವರ್ಷಗಳು ಕಳೆದಿವೆ..! ಆದರೆ..; ಉನ್ಮುಕ್ತ್​ ಚಂದ್ ಬೇಸರದ ಮಾತು

ದಾಖಲೆಯ ಮಟ್ಟದಲ್ಲಿ 20 ಗ್ರ್ಯಾನ್ ಸ್ಲಾಮ್ ಗೆದ್ದ ಸಾಧನೆ ಮಾಡಿರುವ ಫೆಡರರ್‌ 11 ವರ್ಷಗಳ ಬಳಿಕ ಅಮೆರಿಕನ್ ಓಪನ್ ಪ್ರಶಸ್ತಿ ಗೆಲ್ಲುವಲ್ಲಿ ಮತ್ತೆ ವಿಫಲವಾಗಿದ್ದಾರೆ.

ಇತ್ತ 78ನೇ ರ್ಯಾಂಕಿನ ಆಟಗಾರ ಡಿಮಿಟ್ರೊವ್ 28 ವರ್ಷಗಳ ಬಳಿಕ ಯು.ಎಸ್. ಓಪನ್​ನಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಕೆಳ ರ್ಯಾಂಕಿನ ಆಟಗಾರನಾಗಿದ್ದಾರೆ.

ಶುಕ್ರವಾರ ನಡೆಯಲಿರುವ ಸೆಮಿ ಫೈನಲ್​ನಲ್ಲಿ ಡಿಮಿಟ್ರೊವ್ ರಶ್ಯಾದ ಡೇನಿಲ್ ಮೆಡ್ವೆಡೆವ್ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.

 

First published: