• Home
  • »
  • News
  • »
  • sports
  • »
  • Urvashi-Rishabh: ರಿಷಭ್ ಪಂತ್​ಗೆ ಫ್ಲೈಯಿಂಗ್ ಕಿಸ್ ಮೂಲಕ ವಿಶ್​ ಮಾಡಿದ ಊರ್ವಶಿ, ಇಬ್ಬರು ಗೆಳತಿಯರ ಮುದ್ದಿನ ಹೀರೋ ಎಂದ ನೆಟ್ಟಿಗರು

Urvashi-Rishabh: ರಿಷಭ್ ಪಂತ್​ಗೆ ಫ್ಲೈಯಿಂಗ್ ಕಿಸ್ ಮೂಲಕ ವಿಶ್​ ಮಾಡಿದ ಊರ್ವಶಿ, ಇಬ್ಬರು ಗೆಳತಿಯರ ಮುದ್ದಿನ ಹೀರೋ ಎಂದ ನೆಟ್ಟಿಗರು

ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್

ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್

Urvashi-Rishabh: ಇತ್ತೀಚೆಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ನಡುವೆ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದೇ ರೀತಿ ಇದೀಗ ಮತ್ತೆ ಅವರಿಬ್ಬರ ಸುದ್ದಿ ಮುನ್ನಲೆಗೆ ಬಂದಿದೆ.

  • Share this:

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅವರಿಗೆ 25 ವರ್ಷ ತುಂಬಿದೆ. ಪಂತ್ ಅವರ ಜನ್ಮದಿನದಂದು ಪ್ರಪಂಚದಾದ್ಯಂತ ಗಣ್ಯರು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. ಅಲ್ಲದೇ ಪಂತ್​ ಅವರ ಗೆಳತಿ ಇಶಾ ನೇಗಿ (Isha Negi) ಸಹ ಇನ್ಸ್ಟಾ ಅಲ್ಲಿ ಪೋಸ್ಟ್ ಮಾಡುವ ಮೂಲಕ ವಿಶ್ ಮಾಡಿದ್ದರು. ಆದರೆ ಇದರ ಬಳಿಕ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡ ಅವರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ಊರ್ವಶಿ ರೌಟೇಲಾ (Urvashi Rautela) ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಪಂತ್ ಹೆಸರಿಸದೆ ಅವರಿಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.


ಪಂತ್​ಗೆ ಫ್ಲೈಯಿಂಗ್ ಕಿಸ್ ನೀಡಿ ವಿಶ್ ಮಾಡಿದ ಊರ್ವಶಿ:


ಅಕ್ಟೋಬರ್ 4 ರಂದು (ರಿಷಬ್ ಪಂತ್ ಹುಟ್ಟುಹಬ್ಬ) ಊರ್ವಶಿ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಅವರು ಕೆಂಪು ಬಣ್ಣದ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈ ಸಮಯದಲ್ಲಿ ಅವರು. ಫ್ಲೈಯಿಂಗ್ ಕಿಸ್ ನೀಡುತ್ತಾರೆ. ಅವರು ವೀಡಿಯೊದ ಶೀರ್ಷಿಕೆಯನ್ನು ಬರೆದಿದ್ದಾರೆ, ಜನ್ಮದಿನದ ಶುಭಾಶಯಗಳು. ಅವರು ಯಾರ ಹೆಸರನ್ನೂ ಬರೆದಿಲ್ಲವಾದರೂ ಸಾಮಾಜಿಕ ಜಾಲತಾಣಗಳಲ್ಲಿ ರಿಷಭ್ ಪಂತ್ ಗೆ ಲಿಂಕ್ ಹಾಕಿ ಜನ ನೋಡುತ್ತಿದ್ದಾರೆ.
ಇದಕ್ಕೆ ಅನೇಕ ರೀತಿ ಕಾಮೆಂಟ್​ ಬರುತ್ತಿದ್ದು, ಒಬ್ಬ ಬಳಕೆದಾರರು ಬರೆದಿದ್ದಾರೆ, 'ಹುಟ್ಟುಹಬ್ಬದ ಶುಭಾಶಯಗಳು Mr RP, ನಿಮಗೆ ಅರ್ಥವಾಗಿದೆಯೇ? ದೀದಿ ಈಗ ಏನೂ ಆಗುವುದಿಲ್ಲ’ ಎಂದು ಮತ್ತೊಬ್ಬರು ಬರೆದರು. ಮತ್ತೊಬ್ಬ ಬಳಕೆದಾರರು, ಹಿಂತಿರುಗಿ, ಛೋಟು ಭಯ್ಯಾ ಎಂದು ಬರೆದಿದ್ದಾರೆ. ಅದರಲ್ಲಿಯೂ ಕೆಲವರು ಪಂತ್​ ಅವರಿಗೆ ನಿನ್ನೆ ಇಶಾ ನೇಗಿ ಹ್ಯಾಪಿ ಬರ್ತಡೇ ಮೈ ಲವ್​ ಎಂದು ಪಂತ್​ ಗೆ ವಿಶ್ ಮಾಡಿದ್ದರು. ಹೀಗಾಗಿ ಪಂತ್​ ಗೆ ಇಬ್ಬರು ಗೆಳತಿಯರು. ಇಬ್ಬರ ಮುದ್ದಿನ ಹೀರೋ ಎಂದೆಲ್ಲಾ ಸಖತ್​ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವ್ಯಕ್ತಿಯನ್ನು ಸುಮಾರು 10 ಗಂಟೆಗಳ ಕಾಲ ಹೋಟೆಲ್‌ನಲ್ಲಿ ಕಾಯುವಂತೆ ಮಾಡಿದ್ದೇನೆ ಎಂದು ಊರ್ವಶಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆರ್‌ಪಿ ಪದವನ್ನು ಬಳಸಿದ್ದರು.


ಇದನ್ನೂ ಓದಿ: HBD Rishabh Pant: ಲೈಫ್‌ನ 25ನೇ ಇನ್ನಿಂಗ್ಸ್ ಆರಂಭಿಸಿದ ರಿಷಭ್ ಪಂತ್‌! ಹ್ಯಾಪಿ ಬರ್ತ್‌ ಡೇ ಮೈ ಲವ್ ಅಂತ ವಿಶ್ ಮಾಡಿದ ಪ್ರೇಯಸಿ


ಊರ್ವಶಿ ಏಷ್ಯಾಕಪ್‌ನಲ್ಲಿ ಕಾಣಿಸಿಕೊಂಡಿದ್ದರು:


ಊರ್ವಶಿ ರೌಟೇಲಾ ಕೂಡ ಇತ್ತೀಚೆಗೆ ಏಷ್ಯಾಕಪ್‌ಗಾಗಿ ದುಬೈಗೆ ಹೋಗಿದ್ದರು. ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಅವರು ಕ್ರೀಡಾಂಗಣದೊಳಗೆ ಪಂದ್ಯವನ್ನು ಆನಂದಿಸುತ್ತಿದ್ದರು. ಇಷ್ಟೆಲ್ಲಾ ನಡೆದ ನಂತರ ಊರ್ವಶಿ ಕೂಡ ಕ್ಯಾಮರಾದಲ್ಲಿ ಪಂತ್ ಬಳಿ ಕ್ಷಮೆ ಕೇಳಿದ್ದರು. ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಪಂತ್ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.


ಇದನ್ನೂ ಓದಿ: Cricket News: ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ, ವೈರಲ್​ ಆಯ್ತು ವಿಡಿಯೋ


ಇಶಾ ಹಾಗೂ ರಿಷಭ್ ಪಂತ್ ಜೋಡಿ:


ಟೀ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಇಂದು ತಮ್ಮ 25 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು ಅವರ ಗೆಳತಿ ಇಶಾ ಸುಂದರವಾದ ಹುಟ್ಟುಹಬ್ಬದ ಪೋಸ್ಟ್ ಅನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ರಿಷಭ್ ಪಂತ್ ಫೋಟೋ ಇರುವ ಸ್ಕ್ರೀನ್‌ಶಾಟ್ ಬಳಸಿಕೊಂಡು ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಬರೆದಿರುವ ಶೀರ್ಷಿಕೆಯನ್ನು ಇಶಾ ನೇಗಿ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

Published by:shrikrishna bhat
First published: