ಏಷ್ಯಾ ಕಪ್ 2022ರ (Asia cup 2022) 15ನೇ ಆವೃತ್ತಿಯ 2ನೇ ಪಂದ್ಯದಲ್ಲಿ 10 ತಿಂಗಳಗಳ ನಂತರ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿ ಆದವು. ಹೀಗಾಗಿ ಅಭಿಮಾನಿಗಳಲ್ಲಿ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಾಕ್ ತಂಡವು ನಿಗದಿತ 19.5 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದದ ಟೀಂ ಇಂಡಿಯಾ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ನಲ್ಲಾದ ಸೋಲಿಗೆ ಭಾರತ ತಂಡ ಸೇಡನ್ನು ತೀರಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕವೂ ಸಾಕಷ್ಟು ವಿಚಾರಗಳಿಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.
ಊವರ್ಶಿ ಬಂದಿದ್ದಕ್ಕೆ ಗ್ರೌಂಡ್ಗೆ ಬರಲಿಲ್ವಂತೆ ಪಂತ್!
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಹಸ್ರಾರು ಕ್ರಿಕೆಟ್ ಪ್ರಿಯರು ಸೇರಿಕೊಂಡಿದ್ದರು. ಅಂದಹಾಗೆ ವಿಐಪಿ ಬಾಕ್ಸ್‌ನಲ್ಲಿ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಜೊತೆಗೆ ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಕೂಡ ಹಾಜರಿದ್ದರು. ಆದರೆ, ಊರ್ವಶಿ ರೌಟೇಲಾ ಹಾಗೂ ಪಂತ್ ನಡುವೆ ಕೆಲ ದಿನಗಳಿಂದ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಇಂಥಹ ಸಮಯದಲ್ಲಿ ರೌಟೇಲಾ ಗ್ರೌಂಡ್ನಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಗ್ರೌಂಡ್ನಲ್ಲಿ ಮಿಂಚಿದ ಊವರ್ಶಿ ರೌಟೇಲಾ!
ಕೆಲ ದಿನಗಳ ಹಿಂದಷ್ಟೇ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 24 ವರ್ಷದ ಯುವ ಆಟಗಾರ ತಮ್ಮ ಹಿಂದೆ ಬಿದ್ದೆ ಬಿದ್ದು ಭೇಟಿಯಾಗುವಂತೆ ಗೋಳಿಗೊಂಡಿದ್ದರು. ನಾನು ಉಳಿದುಕೊಂಡಿದ್ದ ರೂಮ್ಗೆ ಬಂದು ಕಾಲ್ ಕೂಡ ಮಾಡಿದ್ದರು ಎಂದು ಹೆಸರಳೇದೆ ಸುದ್ದಿ ವೈರಲ್ ಮಾಡಿದ್ದರು. ಒಂಟಿ ಹುಡುಗಿಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು ಎಂದೆಲ್ಲಾ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ರಿಷಭ್ ಪಂತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ 'ಅಕ್ಕಾ ನನ್ನನ್ನು ಬಿಟ್ಟುಬಿಡು' ಎಂದೆಲ್ಲಾ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ನನ್ನ ಹೆಸರು ಬಳಸಿ ಫೇಮಸ್ ಆಗ್ತಿದ್ದಾರೆ! ಬಾಲಿವುಡ್ ಖ್ಯಾತ ನಟಿ ಹೆಸರು ಹೇಳದೇ ಟಾಂಗ್ ಕೊಟ್ಟ ಪಂತ್!
ಅಕ್ಕ ಬಂದಿದ್ದಕ್ಕೆ ಆಟ ಆಡಲಿಲ್ವಂತೆ ರಿಷಭ್ ಪಂತ್!
ಭಾರತ-ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಊರ್ವಶಿ ಕಂಡು ಅವರ ಅಭಿಮಾನಿಗಳಿಉ ಬೆರಗಾದರು. ಆದರೆ, ದುರದೃಷ್ಟವಶಾತ್ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ರಿಷಭ್ ಪಂತ್ ಸ್ಥಾನ ಪಡೆಯದೇ ಹೋದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಆಯಾಮ ಸಿಕ್ಕಿದೆ. ಅಕ್ಕ ಬಂದಿದ್ದಕ್ಕೆ ರಿಷಭ್ ಪಂತ್ ಟೀಂಗೆ ಆಯ್ಕೆ ಆಗಲಿಲ್ಲ. ಮತ್ತೊಂದು ವಿವಾದ ಸೃಷ್ಠಿಯಾಗುವುದು ಬೇಡ ಅಂತ ರಿಷಭ್ ಅವರೇ ಹೀಗೆ ಮಾಡಿದ್ದಾರಂತ ಸುದ್ದಿಯಾಗುತ್ತಿದೆ.
What a way to get in Trending 🤣😁
Urvashi Rautela Is in Trending and the best part is pant is not even playing eleven.#IndiaVsPakistan #AsiaCup2022 pic.twitter.com/IK6rFJDihH
— Me...03 (@MehVerse) August 28, 2022
ಇದನ್ನೂ ಓದಿ: ನೆಟ್ಟಗೆ ಬ್ಯಾಟ್ ಬಾಲ್ ಜೊತೆ ಆಟವಾಡು, ಖ್ಯಾತ ಕ್ರಿಕೆಟಿಗನಿಗೆ ಬಾಲಿವುಡ್ ನಟಿ ಶಾಕಿಂಗ್ ಕಾಮೆಂಟ್
ಸಿಕ್ಸ್ ಮೂಲಕ ಗೆಲುವಿನ ದಡ ಸೇರಿಸಿದ ಪಾಂಡ್ಯ
ಪಾಕ್ ನೀಡಿದ 147 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಉಂಟಾಯಿತು. ನಸೀಮ್ ಶಾ ಮೊದಲ ಓವರ್ನಲ್ಲಿ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕ್ರಿಸ್ಗೆ ಆಗಮಿಸಿದ ವಿರಾಟ್ ಕೊಹ್ಲಿ 34 ಎಸೆತದಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್ ನೆರವಿನಿಂದ 35 ರನ್ ಗಳಸಿ ಮೊಹಮ್ಮದ್ ನವಾಜ್ ಅವರಿಗೆ ವಿಕೆಟ್ ಒಪ್ಪಿಸಿದರು.
Urvashi Rautela came to stadium just to see Rishabh Pant sitting on the bench.#INDvPAK
— Sunil the Cricketer (@1sInto2s) August 28, 2022
ಇನ್ನು, ನಾಯಕ ರೋಹಿತ್ ಶರ್ಮಾ 18 ಬೌಲ್ ನಲ್ಲಿ 1 ಸಿಕ್ಸ್ ಸಿಡಿಸಿ ಕೇವಲ 12 ರನ್ ಗಳಿಸಿ ಮೊಹಮ್ಮದ್ ನವಾಜ್ ಅವರಿಗೆ ಔಟ್ ಆದರು. ನಸೀಮ್ ಶಾ ಅವರ ಓವರ್ ನಲ್ಲಿ ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ಉಳಿದಂತೆ ರವೀಂದ್ರ ಜಡೇಜಾ 35 ರನ್, ಹಾರ್ದಿಕ್ ಪಾಂಡ್ಯ 33 ರನ್ ಮತ್ತು ದಿನೇಶ್ ಕಾರ್ತಿಕ್ 1 ರನ್ ಗಳಿಸುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ