• Home
  • »
  • News
  • »
  • sports
  • »
  • Rishabh Pant: ಆ್ಯಕ್ಸಿಡೆಂಟ್​ ಆದ್ರೂ ರಿಷಭ್​ ಪಂತ್​​ ಬೆನ್ನು ಬಿಡದ ಊರ್ವಶಿ ರೌಟೇಲಾ! ಹಾಟ್ ​​ಫೋಟೋ ಶೇರ್​ ಮಾಡಿದ್ದಕ್ಕೆ ನೆಟ್ಟಿಗರು ಗರಂ

Rishabh Pant: ಆ್ಯಕ್ಸಿಡೆಂಟ್​ ಆದ್ರೂ ರಿಷಭ್​ ಪಂತ್​​ ಬೆನ್ನು ಬಿಡದ ಊರ್ವಶಿ ರೌಟೇಲಾ! ಹಾಟ್ ​​ಫೋಟೋ ಶೇರ್​ ಮಾಡಿದ್ದಕ್ಕೆ ನೆಟ್ಟಿಗರು ಗರಂ

ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ

ದೇವಕನ್ಯೆಯ ಗೆಟಪ್​ನಲ್ಲಿ ಹಾಟ್​ ಲುಕ್​ ನೀಡುತ್ತಿರೋ ಫೋಟೋವನ್ನು ಊರ್ವಶಿ ಶೇರ್ ಮಾಡಿದ್ದು, ಇದಕ್ಕೆ ಪ್ರಾರ್ಥಿಸುತ್ತಿದ್ದೇನೆ ಎಂದು ಕ್ಯಾಪ್ಶನ್​ ಕೂಡ ಕೊಟ್ಟಿದ್ದಾರೆ.

  • Share this:

ಟೀಂ ಇಂಡಿಯಾ (Team India) ವಿಕೆಟ್​​ ಕೀಪರ್ (Wicket Keeper) ರಿಷಭ್​ ಪಂತ್​​ (Rishabh Pant) ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ, ಪಂತ್​ ಅಪಘಾತದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಪ್ಟಿಕ್​ ಇನ್​​ಸ್ಟಾ ಪೋಸ್ಟ್​ನಲ್ಲಿ ಪಂತ್​ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಈ ಪೋಸ್ಟ್​​ಗೆ ಹಾಟ್​ ಫೋಟೋ ಏಕೆ ಶೇರ್​ ಮಾಡಿದ್ದರೂ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವಕನ್ಯೆಯ ಗೆಟಪ್​ನಲ್ಲಿ ಹಾಟ್​ ಲುಕ್​ ನೀಡುತ್ತಿರೋ ಫೋಟೋವನ್ನು ಊರ್ವಶಿ ಶೇರ್ ಮಾಡಿದ್ದು, ಇದಕ್ಕೆ ಪ್ರಾರ್ಥಿಸುತ್ತಿದ್ದೇನೆ ಎಂದು ಕ್ಯಾಪ್ಶನ್​ ಕೂಡ ಕೊಟ್ಟಿದ್ದಾರೆ.


ರಿಷಭ್ ಪಂತ್ ಅಭಿಮಾನಿಗಳು ಪಾತ್ರ ಊರ್ವಶಿ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಊರ್ವಶಿ, ನಿಜವಾಗಿಯೂ ರಿಷಭ್ ಪಂತ್ ಬಗ್ಗೆ ಅಷ್ಟು ನೋವು ಇದ್ದೀದ್ರೆ, ಆತನ ಫೋಟೋ ಹಾಕಿ ಕಾಮೆಂಟ್ ಮಾಡಿದ್ದರೆ ಚೆನ್ನಾಗಿರೋದು, ಈ ರೀತಿ ಮಾಡಿದ್ದರೇ ಕಷ್ಟಗಳನ್ನು ನೋಡಿ ಆತ ಚೆನ್ನಾಗಿರಬೇಕು ಅಂತ ಆಶಿಸುತ್ತಿದ್ದಾರೆ ಎಂದು ಭಾವಿಸಬಹುದಿತ್ತು ಅಂತ ಪ್ರತಿಕ್ರಿಯೆ ನೀಡುತ್ತಿದ್ದಾರೆ.


ಊರ್ವಶಿ ರೌಟೇಲಾ


ಟಾಲಿವುಡ್​​ಗೆ ಎಂಟ್ರಿ ಕೊಟ್ಟ ಊರ್ವಶಿ


ಯಾರು ಯಾವುದೇ ಸಂದರ್ಭದಲ್ಲಿದ್ದರೂ ಕೂಡ ಪಬ್ಲಿಸಿಟಿ, ಕ್ರೇಜ್​ಗಾಗಿ ಊರ್ವಶಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಮತ್ತೋರ್ವ ಫ್ಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಊರ್ವಶಿ, ಟಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದು, ನಟ ರಾಮ್ ಪೊಥಿನೆನಿ ಅವರ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮೆಗಾಸ್ಟಾರ್ ನಟನೆಯ 'ವಾಲ್ತೆರು ವೀರಯ್ಯ' ಸಿನಿಮಾದ ಒಂದು ಐಟಂ ಸಾಂಗ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Urvashi and Rishabh: ಊರ್ವಶಿ ರೌಟೇಲಾ ಬಗ್ಗೆ ರಿಷಬ್ ಪಂತ್ ಹೀಗೆ ಅನ್ನೋದಾ! ಇನ್‌ಸ್ಟಾಗ್ರಾಮ್‌ನಲ್ಲಿ ಈ ಸ್ಟೋರಿಯನ್ನು ರಿಷಬ್ ಅಳಿಸಿದ್ದಾದ್ರೂ ಯಾಕೆ?


ಈ ಹಿಂದೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಊರ್ವಶಿ, ರಿಷಭ್ ಪಂತ್ ಹೆಸರು ಪ್ರಸ್ತಾಪ ಮಾಡದೆ ಕೆಲ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪಂತ್ ಟಾಂಗ್​ ಕೂಡ ನೀಡಿದ್ದರು. ಇದರೊಂದಿಗೆ ಇಬ್ಬರು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​​ ಆಗಿತ್ತು.


ಏಷ್ಯಾ ಕಪ್​​ಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪಂತ್ ವಿರುದ್ಧ ಹಲವು ಪೋಸ್ಟ್​ಗಳನ್ನು ಊರ್ವಶಿ ಮಾಡಿದ್ದರು. ರಿಷಭ್ ಪಂತ್ ಹೆಸರನ್ನು ಪ್ರಸ್ತಾಪ ಮಾಡದೇ, ಆರ್​ಪಿ ಅಂತ ಹೇಳಿದ್ದರು. ಆತ ತನ್ನನ್ನು ಭೇಟಿ ಮಾಡಲು ಕಾಯುತ್ತಿದ್ದ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಪಂತ್​, ಪ್ರಚಾರಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರಾ? ಎಂದು ಕೌಂಟರ್ ನೀಡಿದ್ದರು.


Team india player rishabh pant car-accident live cctv video
ರಿಷಭ್​ ಪಂತ್​


ಇದಕ್ಕೂ ಕೌಂಟರ್ ಕೊಟ್ಟಿದ್ದ ಊರ್ವಶಿ, ಬ್ಯಾಟ್​-ಬಾಲ್​ ಜೊತೆ ಆಟ ಆಡ್ಬೇಕು, ನಾನೇನು ಚಿಕ್ಕ ಹುಡುಗಿ ಅಲ್ಲ. ಆರ್​​ಪಿ ಚೋಟು ಭಯ್ಯ ರಕ್ಷಾಬಂಧನದ ಶುಭಾಶಯಗಳು. ಮೌನವಾಗಿದ್ದೀನಿ ಅಂತ ಅದನ್ನೇ ಅಡ್ವಂಟೇಜ್​ ತೆಗೆದುಕೊಳ್ಳಬೇಡಿ. ನೀನು ಒಬ್ಬ 'ಕೂಗರ್ ಹಂಟರ್' (ತನಗಿಂತ ಹೆಚ್ಚಿನ ವಯಸ್ಸಿನ ಯುವತಿಯರೊಂದಿಗೆ ದೈಹಿಕ ಸಂಬಂಧ ಬಯಸುವ ವ್ಯಕ್ತಿ). ಜಾಸ್ತಿ ಮಾತನಾಡಿದ್ರೆ ಮನಕಳೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.


ಪ್ರಾಣಾಪಾಯದಿಂದ ಪಾರಾದ ರಿಷಭ್ ಪಂತ್


ಭಾರತದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್​ಗೆ ಇಂದು ಭೀಕರ ಅಪಘಾತ ಆಗಿದ್ದು, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಐಷಾರಾಮಿ ಕಾರು ಬೆಂಕಿಗೆ ಆಹುತಿಯಾಗಿದೆ. ಆದರೆ ಪಂತ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.


ಇದನ್ನೂ ಓದಿ: Rishabh Pant: ರಿಷಭ್​ ಪಂತ್​ ಐಸಿಯುಗೆ ಶಿಫ್ಟ್, ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸಿದ ಕಿಂಗ್​ ಕೊಹ್ಲಿ


ಪಂತ್ ತನ್ನ ತಾಯಿಯನ್ನು ನೋಡಲು ರೂರ್ಕಿಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪಂತ್ ತಲೆ, ಬೆನ್ನು ಮತ್ತು ಕಾಲಿಗೆ ಗಾಯಗಳಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಮುಂಜಾನೆ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿತ್ತು.

Published by:Sumanth SN
First published: