ಫಿಫಾ ವಿಶ್ವಕಪ್ 2018: ತವರಿನಲ್ಲೆ ಉರುಗ್ವೆ ವಿರುದ್ಧ ಹೀನಾಯ ಸೋಲುಕಂಡ ರಷ್ಯಾ

news18
Updated:June 25, 2018, 10:13 PM IST
ಫಿಫಾ ವಿಶ್ವಕಪ್ 2018: ತವರಿನಲ್ಲೆ ಉರುಗ್ವೆ ವಿರುದ್ಧ ಹೀನಾಯ ಸೋಲುಕಂಡ ರಷ್ಯಾ
news18
Updated: June 25, 2018, 10:13 PM IST
ನ್ಯೂಸ್ 18 ಕನ್ನಡ

ಮಾಸ್ಕೋ (ಜೂ. 25): 21ನೇ ಫಿಫಾ ವಿಶ್ವಕಪ್​ನ ಪ್ರಮುಖ ಪಂದ್ಯದಲ್ಲಿ ಉರುಗ್ವೆ ತಂಡ ರಷ್ಯಾ ಎದುರು 3-0 ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲೆ ರಷ್ಯಾ ತಂಡಕ್ಕೆ ಆಘಾತವಾಗಿದೆ.

ಉರುಗ್ವೆ ತಂಡದ ಲೂಯಿಸ್ ಸ್ವಾರೆಜ್ ಅವರು ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸಿ ತಂಡದ ಖಾತೆ ತೆರೆದರು. ಬಳಿಕ 23ನೇ ನಿಮಿಷದಲ್ಲಿ ಡೆನಿಸ್ ಚೆರಿಶೆವ್ ಅವರು ಎರಡನೇ ಗೊಲು ಬಾರಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಇನ್ನು ದ್ವಿತೀಯಾರ್ಧದ ಕೊನೆ ಕ್ಷಣದಲ್ಲಿ(90ನೇ ನಿಮಿಷದಲ್ಲಿ) ಎಡಿಸನ್ ಕವಾನಿ ಅವರು ಮತ್ತೊಂದು ಗೋಲು ಸಿಡಿಸಿ ತಂಡದ ಗೆಲುವನ್ನು ಖಚಿತ ಪಡಿಸಿದರು.

 
ಈ ಮೂಲಕ ಉರುಗ್ವೆ ತಂಡ 3-0 ಅಂತರದಿಂದ ಗೆಲುವು ಸಾಧಿಸಿದರೆ, ರಷ್ಯಾದ ಹೀನಾಯ ಸೋಲು ಅಭಿಮಾನಿಗಳಿಗೆ  ನಿರಾಸೆ ಮೂಡಿಸಿತು.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...