• Home
  • »
  • News
  • »
  • sports
  • »
  • FIFA World Cup 2022: ಕತಾರ್‌ಗೆ 2000 ಪೌಂಡ್‌ ಮಾಂಸ ಕಳುಹಿಸಿದ ಉರುಗ್ವೆ, ಅರ್ಜೆಂಟೀನಾ ತಂಡದ ಅಧಿಕಾರಿಗಳು

FIFA World Cup 2022: ಕತಾರ್‌ಗೆ 2000 ಪೌಂಡ್‌ ಮಾಂಸ ಕಳುಹಿಸಿದ ಉರುಗ್ವೆ, ಅರ್ಜೆಂಟೀನಾ ತಂಡದ ಅಧಿಕಾರಿಗಳು

FIFA World Cup: ಅರ್ಜೆಂಟೀನಾ ಮತ್ತು ಉರುಗ್ವೆ ದೇಶಗಳು ತಮ್ಮ ಆಟಗಾರರನ್ನು ಲವಲವಿಕೆಯಿಂದ ಇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದು ಆಟಗಾರರ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಅರ್ಜೆಂಟೀನಾ ಹಾಗೂ ಉರುಗ್ವೆಯ ಅಧಿಕಾರಿಗಳು ಕತಾರ್‌ಗೆ 2,000 ಪೌಂಡ್‌ಗಳ ಮಾಂಸವನ್ನು ತಂದಿದ್ದು ಆಟಗಾರರು ಮನೆಯೂಟವನ್ನು ಸೇವಿಸುವುದನ್ನು ತಪ್ಪಿಸಿಕೊಂಡಿಲ್ಲ ಎಂಬುದಕ್ಕೆ ಇದು ದೃಷ್ಟಾಂತವಾಗಿದೆ.

FIFA World Cup: ಅರ್ಜೆಂಟೀನಾ ಮತ್ತು ಉರುಗ್ವೆ ದೇಶಗಳು ತಮ್ಮ ಆಟಗಾರರನ್ನು ಲವಲವಿಕೆಯಿಂದ ಇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದು ಆಟಗಾರರ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಅರ್ಜೆಂಟೀನಾ ಹಾಗೂ ಉರುಗ್ವೆಯ ಅಧಿಕಾರಿಗಳು ಕತಾರ್‌ಗೆ 2,000 ಪೌಂಡ್‌ಗಳ ಮಾಂಸವನ್ನು ತಂದಿದ್ದು ಆಟಗಾರರು ಮನೆಯೂಟವನ್ನು ಸೇವಿಸುವುದನ್ನು ತಪ್ಪಿಸಿಕೊಂಡಿಲ್ಲ ಎಂಬುದಕ್ಕೆ ಇದು ದೃಷ್ಟಾಂತವಾಗಿದೆ.

FIFA World Cup: ಅರ್ಜೆಂಟೀನಾ ಮತ್ತು ಉರುಗ್ವೆ ದೇಶಗಳು ತಮ್ಮ ಆಟಗಾರರನ್ನು ಲವಲವಿಕೆಯಿಂದ ಇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದು ಆಟಗಾರರ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಅರ್ಜೆಂಟೀನಾ ಹಾಗೂ ಉರುಗ್ವೆಯ ಅಧಿಕಾರಿಗಳು ಕತಾರ್‌ಗೆ 2,000 ಪೌಂಡ್‌ಗಳ ಮಾಂಸವನ್ನು ತಂದಿದ್ದು ಆಟಗಾರರು ಮನೆಯೂಟವನ್ನು ಸೇವಿಸುವುದನ್ನು ತಪ್ಪಿಸಿಕೊಂಡಿಲ್ಲ ಎಂಬುದಕ್ಕೆ ಇದು ದೃಷ್ಟಾಂತವಾಗಿದೆ.

ಮುಂದೆ ಓದಿ ...
  • Share this:

    ಫಿಫಾ ವಿಶ್ವಕಪ್ (FIFA World Cup 2022) ಸಮೀಪಿಸುತ್ತಿದೆ ಹಾಗೂ ಪಂದ್ಯಾವಳಿಗೆ ಅರ್ಹತೆ ಪಡೆದ ದೇಶಗಳು ಉತ್ತಮ ಪ್ರದರ್ಶನ ತೋರುವ ಸನ್ನಾಹದಲ್ಲಿ ಸಜ್ಜುಗೊಳ್ಳುತ್ತಿವೆ. ಸ್ಪರ್ಧೆಗಾಗಿ ತಂತ್ರಗಳನ್ನು ರೂಪಿಸುವಲ್ಲಿ ತಂಡಗಳು ಕಾರ್ಯತತ್ಪರರಾಗಿದ್ದರೆ ಅರ್ಜೆಂಟೀನಾ (Argentina) ಮತ್ತು ಉರುಗ್ವೆ (Uruguay) ದೇಶಗಳು ತಮ್ಮ ಆಟಗಾರರನ್ನು ಲವಲವಿಕೆಯಿಂದ ಇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದು ಆಟಗಾರರ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಅರ್ಜೆಂಟೀನಾ ಹಾಗೂ ಉರುಗ್ವೆಯ ಅಧಿಕಾರಿಗಳು ಕತಾರ್‌ಗೆ (Qatar) 2,000 ಪೌಂಡ್‌ಗಳ ಮಾಂಸವನ್ನು ತಂದಿದ್ದು ಆಟಗಾರರು ಮನೆಯೂಟವನ್ನೇ ಸವಿಯುವಂತೆ ಮಾಡಿದ್ದಾರೆ.


    ಉರುಗ್ವೆಯ ಮಾಂಸ ವಿಶ್ವದಲ್ಲೇ ಶ್ರೇಷ್ಟ ಮಾಂಸ


    32 ದೇಶಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿವೆ. ಉರುಗ್ವೆಯ ಫುಟ್ಬಾಲ್ ಅಸೋಸಿಯೇಷನ್ (AUF) ಅಧ್ಯಕ್ಷ ಇಗ್ನಾಸಿಯೊ ಅಲೋನ್ಸೊ ತಂಡಕ್ಕಾಗಿ ರೂಪಿಸಿಕೊಂಡಿರುವ ಅಸಾಮಾನ್ಯ ಯೋಜನೆಯನ್ನು ಬಹಿರಂಗಪಡಿಸಿದ್ದು, ರಾಷ್ಟ್ರೀಯ ತಂಡಕ್ಕೆ ಸೂಕ್ತ ಪೋಷಣೆಯನ್ನು ಒದಗಿಸಲು ದೇಶವು ಕಂಕಣಬದ್ಧವಾಗಿದೆ AUF ನಮ್ಮ ದೇಶದ ಐತಿಹಾಸಿಕ ರಾಯಭಾರಿಯಾಗಿದೆ ಈಗ ಈ ಸಾಲಿಗೆ ವಿಶ್ವದಲ್ಲಿಯೇ ಅತ್ಯಂತ ಉನ್ನತ ಮಾಂಸವಾದ ಉರುಗ್ವೆಯ ಮಾಂಸ ಮತ್ತೊಂದು ರಾಯಭಾರಿಯನ್ನು ತನ್ನೊಂದಿಗೆ ತಂದಿದೆ ಎಂದು ತಿಳಿಸಿದ್ದಾರೆ. ಈ ವರ್ಷ ಫಿಫಾ ಪ್ರಶಸ್ತಿಯನ್ನು ತವರಿಗೆ ಕೊಂಡೊಯ್ಯುವ ಸನ್ನಾಹದಲ್ಲಿರುವ ಉರುಗ್ವೆ ಆಟಗಾರರು ಈ ವಿಷಯದಲ್ಲಿ ಗಂಭೀರವಾಗಿದ್ದು ತಮ್ಮ ಎಲ್ಲಾ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ತುತ್ತು ಅನ್ನ ಕೊಟ್ಟವ ಸತ್ತು ಮಲಗಿದಾಗ ಮರುಗಿದ ಮಂಗ! ಶವದ ಮುಂದೆ ಕೋತಿ ಗೋಳಾಟ


    ವೃತ್ತಿಜೀವನದ ಕೊನೆಯ ವಿಶ್ವಕಪ್ ಎಂದು ಘೋಷಿಸಿರುವ ಮೆಸ್ಸಿ


    ಪ್ರಪಂಚದಾದ್ಯಂತ ಜನಪ್ರಿಯತೆ ಪಡೆದುಕೊಂಡಿರುವ ದಕ್ಷಿಣ ಅಮೆರಿಕಾದ ರಾಷ್ಟ್ರಗಳು ಗುಣಮಟ್ಟದ ಮಾಂಸಕ್ಕಾಗಿ ಪ್ರಸಿದ್ಧಗೊಂಡಿವೆ. ವಿಶ್ವದ ಮಾಂಸದ ಅತಿದೊಡ್ಡ ಗ್ರಾಹಕರಲ್ಲಿ ಒಂದು ಎಂದೆನಿಸಿದೆ. ಅರ್ಜೆಂಟೀನಾ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿದೆ ಮತ್ತು ಈ ವರ್ಷದ ವಿಶ್ವಕಪ್ ಟ್ರೋಫಿ ಗೆಲ್ಲುವ ಮೆಚ್ಚಿನವುಗಳಲ್ಲಿ ಒಂದಾಗಿ ಸ್ಪರ್ಧೆಯನ್ನು ಪ್ರವೇಶಿಸಿದೆ. 35 ರ ಹರೆಯದ ಮೆಸ್ಸಿ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಇದಾಗಿದೆ ಎಂದು ಸಂದರ್ಶನವೊಂದರಲ್ಲಿ ಘೋಷಿಸಿದ್ದಾರೆ ಹಾಗೂ ಪಂದ್ಯಾವಳಿಯ ನಂತರ ಶೀಘ್ರದಲ್ಲೇ ಫುಟ್ಬಾಲ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ.


    ಆಟಗಾರರ ಉತ್ಸಾಹ ಬತ್ತದಂತೆ ನೋಡಿಕೊಳ್ಳುತ್ತಿರುವ ಉರುಗ್ವೆ


    ಉರುಗ್ವೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೀಟ್ (ಐಎನ್‌ಎಸಿ) ಅಧ್ಯಕ್ಷ ಕಾನ್ರಾಡೊ ಫೆರ್ಬರ್ ಮತ್ತು ತಂಡವು ತಮ್ಮ ಆಟಗಾರರಿಗೆ ಉತ್ತಮ ಮಾಂಸವನ್ನು ಒದಗಿಸುವ ಹಾಗೂ ಅವರ ಆಟದ ಉತ್ಸಾಹವನ್ನು ಬತ್ತದಂತೆ ಮೇಲ್ವಿಚಾರಣೆ ಮಾಡುವ ಎಲ್ಲಾ ಅವಕಾಶವನ್ನು ಬಳಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಆಟಗಾರರಿಗೆ ನೀಡುವ ಮಾಂಸದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದು, ನೈಸರ್ಗಿಕ ಹಾಗೂ ಸಮರ್ಥನೀಯವಾಗಿ ಉತ್ಪನ್ನ ಇದಾಗಿದೆ ಎಂದು ಹೇಳಿದ್ದಾರೆ. ನಮ್ಮ ಆಟಗಾರರಿಗೆ ವಿಶ್ವಕಪ್ ಈ ಅಂಶವನ್ನು ಪ್ರತಿಪಾದಿಸಲು ಸೂಕ್ತಸಮಯವಾಗಿದೆ ಎಂದು ಫೆರ್ಬರ್ ತಿಳಿಸಿದ್ದಾರೆ.




    ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್


    ಮಾಂಸಾಹಾರದ ಮಹತ್ವವನ್ನು ಅರ್ಜೆಂಟೀನಾದ ಮುಖ್ಯ ತರಬೇತುದಾರ ಲಿಯೋನೆಲ್ ಸ್ಕಾಲೋನಿ ಒತ್ತಿಹೇಳಿದ್ದು, ನನ್ನ ಮೆಚ್ಚಿನ ಆಹಾರ ಅಸಡೊ, ಆದರೆ ಈ ಖಾದ್ಯ ಅದಕ್ಕಿಂತ ಉತ್ತಮವಾಗಿದೆ. ಈ ಆಹಾರ ಅರ್ಜೆಂಟೀನಾದ ಸಂಸ್ಕೃತಿಯ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಊಟದ ಸಮಯದಲ್ಲೇ ನಾವೆಲ್ಲಾ ಆಟಗಾರರು ಪರಸ್ಪರ ಮನಬಿಚ್ಚಿ ಹರಟೆ ಹೊಡೆಯುತ್ತೇವೆ, ವಿಶ್ರಾಂತಿ ಪಡೆಯುತ್ತೇವೆ ಹಾಗೂ ಒಡನಾಟವನ್ನು ಹೊಂದಲು ಬಯಸುತ್ತೇವೆ. ಒಟ್ಟಿನಲ್ಲಿ ಭೋಜನದ ಸಮಯವನ್ನು ನಾವು ಆನಂದಿಸುತ್ತೇವೆ ಎಂದು ಹೇಳಿದ್ದಾರೆ. ಸಮೂಹದ ಭಾಗವಾಗಿದೆ ಹಾಗೂ ಉತ್ತಮ ಒಡನಾಟವನ್ನು ರಚಿಸುತ್ತದೆ ಎಂದು ಸ್ಕಾಲೋನಿ ತಿಳಿಸಿದ್ದಾರೆ.


    ಇದನ್ನೂ ಓದಿ: ಪ್ರೇಯಸಿಗೆ ವಿಮಾನದಲ್ಲಿ ಪ್ರಪೋಸ್ ಮಾಡಿದ ಪ್ರಿಯಕರ!


    ಕತಾರ್ ವಿಶ್ವಕಪ್‌ನಲ್ಲಿ ಫುಟ್‌ಬಾಲ್‌ನ ಅದ್ಭುತ ಪ್ರದರ್ಶನಗಳನ್ನು, ಕೈಚಳಕಗಳನ್ನು ಪ್ರದರ್ಶಿಸಲು ಎರಡೂ ರಾಷ್ಟ್ರಗಳು ತಮ್ಮ ಕೈಲಾದಷ್ಟು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ನವೆಂಬರ್ 22 ರಂದು ಸೌದಿ ಅರೇಬಿಯಾ ವಿರುದ್ಧ ತಮ್ಮ ಪಂದ್ಯಾವಳಿಯನ್ನು ಪ್ರಾರಂಭಿಸಲಿದ್ದು, ಲೂಯಿಸ್ ಸೌರೆಜ್ ಮತ್ತು ಉರುಗ್ವೆ ನವೆಂಬರ್ 24 ರಂದು ದಕ್ಷಿಣ ಕೊರಿಯಾ ವಿರುದ್ಧ ಸೆಣಸಲಿದ್ದಾರೆ.

    Published by:Precilla Olivia Dias
    First published: