ಏಷ್ಯನ್ ಕಪ್: ಇಂದು ಭಾರತ-ಯುಎಇ ಸೆಣೆಸಾಟ: ಛೇಟ್ರಿ ಬಳಗಕ್ಕೆ ಮತ್ತೊಂದು ಕಠಿಣ ಸವಾಲು

ಏಷ್ಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಓಮರ್ ಅಬ್ದುಲ್​​ರೆಹ್ಮಾನ್ ಗಾಯಗೊಂಡಿದ್ದು, ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಸುನಿಲ್ ಛೇಟ್ರಿ ಲಯಕ್ಕೆ ಮರಳಿದ್ದು, ತಂಡಕ್ಕೆ ಆನೆಬಲ ಬಂದಂತಾಗಿದೆ.

Vinay Bhat | news18
Updated:January 10, 2019, 10:32 AM IST
ಏಷ್ಯನ್ ಕಪ್: ಇಂದು ಭಾರತ-ಯುಎಇ ಸೆಣೆಸಾಟ: ಛೇಟ್ರಿ ಬಳಗಕ್ಕೆ ಮತ್ತೊಂದು ಕಠಿಣ ಸವಾಲು
Image: Twitter
Vinay Bhat | news18
Updated: January 10, 2019, 10:32 AM IST
ಅಬು ಧಾಬಿ (ಜ. 10): ಮೊದಲ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ವಿರುದ್ಧ 4-1 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಭಾರತ ತಂಡ ಎಎಫ್​​ಸಿ ಏಷ್ಯಾಕಪ್​​​ ಫುಟ್ಬಾಲ್​​ ಚಾಂಪಿಯನ್​​ಶಿಪ್​​ನಲ್ಲಿ ಇಂದು ಆತಿಥೇಯ ಯುಎಇ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.

ಇಲ್ಲಿನ ಜಾಯೇದ್ ಸ್ಪೋರ್ಟ್ಸ್​​​ ಸಿಟಿಯಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಇಂದಿನ ಪಂದ್ಯ ಗೆದ್ದರೆ ಭಾರತದ ಕ್ವಾರ್ಟರ್​ ಫೈನಲ್ ಹಾದಿ ಸುಗಮವಾಗಲಿದೆ. 2015ರಲ್ಲಿ 24ನೇ ಸ್ಥಾನದಲ್ಲಿದ್ದ ಯುಎಇ ಸದ್ಯ 79ನೇ ಯ್ಯಾಂಕಿಂಗ್​​​​​​ಗೆ ಇಳಿದುಬಿಟ್ಟಿದೆ. ಅಂತೆಯೆ ಭಾರತ 97ನೇ ಸ್ಥಾನದಲ್ಲಿದೆ.

ಏಷ್ಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಓಮರ್ ಅಬ್ದುಲ್​​ರೆಹ್ಮಾನ್ ಗಾಯಗೊಂಡಿದ್ದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಸುನಿಲ್ ಛೇಟ್ರಿ ಲಯಕ್ಕೆ ಮರಳಿದ್ದು, ತಂಡಕ್ಕೆ ಆನೆಬಲ ಬಂದಂತಾಗಿದೆ. ಇವರ ಜೊತೆ ಅನಿರುದ್ಧ ಥಾಪ, ಜೆಜೆ ಲಾಲ್​ ಫೆಕ್ಲುವಾ ಹಾಗೂ ಆಶಿಶ್ ಕುರುಣಿಯನ್ ಉತ್ತಮ ಲಯದಲ್ಲಿದ್ದಾರೆ.

ಇದನ್ನೂ ಓದಿ: ಆಸೀಸ್​ ನಾಯಕ ಆಯ್ತು ಈಗ ರೋಹಿತ್ ಸರದಿ: ಪಂತ್​​ರನ್ನು 'ಬೇಬಿ ಸಿಟ್ಟರ್​' ಎಂದ ಹಿಟ್​ಮ್ಯಾನ್

ಛೇಟ್ರಿ ಪ್ರಮುಖ ಆಕರ್ಷಣೆ:

ಭಾನುವಾರ ಅಬುಧಾಬಿಯಲ್ಲಿ ನಡೆದ ಥಾಯ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಛೇಟ್ರಿ ಎರಡು ಗೋಲುಗಳನ್ನು ಬಾರಿಸಿದ್ದರು. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ 65 ಗೋಲು ದಾಖಲಿಸಿದ್ದ ಮೆಸ್ಸಿಯ ದಾಖಲೆಯನ್ನು ಹಿಂದಿಕ್ಕಿ ವಿಶ್ವದ ಗೋಲಿನ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಏಷ್ಯನ್ ಕಪ್​ ಮೊದಲ ಪಂದ್ಯದಲ್ಲೇ  ಭಾರತ ತಂಡ ನಾಯಕ ಸುನಿಲ್ ಚೆಟ್ರಿ ಮಿಂಚಿನ ಸಂಚಲನ ಮೂಡಿಸಿದ್ದರು.

ಇದನ್ನೂ ಓದಿ: ಫುಟ್​ಬಾಲ್​ ದಂತಕಥೆ ಮೆಸ್ಸಿಯ ದಾಖಲೆ ಉಡೀಸ್: ಈಗ ಸುನೀಲ್ ಚೆಟ್ರಿ ವಿಶ್ವದ ಸ್ಟಾರ್ ಆಟಗಾರ
Loading...

ಒಟ್ಟಾರೆ ಯುವ ಆಟಗಾರರನ್ನೆ ಹೆಚ್ಚು ಹೊಂದಿರುವ ಭಾರತ ತಂಡ ಬಲಿಷ್ಠ ಯುಎಇ ವಿರುದ್ಧ ಯಾವರೀತಿ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ