'360 ಡಿಗ್ರಿಯಲ್ಲಿ ಬೌಲಿಂಗ್': ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದ ಭಾರತೀಯ ಬೌಲರ್​

Vinay Bhat | news18
Updated:November 8, 2018, 4:01 PM IST
'360 ಡಿಗ್ರಿಯಲ್ಲಿ ಬೌಲಿಂಗ್': ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದ ಭಾರತೀಯ ಬೌಲರ್​
Vinay Bhat | news18
Updated: November 8, 2018, 4:01 PM IST
ನ್ಯೂಸ್ 18 ಕನ್ನಡ

ಕ್ರಿಕೆಟ್ ಜಗತ್ತಿನಲ್ಲಿ ಬೌಲರ್​ಗಳು ತಮ್ಮದೆ ಆದ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಅನೇಕರ ಗಮನ ಗೆದ್ದವರಿದ್ದಾರೆ ಜೊತೆಗೆ ಎದುರಾಳಿಗೆ ಕಂಟಕವಾದವರೂ ಇದ್ದಾರೆ. ಉದಾಹರಣೆಗೆ ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್​​ಪ್ರೀತ್ ಬುಮ್ರಾ, ಶ್ರೀಲಂಕಾದ ಲಸಿತ್ ಮಲಿಂಗಾ, ದಕ್ಷಿಣಾ ಆಫ್ರಿಕಾದ ಪೌಲ್ ಆಡಮ್ಸ್ ಸೇರಿದಂತೆ ಅನೇಕರು ವಿಶಿಷ್ಠ ರೀತಿಯಲ್ಲಿ ಬೌಲಿಂಗ್ ಮಾಡುವುದನ್ನು ನೋಡಿರುತ್ತೇವೆ. ಆದರೆ, ಇಲ್ಲಬ್ಬರು 360 ಡಿಗ್ರಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.

ಅಂಡರ್-23ಯ ಕಲ್ನಲ್ ಸಿಕೆ ನಾಯ್ಡು ಟ್ರೋಫಿಯ ಉತ್ತರ ಪ್ರದೇಶ ಹಾಗೂ ಬೆಂಗಾಲ್ ನಡುವಣ ಪಂದ್ಯದ ವೇಳೆ ಘಟನೆ ನಡೆದಿದೆ. ಉ. ಪ್ರದೇಶ ತಂಡದ ಬಲಗೈ ಸ್ಪಿನ್ನರ್ ಶಿವ ಸಿಂಗ್ ಎಂಬವರು 360 ಡಿಗ್ರಿಯಲ್ಲಿ ಬೌಲಿಂಗ್ ಮಾಡಿದವರಾಗಿದ್ದಾರೆ. ಶಿವ ಅವರು ಮೊದಲಿಗೆ ಬೌಲಿಂಗ್ ಮಾಡಲು ಎರಡು ಹೆಜ್ಜೆ ಮುಂದೆ ಹೋಗಿ ಒಂದು ಸುತ್ತು ಹಾಕಿ ತಕ್ಷಣವೇ ಬಾಲ್ ರಿಲೀಸ್ ಮಾಡುತ್ತಾರೆ. ಇವರ ಬೌಲಿಂಗ್ ಶೈಲಿಯನ್ನು ನೋಡಿದ ಅಂಪೈರ್ ವಿನೋದ್ ಸೇಶನ್ ಅವರು ಒಮ್ಮೆ ಕಕ್ಕಾಬಿಕ್ಕಿಯಾಗಿ, ಡೆಡ್ ಬಾಲ್ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ದಯವಿಟ್ಟು ಕ್ರೀಡಾಂಗಣಕ್ಕೆ ಬನ್ನಿ, ನಮ್ಮ ಆಟ ಪ್ರೋತ್ಸಾಹಿಸಿ: ಭಾರತ ಹಾಕಿ ತಂಡದ ನಾಯಕನ ಮನವಿ

 ಇದಕ್ಕೂ ಮುನ್ನ ಕಳೆದ ಅಂಡರ್-19 ವಿಶ್ವಕಪ್​​ನಲ್ಲೂ ಶಿವ ಸಿಂಗ್ ಅವರು ಇದೇ ರೀತಿ ಬೌಲಿಂಗ್ ಮಾಡಿದ್ದು ಎದುರಾಳಿಗರು ಗೊಂದಲಕ್ಕೀಡಾಗಿದ್ದರು. ಬಳಿಕ ಅಂಪೈರ್​ಗಳು ಮಾತುಕತೆ ನಡೆಸಿ ಈ ಬೌಲಿಂಗ್ ಹಿಂದಿನ ಕಾರಣವನ್ನು ತಿಳಿಹೇಳಿದ್ದರು.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ