ಆಂಗ್ಲರ 9 ವಿಕೆಟ್ ಪತನ: ಗೆಲುವಿನ ಹೊಸ್ತಿಲಲ್ಲಿ ಕೊಹ್ಲಿ ಪಡೆ

news18
Updated:August 21, 2018, 11:12 PM IST
ಆಂಗ್ಲರ 9 ವಿಕೆಟ್ ಪತನ: ಗೆಲುವಿನ ಹೊಸ್ತಿಲಲ್ಲಿ ಕೊಹ್ಲಿ ಪಡೆ
news18
Updated: August 21, 2018, 11:12 PM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​ಹ್ಯಾಮ್​​ನ ಟ್ರೆಂಟ್ ಬ್ರಿಡ್ಜ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್  ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದೆ. ಭಾರತಕ್ಕೆ ಮಾರಕವಾಗಿದ್ದ ಜಾಸ್ ಬಟ್ಲರ್(106) ಶತಕ ಬಾರಿಸಿ ಹಾಗೂ ಬೆನ್ ಸ್ಟೋಕ್ಸ್(62) ಅರ್ಧಶತಕ ಗಳಿಸಿ ಔಟ್ ಆಗಿದ್ದಾರೆ. ಬಳಿಕ ಬಂದ ಬೆನ್ನಲ್ಲೆ ಜಾನಿ ಬೈರ್ಸ್ಟೋ(0), ಕ್ರಿಸ್ ವೋಕ್ಸ್(4), ಸ್ಟುವರ್ಟ್ ಬ್ರಾಡ್(20) ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಆರಂಭದಲ್ಲೇ ದಿಢೀರ್ ಕುಸಿತ ಕಂಡ ಇಂಗ್ಲೆಂಡ್ ತಂಡಕ್ಕೆ ಬಟ್ಲರ್ ಹಾಗೂ ಸ್ಟೋಕ್ಸ್ ಚೇತರಿಕೆ ನೀಡಿದರು. ಇಬ್ಬರು ಕ್ರೀಸ್ ಕಚ್ಚಿ ಆಡಿ, 169 ರನ್​ಗಳ ಕಾಣಿಕೆ ನೀಡಿದರು. ಬಟ್ಲರ್ ಶತಕ ಬಾರಿಸಿ ಔಟ್ ಆದರೆ, ಸ್ಟೋಕ್ಸ್ ಅರ್ಧಶತಕ ನಿರ್ಗಮಿಸಿದ್ದಾರೆ.

ಇಂದು 4ನೇ ದಿನದಾಟದ ಆರಂಭದಲ್ಲೇ ಇಂಗ್ಲೆಂಡ್ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಜೆನ್ನಿಂಗ್ಸ್ ಅವರು 13 ರನ್ ಗಳಿಸಿ ಹಾಗೂ ಕುಕ್ 19 ರನ್ ಬಾರಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರೆ, ನಾಯಕ ಜೋ ರೂಟ್ 13, ಪೋಪ್ 16 ರನ್​​ಗೆ ತಮ್ಮ ಇನ್ನಿಂಗ್ಸ್​ ಕೊನೆಗೊಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...