UFC 278 Highlights: ಯುಎಫ್​ಸಿ ಚಾಂಪಿಯನ್ ಆದ ಜಮೈಕಾದ ಲಿಯಾನ್ ಎಡ್ವರ್ಡ್ಸ್

ಲಿಯಾನ್ ಎಡ್ವರ್ಡ್ಸ್ ( Leon Edwards) ಶನಿವಾರ ರಾತ್ರಿ UFC ವೆಲ್ಟರ್‌ವೈಟ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆದರು.

UFC ಅಂತಿಮ ಹಣಾಹಣಿ

UFC ಅಂತಿಮ ಹಣಾಹಣಿ

  • Share this:
ಲಿಯಾನ್ ಎಡ್ವರ್ಡ್ಸ್ ( Leon Edwards) ಶನಿವಾರ ರಾತ್ರಿ UFC ವೆಲ್ಟರ್‌ವೈಟ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆದರು. UFC 278ರ ಫೈನಲ್​ ಪೈಟ್​ನಲ್ಲಿ ಕೊನೆಯ ಒಂದು ನಿಮಿಷ ಉಳಿದಿರುವಾಗ ಕಮಾರು ಉಸ್ಮಾನ್ (Kamaru Usman) ಅವರಿಗೆ ಹೆಡ್ ಕಿಕ್‌ ನೀಡುವ ಮೂಲಕ UFC ವೆಲ್ಟರ್‌ವೈಟ್ ಪ್ರಶಸ್ತಿಯನ್ನು ಗೆದ್ದು ಬೀಗಿದರು. ಕೊನೆಯ ಹಂತದವರೆಗೂ ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಅಂತಿಮವಾಗಿ ಲಿಯಾನ್ ಎಡ್ವರ್ಡ್ಸ್ ಅವರು ತಮ್ಮ ಎದುರಾಳಿ ಕಮಾರು ಉಸ್ಮಾನ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಆದರು. ಈ ಮೂಲಕ ಲಿಯಾನ್ ಎಡ್ವರ್ಡ್ಸ್ UFC ಯ ಪೌಂಡ್-ಫಾರ್-ಪೌಂಡ್ ಸ್ಥಾನಕ್ಕೇರಿದರು.

ಚಾಂಪಿಯನ್ ಪಟ್ಟ ಅಲಂಕರಿಸಿದ ಲಿಯಾನ್ ಎಡ್ವರ್ಡ್ಸ್:

ಹೌದು, ನಿನ್ನೆ ರಾತ್ರಿ ನಡೆದ  UFC ವೆಲ್ಟರ್‌ವೈಟ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಲಿಯಾನ್ ಎಡ್ವರ್ಡ್ಸ್ ಅವರು ಕೊನೆ ಕ್ಷಣದಲ್ಲಿ ಕಮಾರು ಉಸ್ಮಾನ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಜಮೈಕಾದಲ್ಲಿ ಜನಿಸಿದ ಲಿಯಾನ್ ಎಡ್ವರ್ಡ್ಸ್‌ 30 ವರ್ಷ ವಯಸ್ಸಿನ ಕಮಾರು ಉಸ್ಮಾನ್ ಅವರನ್ನು ಮೊದಲ ಸುತ್ತಿನಲ್ಲಿ ಸೋಲಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಒಂದು ನಿಮಿಷ ಉಳಿದಿರುವಾಗ, ಎಡ್ವರ್ಡ್ಸ್ ಗೆದ್ದರು. ವಿಶ್ವ ಚಾಂಪಿಯನ್ ಆದ ಬಳಿಕ ಮಾತನಾಡಿದ ಲಿಯಾನ್ ಎಡ್ವರ್ಡ್ಸ್‌, ‘ನಾನು ಏನೂ ಇಲ್ಲದೆ ಜಮೈಕಾದಲ್ಲಿ ಜನಿಸಿದೆ. ನಾನು ಜಿಂಕ್ ಛಾವಣಿ ಹೊಂದಿದ್ದ ಮರದ ಗುಡಿಸಲಿನಲ್ಲಿ ವಾಸಿಸುತ್ತಿದ್ದೆ. ಆದರೆ ನನ್ನ ಅಮ್ಮ ನನ್ನ ಜೀವನವನ್ನು ಬದಲಾಯಿಸಿದರು‘ ಎಂದು ಹೇಳಿದರು.

ಎಂಎಂಎಯಲ್ಲಿ ಉಸ್ಮಾನ್ ಅವರ ಹೆಸರು ಪ್ರಸಿದ್ಧವಾಗಿದೆ. UFC ಯಲ್ಲಿ ಅಜೇಯ ದಾಖಲೆ ಮತ್ತು ಐದು ಯಶಸ್ವಿ ಪ್ರಶಸ್ತಿಗಳೊಂದಿಗೆ ಸಾರ್ವಕಾಲಿಕ ಶ್ರೇಷ್ಠ ವೆಲ್ಟರ್‌ ವೇಟ್‌ಗಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಉಸ್ಮಾನ್ ಅವರನ್ಉ ಅಂತಿಮ ಕ್ಷಣದಲ್ಲಿ ಲಿಯಾನ್ ಎಡ್ವರ್ಡ್ಸ್ ಅವರು ಸೋಲಿಸುವ ಮೂಲಕ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಪ್ರಮುಖ ತಂಡಗಳ ಪ್ರಕಟ, ಇಲ್ಲಿದೆ ಟೀಂಗಳ ಸಂಪೂರ್ಣ ವಿವರ

ಕೊನೆಯವರೆಗೂ ರೋಚಕತೆ ಉಳಿಸಿಕೊಂಡ ಪಂದ್ಯ:

ಇನ್ನು, ಅಂತಿಮ ಹಣಾಹಣಿಯಲ್ಲಿ ಕೊನೆಯ ಹಂತದವರೆಗೂ ರೋಚಕತೆ ಉಳಿಸಿಕೊಂಡಿತ್ತು. ಲಿಯಾನ್ ಎಡ್ವರ್ಡ್ಸ್ ಮತ್ತು ಕಮಾರು ಉಸ್ಮಾನ್ ನಡುವಿನ ಬಿಗ್​ ಫೈಟ್​ಗೆ ಪ್ರಪಂಚವೇ ಸಾಕ್ಷಿಯಾಗಿದ್ದು, ಎಲ್ಲರ ನಿರೀಕ್ಷೆಯನ್ನೂ ಮೀರಿ ಲಿಯಾನ್ ಎಡ್ವರ್ಡ್ಸ್ ಅವರು 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಂತಹ ಎಂಎಂಎ ದಂತಕಥೆ ಕಮಾರು ಉಸ್ಮಾನ್ ಅವರನ್ನು ಸೋಲಿಸಿದರು.

ಮೊದಲ ಸುತ್ತಿನಲ್ಲಿ 10-9 ಅಂಕಗಳು ದಾಖಲಾದವು. ಉಸ್ಮಾನ್ ರೌಂಡ್‌ಗಳನ್ನು 10-9 ಅಂಕಗಳನ್ನು ಸಂಪಾಧಿಸಿದರು. ಆದರೆ ಕೊನೆಯಲ್ಲಿ ಸ್ಕೋರ್‌ ಕಾರ್ಡ್‌ಗಳ ಅಗತ್ಯವಿರಲಿಲ್ಲ, ಆದಾಗ್ಯೂ, ಎಡ್ವರ್ಡ್ಸ್ ಉಸ್ಮಾನ್ ಡಕ್ ಆಗಿ ಎಡ ಹೈ ಕಿಕ್ ಅನ್ನು ಅನ್ಕಾರ್ಕ್ ಮಾಡಿದಾಗ ದಿ ನೈಜೀರಿಯನ್ ನೈಟ್ಮೇರ್ 5 ನೇ ಸುತ್ತಿನ 4:04 ಮಾರ್ಕ್‌ನಲ್ಲಿ ಕೊನೆಗೊಂಡಿತು. ಪ್ರಶಸ್ತಿ ಗೆದ್ದ ಬಳಿಕ ಭಾವುರಾದ ಎಡ್ವರ್ಡ್ಸ್, ತಮ್ಮ ತಾಯಿಯ ಜೊತೆ ಫೋನಿನಲ್ಲಿ ವಿಡಿಯೋ ಕಾಲ್ ಮಾಡುವ ಮೂಲಕ ಮಾತನಾಡಿದರು. ಅವರ ಆ ಸಂತಸದ ಕ್ಷಣಗಳ ವಿಡಿಯೋಗಳು ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Published by:shrikrishna bhat
First published: