ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾಟದಲ್ಲಿ ಬೆಂಗಳೂರು ಎಫ್ಸಿ ತಂಡ ಅದ್ಭುತ ಪ್ರದರ್ಶನ ತೋರುತ್ತಿದ್ದು, ನಿನ್ನೆ ನಡೆದ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ 1-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಬೆಂಗಳೂರು ಎಫ್ಸಿ ತಂಡದ ಪರವಾಗಿ ಆಡಿದ 150ನೇ ಪಂದ್ಯದಲ್ಲಿ ನಾಯಕ ಸುನೀಲ್ ಛೇಟ್ರಿ ಅವರಿಗೆ ಗೆಲುವಿನ ಉಡುಗೊರೆ ಸಿಕ್ಕಿದೆ.
87ನೇ ನಿಮಿಷದಲ್ಲಿ ಉದಾಂತಿ ಸಿಂಗ್ ಅವರು ಚೆಂಡನ್ನು ನೆಟ್ನೊಳಗೆ ಅಟ್ಟಿ ಗೆಲುವಿನ ರೂವಾರಿಯಾದರು. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಕ್ಕೆ ಯಾವುದೇ ಗೋಲು ದಾಖಲಾಗಿಲ್ಲ. ದ್ವಿತೀಯಾರ್ಧ ಅವಧಿಯೂ ಇದೇ ರೀತಿ ಸಾಗುತ್ತಿತ್ತು. ಪಂದ್ಯ ಡ್ರಾ ಫಲಿತಾಂಶ ಕಾಣುತ್ತದೆಂದು ಎಲ್ಲರು ಅಂದುಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಉದಾಂತ್ ಸಿಡಿಸಿದ ಗೋಲು ಬಿಎಫ್ಸಿ ತಂಡ ಗೆಲುವಿನ ನಗೆ ಬೀರುವಂತೆ ಮಾಡಿತು. ಈ ಮಧ್ಯೆ ಡೈನಮೋಸ್ ತಂಡ ಗೆಲುವಿಗಾಗಿ ಹರಸಾಹಸ ಪಟ್ಟಿತಾದರು, ಬಿಎಫ್ಸಿ ತಂಡದ ಸಂಘಟಿತ ಹೋರಾಟದ ನಡುವೆ ಯಶಸ್ವಿಯಾಗಿಲ್ಲ.
.@chetrisunil11's @bengalurufc teammates didn't want to let go of the momentous occassion of his 1⃣5⃣0⃣th appearance without a little bit of fun with their skipper! 😆#HeroISL #LetsFootball #FanBannaPadega #BENDEL #Chhetri150 pic.twitter.com/KxaYJ6jdFy
— Indian Super League (@IndSuperLeague) November 26, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ