ಸಂಗಕ್ಕರ ಭೇಟಿಯಾದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧನ

news18
Updated:July 31, 2018, 2:51 PM IST
ಸಂಗಕ್ಕರ ಭೇಟಿಯಾದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧನ
news18
Updated: July 31, 2018, 2:51 PM IST
ನ್ಯೂಸ್ 18 ಕನ್ನಡ

ಮೊನ್ನೆಯಷ್ಟೆ ಕೆಐಎ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧನ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು. ಪಂದ್ಯ ಮುಗಿದ ಬಳಿಕ ಸ್ಮೃತಿ ಅವರು ಶ್ರೀಲಂಕಾ ತಂಡದ ಖ್ಯಾತ ಮಾಜಿ ಆಟಗಾರ ಕುಮಾರ್ ಸಂಗಕ್ಕರ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸ್ಮೃತಿ ಅವರು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡು ಸಂಭ್ರಮ ವ್ಯಕ್ತ ಪಡಿಸಿದ್ದಾರೆ.

'ಇದು ನನ್ನ ದಿನ. ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಕ್ಷಣವನ್ನು ಬಣ್ಣಿಸಲು ನನ್ನಿಂದ ಅಸಾಧ್ಯ. ಈ ನೆನಪು ಸದಾ ನನ್ನ ಜೊತೆಗಿರುತ್ತದೆ' ಎಂದು ಅಡಿ ಬರಹ ನೀಡಿ ಸಂಗಕ್ಕರ ಜೊತೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

 

ಕೆಐಎ ಟೂರ್ನಿಯಲ್ಲಿ ಸ್ಮೃತಿ ಅವರು 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿ ಸಾಧನೆ ಮಾಡಿದ್ದರು. ಈ ಆಟಕ್ಕೆ ಮನಸೋತ ಸಂಗಕ್ಕರ ಅವರು ಪಂದ್ಯದ ಬಳಿಕ ತಮ್ಮ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆಯನ್ನು ಕೂಡ ವ್ಯಕ್ತ ಪಡಿಸಿದ್ದರು.

 

First published:July 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ