• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Turkey Earthquake: ಟರ್ಕಿ ಭೂಕಂಪದಲ್ಲಿ ಸಾವನ್ನಪ್ಪಿದ ಖ್ಯಾತ ಫುಟ್​ಬಾಲ್ ಆಟಗಾರ, ಅವಶೇಷಗಳಡಿ ಸಿಕ್ತು ಮೃತದೇಹ

Turkey Earthquake: ಟರ್ಕಿ ಭೂಕಂಪದಲ್ಲಿ ಸಾವನ್ನಪ್ಪಿದ ಖ್ಯಾತ ಫುಟ್​ಬಾಲ್ ಆಟಗಾರ, ಅವಶೇಷಗಳಡಿ ಸಿಕ್ತು ಮೃತದೇಹ

ಅಹ್ಮತ್ ಎಯುಪ್ ಟುರ್ಕಸ್ಲಾನ್

ಅಹ್ಮತ್ ಎಯುಪ್ ಟುರ್ಕಸ್ಲಾನ್

Turkey Earthquake: ಇದುವರೆಗೆ ಟರ್ಕಿ ಭೂಕಂಪದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ನೂರಾರು ಜೀವಗಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದೆ. ಇದರ ನಡುವೆ ಸ್ಟಾರ್​ ಫುಟ್​ಬಾಲ್ ಆಟಗಾರ ಸಹ ಸಾವನ್ನಪ್ಪಿದ್ದಾರೆ.

  • Share this:

ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ (Turkey Earthquake) ದಿನೇ ದಿನೇ ಹೆಚ್ಚಳವಾಗುತ್ತಿದೆ. ಕಟ್ಟಡಗಳ ಅವಶೇಷಗಳಡಿ ಸಾವಿರಾರು ಮೃತದೇಹಗಳು ಸಿಗುತ್ತಿದ್ದು, ಟರ್ಕಿ ಇದೀಗ ಅಕ್ಷರಸಹ ಸಾವಿನ ಮನೆ ಆಗಿದೆ. ಈವರಗೆ ಟರ್ಕಿಯಲ್ಲಿ ಭೂಕಂಪಕ್ಕೆ ಬರೋಬ್ಬರಿ 8 ಸಾವಿರಕ್ಕೂ ಹೆಚ್ಚಿನ ಜನರು ಅಸುನೀಗಿದ್ದಾರೆ. ಇದರ ನಡುವೆ ಟರ್ಕಿ ದೇಶದ ಖ್ಯಾತ ಫುಟ್​ಬಾಲ್​ ಆಟಗಾಋ ಗೋಲ್​ಕೀಪರ್​ ಒಬ್ಬರು ಸಾವನ್ನಪ್ಪಿದ್ದಾರೆ. ಟರ್ಕಿಯ ಫುಟ್ಬಾಲ್ ಗೋಲ್​ಕೀಪರ್ ಅಹ್ಮತ್ ಎಯುಪ್ ಟುರ್ಕಸ್ಲಾನ್ (Turkaslan Death) ಅವರು ಭೂಕಂಪಕ್ಕೆ (Earthquake) ಬಲಿಯಾಗಿದ್ದಾರೆ. ಈ ಸುದ್ದಿಯನ್ನು ಯೇನಿ ಮಲತ್ಯಾಸ್ಪೋರ್ ಕ್ಲಬ್​ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಅವರ ಸಾವಿಗೆ ಫುಟ್​ಬಾಲ್ ಲೋಕ ಕಂಬನಿ ಮಿಡಿದಿದ್ದು, ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರಿಗೆ 28 ವರ್ಷ ವಯಸ್ಸಾಗಿತ್ತು.


ಬದುಕುಳಿದ ಮರ್ತೋರ್ವ ಆಟಗಾರ:


ಆದರೆ ಈ ಬೀಕರ ಭೂಕಂಪದಲ್ಲಿ ಘಾನಾದ ಮತ್ತೋರ್ವ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಅವರು ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ರಿಕ್ಟರ್ ಮಾಪಕದಲ್ಲಿ 7 ಕ್ಕಿಂತ ಹೆಚ್ಚು ಭೂಕಂಪ ಸಂಭವಿಸಿದಾಗ ಘಾನಿಯನ್ ವಿಂಗರ್ ಟರ್ಕಿಯಲ್ಲಿದ್ದರು. ಅವರು ಕಟ್ಟಡದ 9ನೇ ಮಹಡಿಯಲ್ಲಿದ್ದರು. ಈ ವೇಳೆ ಅವರಿದ್ದ ಕಟ್ಟದ ಕುಸಿದಿದ್ದು, ಣುರಾರು ಜನ ಕಟ್ಟಡದ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಆದರೆ ಅಟ್ಸು ಅವರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಈಗ ವರದಿಯಾಗಿದೆ. ಕೆಲ ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದ ಅವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ.


ಅಟ್ಸು ಆಡುವ ಕ್ಲಬ್‌ನ ಹ್ಯಾಟ್ಸ್‌ಪೋರ್‌ನ ಉಪಾಧ್ಯಕ್ಷರಾಗಿದ್ದರು. ಆದರೆ ಅವರು ಗಾಯಗೊಂಡಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಆದಾಗ್ಯೂ, ಕ್ಲಬ್‌ನ ಕ್ರೀಡಾ ನಿರ್ದೇಶಕರು ದುರದೃಷ್ಟವಶಾತ್ ಇನ್ನೂ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಅಟ್ಸು ಮತ್ತು ಅವರ ಪತ್ನಿ ಮೇರಿ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರು ಕಳೆದ ವರ್ಷವಷ್ಟೇ ಟರ್ಕಿಯ ಕ್ಲಬ್ ಹ್ಯಾಟ್ಸ್‌ಪೋರ್‌ನೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು.


ಇದನ್ನೂ ಓದಿ: Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೆನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?


ಟರ್ಕಿಯಲ್ಲಿ ಭೀಕರ ಭೂಕಂಪ:


ಸೋಮವಾರ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 8ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದಿಂದ ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದೆ. ಸಾವು ನೋವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ನಡುವೆ ಸಂತ್ರಸ್ತ ಪ್ರದೇಶಗಳಲ್ಲಿ ಅವಶೇಷಗಳಡಿ ಸಿಲುಕಿರುವ ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಇನ್ನೂ ಶೋಧ ಕಾರ್ಯ ನಡೆಸುತ್ತಿದ್ದಾರೆ.




ಟರ್ಕಿ ನೆರವಿಗೆ ಮುಂದಾದ ಭಾರತ:


ಇನ್ನು, ಭೂಕಂಪದಿಂದ ತತ್ತರಿಸಿರುವ ಟರ್ಕಿ ದೇಶಕ್ಕೆ ಭಾರತ ನೆರವು ನೀಡುವುದಾಗಿ ತಿಳಿಸಿದೆ. ಇದರ ಭಾಗವಾಗಿ 100 ಸಿಬ್ಬಂದಿ ಹಾಗೂ ವಿಶೇಷ ತರಬೇತಿ ಪಡೆದ ಶ್ವಾನದಳ, ಜೊತೆಗೆ ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ಟರ್ಕಿಯಲ್ಲಿ ಭೂಕಂಪ ನಡೆದಿರುವ ಸ್ಥಳಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತೆರಳಿವೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.


ಇದರ ನಡುವೆ ಮಧ್ಯ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಹಲವಾರು ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಬೆಂಬಲಕ್ಕೆ ಬಂದಿವೆ. ಸೋಮವಾರ 45 ದೇಶಗಳು ರಕ್ಷಣಾ ಕಾರ್ಯಕ್ಕೆ ಸಹಾಯ ಹಸ್ತಚಾಚಿವೆ ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.

Published by:shrikrishna bhat
First published: