ಶುರುವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್, TPL ಟೂರ್ನಿಗೆ ಕ್ಷಣಗಣನೆ

ಕಿರುತೆರೆ ಕಲಾವಿದರುಗಳ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಕೊರೋನಾ ಹಾವಳಿ ನಂತರ ಇದೇ ಮಾದಲ ಬಾರಿಗೆ ನಡೆಯುತ್ತಿರುವ ಸರಣಿಯು ಆಗಸ್ಟ್ 18ರಿಂದ 3 ದಿನಗಳ ಕಾಲ ನಡೆಯಲಿದೆ.

ಕಿರುತೆರೆ ಕಲಾವಿದರುಗಳ ಕ್ರಿಕೆಟ್ ಟೂರ್ನಿ

ಕಿರುತೆರೆ ಕಲಾವಿದರುಗಳ ಕ್ರಿಕೆಟ್ ಟೂರ್ನಿ

  • Share this:
ಈಗಾಗಲೇ ನಿಧಾನವಾಗಿ ಮತ್ತೆ ಕ್ರಿಕೆಟ್ (Cricket)​ ಜ್ವರ ದೇಶದಲ್ಲಿ ಹೆಚ್ಚುತ್ತಿದೆ. ಕ್ರಿಕೆಟ್​ ಪ್ರೇಮಿಗಳಿಗಾಗಿ ಸಾಲು ಸಾಲು ಟೂರ್ನಿಗಳು ನಡೆಯುತ್ತಿದ್ದು, ಇನ್ನೇನು ಕಲವೇ ದಿನಗಳಲ್ಲಿ ಭಾರತ ತಂಡ ಜಿಂಬಾಬ್ವೆ (IND vs ZIM) ಸರಣಿಗಾಗಿ ಟೀಂ ಇಂಡಿಯಾವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಿದೆ. ಇದಾದ ಬಳಿಕ ನೇರವಾಗಿ ಏಷ್ಯಾ ಕಪ್​ 2022 (Asia Cup 2022) ಟೂರ್ನಿಗೆ ಟೀಂ ಇಂಡಿಯಾ (Team India) ಸಿದ್ಧವಾಗಲಿದೆ. ಅದರಲ್ಲಿಯೂ ಅನೇಕ ದಿನಗಳ ನಂತರ ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯ ನಡೆಯಲಿದೆ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳಿಗೆ ಈ ಬಾರಿ ರಸದೌತಣ ಎಂಬಂತಾಗಿದೆ. ಇವುಗಳ ನಡುವೆ ಟಿ20 ವಿಶ್ವಕಪ್ ಸಹ ಸನಿಹದಲ್ಲಿದ್ದು, ಇವುಗಳ ನಡುವೆ ಕಿರುತೆರೆ ಕಲಾವಿದರುಗಳ ಕ್ರಿಕೆಟ್​ ಟೂರ್ನಿಮೆಂಟ್​ ಸಹ ಘೋಷಣೆ ಆಗಿದ್ದು, ಸಖತ್ ಥ್ರಿಲ್​ ನೀಡಲಿದೆ. ಹೌದು, ಇದೇ ತಿಂಗಳ 18ರಿಂದ 3 ದಿನಗಳ ಕಾಲ ಟಿಪಿಎಲ್ (TPL) ಟೂರ್ನಿ ಅದ್ಧೂರಿಯಾಗಿ ಜರುಗಲಿದೆ.

ಆರಂಭವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್:

ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಕಿರುತೆರೆ ಕಲಾವಿದರುಗಳ ಕ್ರಿಕೆಟ್ ಟೂರ್ನಿ ನಡೆಯಲಿದೆ. ಕೊರೋನಾ ಹಾವಳಿ ನಂತರ ಇದೇ ಮಾದಲ ಬಾರಿಗೆ ನಡೆಯುತ್ತಿರುವ ಸರಣಿಯು ಆಗಸ್ಟ್ 18ರಿಂದ 3 ದಿನಗಳ ಕಾಲ ನಡೆಯಲಿದೆ. ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿಮಿಷನ್ ಪ್ರೀಮಿಯರ್ ಲೀಗ್ (ಟಿಪಿಎಲ್) ಆರಂಭವಾಗಲಿದೆ. ಆಗಸ್ಟ್ 18, 19 ಮತ್ತು 20ರ ವರೆಗೆ ಕ್ರಿಕೆಟ್ ನಡೆಯಲಿದೆ. ಈ ಪಂದ್ಯಾವಳಿ ಕಿರುತೆರೆ ಕಲಾವಿದರು ಭಾಗಿಯಾಗಲಿದ್ದು, ಈ ಪಂದ್ಯಾವಳಿಯಿಂದ ಹಿರಿಯ ಕಲಾವಿದರುಗಳಿಗೆ ಸಹಾಯ ಮಾಡುವುದು ಟಿಪಿಎಲ್ ನ ಮುಖ್ಯ ಉದ್ದೇಶವಾಗಿದೆ ಎಂದು TPL ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್ ಹೇಳಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಸುದ್ದಿಗೋಷ್ಠಿ ಕರೆಯಲಾಗಿತ್ತು.

ಕಿರುತೆರೆ ಕಲಾವಿದರುಗಳ ಕ್ರಿಕೆಟ್ ಟೂರ್ನಿ


ಪಂದ್ಯಾವಳಿ ಕುರಿತು ಮಾತನಾಡಿದ ಆಯೋಜಕರು:

ಇನ್ನು, ಟಿಪಿಎಲ್ ಆಯೋಜನೆ ಮತ್ತು ಅದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿರುವ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್, ‘ಒಳ್ಳೆ ಉದ್ದೇಶ ಇಟ್ಟುಕೊಂಡು ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅಲ್ಲದೇ ಈ ವೇಳೆ ಪಂದ್ಯಾವಳಿಗಾಗಿ ತಂಡವನ್ನು ಕಟ್ಟಿರುವ 6 ಜನ ಮಾಲೀಕರಿಗೆ ಧನ್ಯವಾದ ಹೇಳುತ್ತೇನೆ‘ ಎಂದು ಹೇಳಿದರು. ಅಲ್ಲದೇ ಇದೇ ತಿಂಗಳ 16ರಂದು ಟಿಪಿಎಲ್ ಜರ್ಸಿ ಲಾಂಚ್ ಹಾಗೂ ಟ್ರೋಫಿ ಲಾಂಚ್ ಮಾಡಲಾಗುತ್ತದೆ. ಜೊತೆಗೆ 18, 19 ಹಾಗೂ 20 ಈ ಮೂರು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಯಾವ ಯಾವ ತಂಡಗಳು ಪಂದ್ಯವಳಿಯಲ್ಲಿ ಆಡಲಿವೆ?:

ಹೌದು, ಈ ಪ್ರಶ್ನೆ ಎಲ್ಲರಲ್ಲಿಯೂ ಮೂಡುವುದು ಸಹಜ. ಇದಕ್ಕೆ ಇಲ್ಲಿದೆ ನೋಡಿ ಉತ್ತರ. ಟಿಪಿಎಲ್ ಪಂದ್ಯವಳಿಯಲ್ಲಿ ಬರೋಬ್ಬರಿ 6 ತಂಡಗಳು ಕಾಣಿಸಿಕೊಳ್ಳಲಿವೆ. ಇವುಗಳಲ್ಲಿ ಕನ್ನಡ ಕಿರುತೆರೆಯ ಕಲಾವಿದರುಗಳು ಆಡಲಿದ್ದಾರೆ. ಇನ್ನು, ದಿ ಬುಲ್ ಸ್ಕ್ವಾಡ್, ಭಜರಂಗಿ ಬುಲ್ಸ್, ಎಂಜೆಲ್ ಎಸ್ಐ, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್ ಮತ್ತು ಸ್ಯಾಂಡಲ್ ವುಡ್ ಕಿಂಗ್ಸ್ ತಂಡಗಳು ಟಿಪಿಎಲ್ ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದು, ಈ ಆರು ತಂಡಗಳಿಗೆ ಮಾಲೀಕರುಗಳನ್ನು ಒಳಗೊಂಡಿದೆ. ಈ ಟೂರ್ನಿಯಿಂದ ಬಂದಂತಹ ಹಣವನ್ನು ಹಿರಿಯ ಕಲಾವಿದರುಗಳ ಏಳಿಗೆಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.

ಅಶ್ವ ಸೂರ್ಯ ರೈಡರರ್ಸ್ ತಂಡದ ನಾಯಕ ಮಂಜು ಪಾವಗಡ ಮಾತನಾಡಿ, ‘ಒಂದೊಳ್ಳೆ ತಂಡಗಳು ಸೇರಿಕೊಂಡು ಕ್ರಿಕೆಟ್ ಆಡ್ತಿದ್ದು, ಪ್ರತಿ ತಂಡಕ್ಕೂ ಓನರ್ ಗಳು ಬೆಂಬಲವಾಗಿ ನಿಂತಿದ್ದಾರೆ‘ ಎಂದು ಹೇಳಿದ್ದಾರೆ.
Published by:shrikrishna bhat
First published: