IPL 2022: ಪಂದ್ಯವೊಂದರಲ್ಲೇ ಅತಿ ಹೆಚ್ಚು ರನ್​ ಕೊಟ್ಟ ಬೌಲರ್​ಗಳು ಇವ್ರು.. ಬ್ಯಾಟ್ಸ್​ಮ್ಯಾನ್​ಗಿಂತ ಹೆಚ್ಚು ಸ್ಕೋರ್​ ಮಾಡವ್ರೆ!

IPLಐಪಿಎಲ್‌ನಲ್ಲಿ ಪ್ರತೀ ಬಾರಿಯೂ ಒಂದಲ್ಲಾ ಒಂದು ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ದಾಖಲೆಗಳು ಎಂದರೆ ಆಟಗಾರರು ಹಾಗೂ ತಂಡಗಳು ಸಹಜವಾಗಿಯೇ ಸಂಭ್ರಮಿಸುತ್ತವೆ. ಐಪಿಎಲ್ 2020ಸೀಸನ್‌ನಲ್ಲಿಕೆಲವು ಬೌಲರ್‌ಗಳು ಹಿಗ್ಗಾಮುಗ್ಗ ರನ್ ಬಿಟ್ಟುಕೊಟ್ಟಿದ್ದು ಸಹ ಇದೆ. ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಪತರುಗುಟ್ಟಿದ ಹಾಗೂ 2020ರ ಸೀಸನ್‌ನಲ್ಲಿ ಓವರ್‌ಗೆ ಅತಿ ಹೆಚ್ಚು ರನ್‌ ಬಿಟ್ಟುಕೊಟ್ಟ ಐವರು ಟಿ20 ಬೌಲರ್‌ಗಳ ಮಾಹಿತಿ ಇಲ್ಲಿದೆ ನೋಡಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್(Play Off) ಪಂದ್ಯಗಳನ್ನು ನಡೆಯಲಿದೆ. IPLಐಪಿಎಲ್‌ನಲ್ಲಿ ಪ್ರತೀ ಬಾರಿಯೂ ಒಂದಲ್ಲಾ ಒಂದು ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ದಾಖಲೆಗಳು ಎಂದರೆ ಆಟಗಾರರು ಹಾಗೂ ತಂಡಗಳು ಸಹಜವಾಗಿಯೇ ಸಂಭ್ರಮಿಸುತ್ತವೆ. ಐಪಿಎಲ್ 2020ಸೀಸನ್‌ನಲ್ಲಿಕೆಲವು ಬೌಲರ್‌ಗಳು ಹಿಗ್ಗಾಮುಗ್ಗ ರನ್ ಬಿಟ್ಟುಕೊಟ್ಟಿದ್ದು ಸಹ ಇದೆ. ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಪತರುಗುಟ್ಟಿದ ಹಾಗೂ 2020ರ ಸೀಸನ್‌ನಲ್ಲಿ ಓವರ್‌ಗೆ ಅತಿ ಹೆಚ್ಚು ರನ್‌ ಬಿಟ್ಟುಕೊಟ್ಟ ಐವರು ಟಿ20 ಬೌಲರ್‌ಗಳ ಮಾಹಿತಿ ಇಲ್ಲಿದೆ ನೋಡಿ..


ಲುಂಗಿ ಎನ್‌ಗಿಡಿ (ಸಿಎಸ್‌ಕೆ: 56 ರನ್)

2020ರ ಐಪಿಎಲ್ ಸೀಸನ್‌ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲಿ ಲುಂಗಿ ಎನ್‌ಗಿಡಿ ಐದನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಎನ್‌ಗಿಡಿ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗೆ 56 ರನ್ ಚಚ್ಚಿಸಿಕೊಂಡಿದ್ದರು. ಈ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ 7 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಚೆನ್ನೈ 6 ವಿಕೆಟ್ ನಷ್ಟಕ್ಕೆ 200ರನ್‌ಗಳಿಸಲಷ್ಟೇ ಶಕ್ತವಾಗಿತ್ತು.

ಜೋರ್ಡಾನ್ (ಪಂಜಾಬ್ ಕಿಂಗ್ಸ್‌:56 ರನ್)

ಇಂಗ್ಲೆಂಡ್ ಮೂಲದ ಬೌಲರ್ ಕ್ರಿಸ್ ಜೋರ್ಡಾನ್ 2020ರ ಐಪಿಎಲ್ ಸೀಸನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗೆ 56ರನ್‌ಗಳನ್ನ ಬಿಟ್ಟುಕೊಟ್ಟಿದ್ದರು. ಇಷ್ಟು ರನ್ ಬಿಟ್ಟುಕೊಟ್ಟಿದ್ದಲ್ಲದೆ ಒಂದು ವಿಕೆಟ್ ಪಡೆಯಲು ವಿಫಲಗೊಂಡರು.

ಇದನ್ನೂ ಓದಿ: ಬೇಡದ ದಾಖಲೆಯಲ್ಲೂ ಆರ್‌ಸಿಬಿಯೇ ನಂಬರ್​ 1! ಈ ರೆಕಾರ್ಡ್​ ಮಾತ್ರ ನೆನೆಸಿಕೊಳ್ಳೋದೇ ಬೇಡ ರೀ..

ಡೇಲ್ ಸ್ಟೇನ್ (ಆರ್‌ಸಿಬಿ: 57 ರನ್)

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ 2020ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಕೆಲ ಪಂದ್ಯಗಳನ್ನಷ್ಟೇ ಆಡಿದ್ರು. ಆದ್ರೆ ಸಿಕ್ಕ ಅವಕಾಶದಲ್ಲಿ ಸ್ಟೇನ್ ಅಷ್ಟಾಗಿ ಮಿಂಚಲಿಲ್ಲ. ಅದ್ರಲ್ಲೂ ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ . 4 ಓವರ್‌ಗಳಲ್ಲಿ 57 ರನ್ ಚಚ್ಚಿಸಿಕೊಂಡ ಸ್ಟೇನ್ ಬೌಲಿಂಗ್‌ನಲ್ಲಿ ಪಂಜಾಬ್ ಅಬ್ಬರಿಸಿತ್ತು.

ಅಂಕಿತ್ ರಜಪೂತ್ (ರಾಜಸ್ತಾನ್ ರಾಯಲ್ಸ್‌: 60 ರನ್)

ರಾಜಸ್ತಾನ್ ರಾಯಲ್ಸ್ ಪರ ಆಡಿದ ದೇಶೀಯ ಬೌಲರ್ ಅಂಕಿತ್ ರಜಪೂತ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಬರೋಬ್ಬರ 60 ರನ್‌ಗಳನ್ನ ಬಿಟ್ಟುಕೊಟ್ಟು ತಂಡಕ್ಕೆ ವಿಲನ್ ಆಗಿದ್ದರು.  ಈ ಪಂದ್ಯದಲ್ಲಿ ಮುಂಬೈ ಐದು ವಿಕೆಟ್ ಕಳೆದುಕೊಂಡು 195ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ರಾಜಸ್ತಾನ್ ಬೆಸ್‌ ಸ್ಟೋಕ್ಸ್‌ ಅಮೋಘ ಶತಕದ ನೆರವಿನಿಂದ 8 ವಿಕೆಟ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ: RCB ಪರ ಘರ್ಜಿಸೋ ಕ್ರಿಕೆಟಿಗರ ಪತ್ನಿಯರ ಅಂದ ಚಂದ ನೀವೇ ನೋಡಿ!

ಸಿದ್ದಾರ್ಥ್​ ಕೌಲ್​ (ಎಸ್​ಆರ್​ಎಚ್​ - 64 ರನ್​)

ಅಶೋಕ್ ದಿಂಡಾ ಬಳಿಕ ಅತಿ ದುಬಾರಿ ಬೌಲರ್ ಆಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್ ಕೌಲ್‌ 2020ರ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಆಡಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೌಲ್‌ ನಾಲ್ಕು ಓವರ್‌ಗೆ ವಿಕೆಟ್ ಪಡೆಯದೆ 64ರನ್‌ ನೀಡಿ ದುಬಾರಿ ಬೌಲರ್ ಆಗಿದ್ರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.
Published by:Vasudeva M
First published: