• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Virat Kohli: ತೆರೆ ಮೇಲೆ ಕಿಂಗ್ ಕೊಹ್ಲಿ ಬಯೋಪಿಕ್? ವಿರಾಟ್​ ಪಾತ್ರದಲ್ಲಿ ಸೌತ್​​ ಸೂಪರ್ ಸ್ಟಾರ್!

Virat Kohli: ತೆರೆ ಮೇಲೆ ಕಿಂಗ್ ಕೊಹ್ಲಿ ಬಯೋಪಿಕ್? ವಿರಾಟ್​ ಪಾತ್ರದಲ್ಲಿ ಸೌತ್​​ ಸೂಪರ್ ಸ್ಟಾರ್!

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ 2022ರ ಪಂದ್ಯದ ವೇಳೆ ಕಾಣಿಸಿಕೊಂಡ ನಟ ವಿಜಯ್ ದೇವರಕೊಂಡ ಅವರು ವಿರಾಟ್ ಕೊಹ್ಲಿ ಮೇಲಿನ ತಮ್ಮ ಅಭಿಮಾನಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  • Share this:

ಏಷ್ಯಾ ಕಪ್-2022 (Asia Cup 2022) ಟಿ20 ಟೂರ್ನಿಯಲ್ಲಿ ಭಾರತ ತಂಡ ಸಖತ್ ಬ್ಯುಸಿಯಾಗಿದೆ. ಇದರ ಭಾಗವಾಗಿ ಕಳೆದ ಭಾನುವಾರದಂದು ಪಾಕಿಸ್ತಾನ (Pakistan) ಎದುರು ಸೆಣಸಿದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್​ ನಲ್ಲಿ ಆದಂತಹ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಇದರ ನಡುವೆ ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯಕ್ಕೆ ತೆಲುಗು ಸೂಪರ್ ಸ್ಟಾರ್​ ವಿಜಯ್ ದೇವರಕೊಂಡ (Vijay Deverakonda) ಕ್ರಿಕೆಟ್ ಫೀಲ್ಡ್​ನಲ್ಲಿ ಆ್ಯಂಕರ್ ರೂಪದಲ್ಲಿ ಕಾಣಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದ್ರು. ವಿಜಯ್ ಮತ್ತು ಇರ್ಫಾನ್ ಬಸ್‌ನಲ್ಲಿ ಇರುವ ಚಿತ್ರವು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗಿತ್ತು. ವಿಜಯ್ ತಮ್ಮ ಲೈಗರ್ ಚಿತ್ರದ ಪ್ರಚಾರದ ಭಾಗವಾಗಿ ಏಷ್ಯಾ ಕಪ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಹೇಳಿರುವ ಒಂದು ವಿಷಯ ಇದೀಗ ಸಖತ್ ಚರ್ಚೆಗೆ ಕಾರಣವಾಗಿದೆ.


ವಿರಾಟ್​ ಕೊಹ್ಲಿ ಬಯೊಪಿಕ್​ನಲ್ಲಿ ವಿಜಯ್:


ಹೌದು, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಮಾಡುವ ಬಯಕೆಯನ್ನು ನಟ ವಿಜಯ್ ದೇವರಕೊಂಡ ವ್ಯಕ್ತಪಡಿಸಿದ್ದಾರೆ. ಇನ್ನು, ಪಂದ್ಯದ ಮೊದಲು, ನಿರೂಪಕರು ದೊಡ್ಡ ಪರದೆಯಲ್ಲಿ ಯಾವ ಆಟಗಾರನ ಬಯೋಪಿಕ್​ನಲ್ಲಿ ನೀವು ಕಾಣಿಸಿಕೊಳ್ಳಲು ಬಯಸುತ್ತೀರಿ ಎಂದು ಕೇಳಿದಾಗ. ಈ ಬಗ್ಗೆ ವಿಜಯ್ ದೇವರಕೊಂಡ ಅವರು ಕೊಹ್ಲಿಯ ಬಯೋಪಿಕ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯಕ್ಕೂ ಮೊದಲು ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸುವ ನಿರೀಕ್ಷೆಯಿದೆ ಎಂದು ದೇವರಕೊಂಡ ಹೇಳಿದ್ದರು.



ಅವರು ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತಾನಡಿ, “ನಾನು ತುಂಬಾ ಉತ್ಸುಕನಾಗಿದ್ದೇನೆ. ಕೊಹ್ಲಿ ಇಂದು ಕನಿಷ್ಠ 50 ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಒಮ್ಮೆ 20ಕ್ಕಿಂತ ಹೆಚ್ಚು ರನ್ ಗಳಿಸಿದರೆ ಈ ಹಂತವನ್ನು ದಾಟಬಹುದು. ಇದು ಅವರ 100ನೇ ಪಂದ್ಯವಾಗಿದ್ದು, ಇದನ್ನು ವೀಕ್ಷಿಸಲು ನಾನು ಕಾತುರನಾಗಿರುವೆ. ಮಹೇಂದ್ರ ಸಿಂಗ್ ಧೋನಿ ಅವರ ಜೀವನಚರಿತ್ರೆ ಈಗಾಗಲೇ ಪ್ರಯತ್ನಿಸಲಾಗಿರುವುದರಿಂದ ವಿರಾಟ್ ಕೊಹ್ಲಿ ಪಾತ್ರವನ್ನು ಮಾಡಲು ನಾನು ಇಷ್ಟಪಡುತ್ತೇನೆ. ಧೋನಿ ಭಾಯ್ ಅವರ ಬಯೋಪಿಕ್ ಅನ್ನು ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ಮಾಡಿದ್ದಾರೆ. ಹಾಗಾಗಿ ಈಗ ನಾನು ವಿರಾಟ್ ಅಣ್ಣನ ಬಯೋಪಿಕ್ ಮಾಡಲು ಬಯಸುತ್ತೇನೆ‘ ಎನ್ನುವ ಮೂಲಕ ವಿರಾಟ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.


ಇದನ್ನೂ ಓದಿ: Virat Kohli: ಪಾಕ್​ ಆಟಗಾರನ ಆಸೆ ಈಡೇರಿಸಿದ ಕೊಹ್ಲಿ, ವಿಶೇಷ ಉಡುಗೊರೆ ನೀಡಿದ ವಿಡಿಯೋ ವೈರಲ್


ಪಾಕ್ ಆಟಗಾರನ ಆಸೆ ಈಡೇರಿಸಿದ ಕೊಹ್ಲಿ:

top videos


    ಏಷ್ಯಾಕಪ್ 2022ರ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್​ಗಳ ಗೆಲುವನ್ನು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು. ಆದರೆ, ಪಂದ್ಯ ಮುಗಿದ ತಕ್ಷಣ, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರೌಫ್ ಕೊಹ್ಲಿ ಜೊತೆ  ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇನ್ನು, ವಿರಾಟ್ ಕೊಹ್ಲಿ ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ನೀಡಿದ್ದಾರೆ.

    First published: