Praveen Kumar : ಹೈ ಜಂಪ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ.. ಬೆಳ್ಳಿ ಮುಡಿಗೇರಿಸಿಕೊಂಡ ಪ್ರವೀಣ್ ಕುಮಾರ್

Tokyo Paralympics 2020: ಭಾರತದ ಪ್ಯಾರಾ ಹೈ ಜಂಪರ್ ಪ್ರವೀಣ್ ಕುಮಾರ್ ಶುಕ್ರವಾರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಹೈ ಜಂಪ್ - ಟಿ 44 ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.

ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್

  • Share this:
 ವಿಶೇಷ ಚೇತನರಿಗಾಗಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ  (Tokyo Paralympics)ನ ಭಾರತದ ಪದಕಗಳ ಬೇಟೆ ಭರ್ಜರಿಯಾಗಿ ನಡೆದಿದ್ದು, ಇಂದು ಸಹ ತಮ್ಮ ಒಳ್ಳೆಯ ಪದರ್ಶನ ಮುಂದುವರೆಸಿದ್ದಾರೆ.  ಇದೀಗ ಭಾರತದ ಪ್ಯಾರಾ ಹೈ ಜಂಪರ್ ಪ್ರವೀಣ್ ಕುಮಾರ್ ಶುಕ್ರವಾರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಹೈ ಜಂಪ್ - ಟಿ 44 ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.

ಒಲಿಂಪಿಕ್ ಕ್ರೀಡಾಂಗಣದಲ್ಲಿ ಮಳೆಯಿಂದ ನೆನೆದ ಟ್ರ್ಯಾಕ್‌ನಲ್ಲಿ, ಕುಮಾರ್ ತನ್ನ ಮೊದಲ ಪ್ರಯತ್ನದಲ್ಲಿ 1.83 ಅಡಿ ಎತ್ತರವನ್ನು 1.88 ಮೀ ನೇರವಾಗಿ ಜಿಗಿಯುವ ಮೂಲಕ ಯಶಸ್ಸು ಕಂಡಿದ್ದರು. ಇನ್ನು 1.93 ಮೀ  ಮಾರ್ಕ್​ ಅನ್ನು ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ  1.97 ಮೀ  ಜಿಗಿಯುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದ್ದರು.

ಅಲ್ಲದೆ ಕುಮಾರ್ 2.01 ಮೀ ಮಾರ್ಕ್  ಜಿಗಿತ ಸಾಧಿಸಲು ಎರಡು ಪ್ರಯತ್ನಗಳನ್ನು ತೆಗೆದುಕೊಂಡಿದ್ದಾರೆ.  ಕುಮಾರ್ ತನ್ನ ಮೊದಲ ಪ್ರಯತ್ನದಲ್ಲಿ 2.04 ಮೀ ಜಿಗಿತವನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆದರೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 2.07 ಮೀ ಮಾರ್ಕ್  ಜಿಗಿಯಲು ಸಾಧ್ಯವಾಗಲಿಲ್ಲ. ಆದರೆ, ಎರಡನೆ ಪ್ರಯತ್ನದಲ್ಲಿ ಕುಮಾರ್ ಅದನ್ನು ಸಾಧಿಸಿದ್ದರೂ, ಇನ್ನು ಪ್ರತಿ ಸ್ಪರ್ಧಿಗಳಾದ ಬ್ರೂಮ್ ಮತ್ತು ಲೆಪಿಯಾಟೊ ವಿಫಲರಾಗಿದ್ದರು. ಅಲ್ಲದೆ, ಲೆಪಿಯಾಟೊ ಕೂಡ ತನ್ನ ಮೂರನೇ ಪ್ರಯತ್ನದಲ್ಲಿ  ವಿಫಲವಾದ ಕಾರಣ  ಪ್ರವೀಣ್  ಅವರಲ್ಲಿ  ಬೆಳ್ಳಿ ಪದಕ ಗೆಲ್ಲುವ ಭರವಸೆ ಹುಟ್ಟಿತ್ತು. ಆದರೆ 2.10 ಮೀ ಮಾರ್ಕ್​ ನಲ್ಲಿ ಬ್ರೂಮ್ ತನ್ನ ಎರಡನೇ ಪ್ರಯತ್ನದಲ್ಲಿ 2.10 ಮೀ ಮಾರ್ಕ್ ಸಾಧಿಸಿದ್ದರು, ಅದನ್ನು ಪ್ರವೀಣ್ ತನ್ನ ಮೂರು ಪ್ರಯತ್ನಗಳಲ್ಲಿ ಅದನ್ನು ಸಾಧಿಸಲು ಸಾಧ್ಯವಾಗದ ಕಾರಣ ಹೈ ಜಂಪ್​ನಲ್ಲಿ   ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಟೋಕಿಯೊ ಕ್ರೀಡಾಕೂಟದಲ್ಲಿ ಪುರುಷರ ಹೈ ಜಂಪ್​ನಲ್ಲಿ  ಇದು ಭಾರತಕ್ಕೆ ನಾಲ್ಕನೇ ಪದಕವಾಗಿದ್ದು, ನಿಶಾದ್ ಕುಮಾರ್, ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್  ಈಗಾಗಲೇ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಹಾನೆಗಿಂತ ಮೊದಲು ಜಡೇಜಾ ಬ್ಯಾಟ್ ಮಾಡಲು ಕಾರಣ? ಎರಡನೇ ದಿನದಾಟದಲ್ಲೂ ಮಿಂಚುತ್ತಾರಾ ಬೌಲರ್ಸ್?

ಪ್ರವೀಣ್  ಹೈ ಜಂಪ್ ವಿಭಾಗದಲ್ಲಿ ವಿಶ್ವದಲ್ಲಿ 3 ನೇ ಸ್ಥಾನದಲ್ಲಿದ್ದಾರೆ. ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ FAZZA ಗ್ರ್ಯಾಂಡ್ ಪ್ರಿಕ್ಸ್ 2021, ದುಬೈನಲ್ಲಿ ಏಷ್ಯನ್ ದಾಖಲೆ ಸೃಷ್ಟಿಸಿ ಚಿನ್ನದ ಪದಕ ಗೆದ್ದು ಬೀಗಿದ್ದರು.

ಇನ್ನು ಪ್ರವೀಣ್ ಅವರ ಒಂದು ಕಾಲು ಹುಟ್ಟಿನಿಂದ ಚಿಕ್ಕದಾಗಿತ್ತು. ಅವರು ತಮ್ಮ ಶಾಲಾ ಸ್ನೇಹಿತರೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು, ಆರಂಭದಲ್ಲಿ ವಾಲಿಬಾಲ್ ಅವರ ನೆಚ್ಚಿನ ಆಟವಾಗಿತ್ತು. ಒಮ್ಮೆ ಅವರು ಸಮರ್ಥರ  ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಆದರೆ ನಂತರ ಅವರು ದೈಹಿಕ ಅಂಗವಿಕಲರಿಗಾಗಿ ಕ್ರೀಡೆಗಳಿವೆ ಎಂಬುದನ್ನ  ತಿಳಿದುಕೊಂಡು  ಡಾ.ಸತ್ಯಪಾಲ್ ಸಿಂಗ್ ಅವರ ಅಡಿಯಲ್ಲಿ ತರಬೇತಿ ಪಡೆಯಲು ಆರಂಭಿಸಿದ್ದರು.



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: