Tokyo Olympicsನಲ್ಲಿ ಭಾರತದ ಶುಭಾರಂಭ: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು!

Mirabai Chanu Wins Silver Medal : 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತದ ಪದಕ ಬೇಟೆ ಶುರುವಾಗಿದೆ.

ಮೀರಾಬಾಯಿ ಚಾನು

ಮೀರಾಬಾಯಿ ಚಾನು

  • Share this:
ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಶುಭಾರಂಭ ಮಾಡಿದ್ದು, ವೇಯ್ಟ್​​ ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತದ ಪದಕ ಬೇಟೆ ಶುರುವಾಗಿದೆ.

ಮೀರಾಬಾಯಿ ಚಾನು ಐಸಿಹಾಸಿಕ ಗೆಲುವು ದಾಖಲಿಸಿದ್ದಾರೆ. ಒಲಿಂಪಿಕ್ಸ್​​​ ವೇಯ್ಟ್​​ ಲಿಫ್ಟಿಂಗ್​ ವಿಭಾಗದಲ್ಲಿ ಭಾರತಕ್ಕೆ ಇದು 2ನೇ ಪದಕವಾಗಿದೆ. ಕರ್ಣಂ ಮಲ್ಲೇಶ್ವರಿ ಬಳಿಕ ವೇಯ್ಟ್​​ ಲಿಫ್ಟಿಂಗ್​ನಲ್ಲಿ ಪದಕ ಪಡೆದ 2ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮೀರಾಬಾಯಿ ಚಾನು ಪಾತ್ರರಾಗಿದ್ದಾರೆ. 2000ರಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್​​ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು.

26 ವರ್ಷದ ಮೀರಾಬಾಯಿ ಚಾನು 2018ರಲ್ಲಿ ಕಾಮನ್​​ವೆಲ್ತ್​​​ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.  ಚಾನು ಒಲಿಂಪಿಕ್ಸ್​​ ಇತಿಹಾಸದಲ್ಲಿ ವೈಯಕ್ತಿಕವಾಗಿ ಪದಕ ಪಡೆದ 5ನೇ ಮಹಿಳಾ ಕ್ರೀಡಾಪಟುವಾಗಿದ್ದಾರೆ.  ಇದಕ್ಕೂ ಮುನ್ನ ಕರ್ಣಂ ಮಲ್ಲೇಶ್ವರಿ 2000ರ ಸಿಡ್ನಿ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದರು. 2012ರಲ್ಲಿ ಲಂಡನ್​​ ಒಲಿಂಪಿಕ್ಸ್​​ನಲ್ಲಿ ಸಿಂಗಲ್​​ ಬ್ಯಾಟ್ಮಿಂಟನ್​​ನಲ್ಲಿ ಸೈನಾ ನೆಹ್ವಾಲ್​​ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದರು. ಇದೇ ಒಲಿಂಪಿಕ್ಸ್​ನ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್​​​ ಕಂಚಿನ ಪದಕ ಗೆದ್ದಿದ್ದರು.

ಮೀರಾಬಾಯಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತೀಯ ಕ್ರೀಡಾರಂಗದಲ್ಲಿ ಹೊಸ ಹುರುಪು ಮೂಡಿದೆ. ಕ್ರೀಡಾಪಟುಗಳು, ಗಣ್ಯಾತಿಗಣ್ಯರಿಂದ ಮೀರಾಬಾಯಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Published by:Kavya V
First published: