ಟೋಕಿಯೊ ಒಲಿಂಪಿಕ್ಸ್ಗಾಗಿ ಆರಿಸಲಾಗಿರುವ ಭಾರತೀಯ ಹಾಕಿ ತಂಡದ ನಾಯಕನಾಗಿ ಹಿರಿಯ ಮಿಡ್ಫೀಲ್ಡರ್ ಆಟಗಾರ ಮನ್ಪ್ರೀತ್ ಸಿಂಗ್ ಅವರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿಕೊಂಡಿದೆ. ಕೆಲ ದಿನಗಳ ಹಿಂದೆ ಭಾರತೀಯ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದರೂ, ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ತಿಳಿಸಿರಲಿಲ್ಲ. ಇದೀಗ ಹಾಕಿ ಇಂಡಿಯಾ ಭಾರತ ತಂಡದ ಕಪ್ತಾನನಾಗಿ ಮನ್ಪ್ರೀತ್ ಸಿಂಗ್ ಅವರನ್ನು ನೇಮಕ ಮಾಡಿದೆ. ಇನ್ನು ತಂಡದ ಉಪನಾಯಕರಾಗಿ ಅನುಭವಿ ಡಿಫೆಂಡರ್ ಆಟಗಾರ ಬೀರೇಂದ್ರ ಲಕ್ರಾ ಹಾಗೂ ಹರ್ಮನ್ಪ್ರೀತ್ ಸಿಂಗ್ ಅವರನ್ನು ಆರಿಸಲಾಗಿದೆ.
ಜುಲೈ 24ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸುವ ಮೂಲಕ ಒಲಿಂಪಿಕ್ಸ್ ನಲ್ಲಿ ತನ್ನ ಅಭಿಯಾನವನ್ನು ಭಾರತವು ಆರಂಭಿಸಲಿದೆ. ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿರುವ ಭಾರತ ತಂಡವು ಜಪಾನ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಆತ್ಮ ವಿಶ್ವಾಸದಲ್ಲಿದ್ದು, ಈ ಮೂಲಕ ಮತ್ತೊಮ್ಮೆ ಹಾಕಿ ಅಂಗಳದಲ್ಲಿ ಭಾರತೀಯ ಪಾತಾಕೆಯನ್ನು ಹಾರಿಸುವ ವಿಶ್ವಾಸ ಹೊಂದಿದೆ.
ನಾಯಕನಾಗಿ ಆಯ್ಕೆಯಾಗಿರುವ ಸಂತಸ ಹಂಚಿಕೊಂಡಿರುವ ಮನ್ಪ್ರೀತ್ ಸಿಂಗ್, ತಂಡದ ಸಾರಥ್ಯದ ಗೌರವವನ್ನು ನನಗೆ ನೀಡಿರುವುದು ಬಹಳ ಹೆಮ್ಮೆಯ ಕ್ಷಣ. ನನಗೆ ಮೂರನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿದೆ. ಈ ಸಲ ನಾಯಕತ್ವ ಜವಾಬ್ದಾರಿಯನ್ನು ನನಗೆ ನೀಡಿರುವುದು ಹೆಮ್ಮೆಯ ವಿಷಯ. ಖಂಡಿತವಾಗಿಯೂ ನಮ್ಮ ತಂಡ ಪದಕದೊಂದಿಗೆ ಹಿಂತಿರುಗಲಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಅಲ್ಲದೆ ಮನ್ಪ್ರೀತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವ ಹಾಕಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೇರಿತು.
ಒಲಿಂಪಿಕ್ಸ್ಗೆ ಹೋಗುವ ಭಾರತ ಪುರುಷರ ತಂಡದ ನಾಯಕನಾಗಿ ಆಯ್ಕೆಯಾದ ಬಗ್ಗೆ ಮನ್ಪ್ರೀತ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, 'ಒಲಿಂಪಿಕ್ಸ್ ನಿಜಕ್ಕೂ ವಿಶೇಷವಾಗಲಿದೆ. ಈ ಬಾರಿ ಮೂರನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ನನಗೆ ಸಂತೋಷವಾಗಿದೆ. ನಾಯಕತ್ವ ಜವಾಬ್ದಾರಿಯನ್ನು ನನಗೆ ನೀಡಲಾಗಿರುವುದು ಬಹಳ ಹೆಮ್ಮೆಯ ಕ್ಷಣವಾಗಿದೆ" ಎಂದು ತಿಳಿಸಿದ್ದಾರೆ.
ಭಾರತ ಹಾಕಿ ತಂಡ ಹೀಗಿದೆ:
ರಕ್ಷಣಾತ್ಮಕ ಆಟಗಾರರು:
ಹರ್ಮನ್ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬಿರೇಂದ್ರ ಲಾಕ್ರ
ಮಿಡ್ಫೀಲ್ಡರ್ಗಳು:
ಹಾರ್ದಿಕ್ ಸಿಂಗ್, ಮನ್ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್
ಫಾರ್ವಡ್ ಆಟಗಾರರು:
ಶಂಷೇರ್ ಸಿಂಗ್, ದಿಲ್ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮಂದೀಪ್ ಸಿಂಗ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ