• Home
 • »
 • News
 • »
 • sports
 • »
 • HBD Zaheer Khan: ಇಂಜಿನಿಯರ್ ಆಗಬೇಕಿದ್ದವರು ಕ್ರಿಕೆಟರ್​ ಆದ್ರು, ಜಹೀರ್ ಖಾನ್ ವೃತ್ತಿಜೀವನದ ಇಂಟ್ರಸ್ಟಿಂಗ್​ ಕಹಾನಿ

HBD Zaheer Khan: ಇಂಜಿನಿಯರ್ ಆಗಬೇಕಿದ್ದವರು ಕ್ರಿಕೆಟರ್​ ಆದ್ರು, ಜಹೀರ್ ಖಾನ್ ವೃತ್ತಿಜೀವನದ ಇಂಟ್ರಸ್ಟಿಂಗ್​ ಕಹಾನಿ

ಜಹೀರ್​ ಖಾನ್

ಜಹೀರ್​ ಖಾನ್

HBD Zaheer Khan: ಮುಂಬೈನಲ್ಲಿ ಕ್ರಿಕೆಟ್ ಕೌಶಲಗಳನ್ನು ಕಲಿತ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್, ತಮ್ಮ ತೀಕ್ಷ್ಣ ಬೌಲಿಂಗ್‌ನಿಂದ ಟೀಂ ಇಂಡಿಯಾದಲ್ಲಿ ಈಗಲೂ ಲೆಜೆಂಡರಿ ಬೌಲರ್​ ಆಗಿ ಗುರತಿಸಿಕೊಂಡಿದ್ದಾರೆ. ಅವರ ನಿವೃತ್ತಿ ಬಳಿಕವೂ ಇಂದಿಗೂ ಅವರು ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದಾರೆ.

ಮುಂದೆ ಓದಿ ...
 • Share this:

  ಕ್ರಿಕೆಟ್ ಮೇಲಿನ ವ್ಯಾಮೋಹ ಅವರನ್ನು ಇಂಜಿನಿಯರ್‌ನಿಂದ ಕ್ರಿಕೆಟಿಗನನ್ನಾಗಿ ಮಾಡಿತು. ಸೌರವ್ ಗಂಗೂಲಿ ನಾಯಕತ್ವದಲ್ಲಿ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಈ ಮಾಜಿ ಎಡಗೈ ವೇಗಿ, ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ತಂಡವನ್ನು ಏಕದಿನದಲ್ಲಿ ವಿಶ್ವ ಚಾಂಪಿಯನ್ (World Cup) ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯುವಜನತೆಗೆ ಮಾದರಿಯಾಗಿದ್ದ ಈ ವೇಗದ ಬೌಲರ್ 14 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಅವರು ಇಂದು (ಅಕ್ಟೋಬರ್ 7) ತಮ್ಮ 44ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನಕ್ಕೆ ಅನೇಕ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.


  ಜಹೀರ್​ ಸಾಧನೆಗೆ ಅವರ ತಂದೆಯೇ ಕಾರಣ:


  ಜಹೀರ್ ಖಾನ್ ಕ್ರಿಕೆಟಿಗನಾಗುವ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಜಹೀರ್ 7 ಅಕ್ಟೋಬರ್ 1978 ರಂದು (ಈ ದಿನ) ಮಹಾರಾಷ್ಟ್ರದ ಶ್ರೀರಾಮಪುರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಮಹಾರಾಷ್ಟ್ರದ ಸಣ್ಣ ಪಟ್ಟಣದಿಂದ ಬಂದ ಅವರು ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಶ್ರೀರಾಮಪುರದ ಹಿಂದ್ ಸೇವಾ ಮಂಡಲ್ ನ್ಯೂ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮತ್ತು ನಂತರ ಕೆ.ಜೆ.ಸೋಮಯ್ಯ ಮಾಧ್ಯಮಿಕ ಶಾಲೆಯಿಂದ ಮಾಡಿದರು.


  ಇದಾದ ನಂತರ, ಜಹೀರ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಕೊಂಡರು. ಜಹೀರ್‌ನ ಕ್ರಿಕೆಟ್‌ ಮೇಲಿನ ಉತ್ಸಾಹವನ್ನು ನೋಡಿದ ಅವನ ತಂದೆ ಅವರಿಗೆ ವೇಗದ ಬೌಲರ್ ಆಗಲು ಸಲಹೆ ನೀಡಿದರು. ಆಗ ಜಹೀರ್‌ನ ತಂದೆ ದೇಶದಲ್ಲಿ ಇಂಜಿನಿಯರ್‌ಗಳು ಸಾಕಷ್ಟು ಸಿಗುತ್ತಾರೆ, ನೀವು ವೇಗದ ಬೌಲರ್ ಆಗು ಎಂದು ಹೇಳಿದ್ದರು. ಇದರ ಬಳಿಕ ಜಹೀರ್ ಹಿಂತಿರುಗಿ ನೋಡಲಿಲ್ಲ.


  ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ ಇತಿಹಾಸದ ರೋಚಕ ಕ್ಷಣ, ಭಾರತೀಯರು ಎಂದಿಗೂ ಮರೆಯದ ಆ ಒಂದು ರನೌಟ್​


  ಜಹೀರ್​ ಖಾನ್​ ನಂತರ ಜಾಕ್​ ಆದರು:


  ಜಹೀರ್ ಖಾನ್ ಅವರನ್ನು ಅವರ ತಂದೆ ಮುಂಬೈಗೆ ಕರೆತಂದರು. ಜಹೀರ್ ಖಾನ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು 'ಜಾಕ್' ಎಂಬ ಹೆಸರಿನಿಂದ ಆರಂಭಿಸಿದ್ದು ಇಲ್ಲಿಯೆ. ಜಿಮ್ಖಾನಾ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸುವ ಮೂಲಕ ಜಹೀರ್ ಸಾಕಷ್ಟು ಸುದ್ದಿ ಮಾಡಿದ್ದರು. ಮುಂಬೈನಲ್ಲಿ MRF ಪೇಸ್ ಫೌಂಡೇಶನ್‌ನ ಟಿಎ ಶೇಖರ್ ಈ ಪ್ರತಿಭಾವಂತ ಬೌಲರ್‌ನ ಕಣ್ಣಿಗೆ ಬಿದ್ದಾಗ, ಅವರು ಅವರನ್ನು ಚೆನ್ನೈಗೆ ಕರೆದೊಯ್ದರು. ಜಹೀರ್ ಪ್ರಥಮ ದರ್ಜೆ ಮತ್ತು ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹೆಜ್ಜೆ ಹಾಕುವಲ್ಲಿ ಯಶಸ್ವಿಯಾದರು.


  ಇದನ್ನೂ ಓದಿ: Virat Kohli: ವಿರಾಟ್ ಕೈಯಲ್ಲಿ ದುಬಾರಿ ವಾಚ್, ಕೊಹ್ಲಿ ಒಮ್ಮೆ ಹೇರ್​ ಕಟ್ ಮಾಡೋ ದುಡ್ಡಲ್ಲಿ ಸ್ಪ್ಲೆಂಡರ್ ಬೈಕೇ ಕೊಳ್ಬೋದಿತ್ತಂತೆ!


  2011 ರ ವಿಶ್ವಕಪ್‌ ಹೀರೋ:


  ಇನ್ನು, 28 ವರ್ಷಗಳ ಬಳಿಕ ಭಾರತ ತಂಡ ಏಕದಿನ ವಿಶ್ವಕಪ್​ ಗೆಲ್ಲಲು ಜಹೀರ್​ ಖಾನ್​ ಸಹ ಪ್ರಮುಖ ಕಾರಣವಾಗಿದ್ದರು. ಜಹೀರ್ ಖಾನ್, 2011 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ವಿಶ್ವಕಪ್‌ನಲ್ಲಿ ಅವರು 21 ವಿಕೆಟ್‌ಗಳನ್ನು ಪಡೆದರು. ವಿಶ್ವಕಪ್ ಇತಿಹಾಸದಲ್ಲಿ ಜಹೀರ್ ಹೆಸರಿನಲ್ಲಿ ಒಟ್ಟು 44 ವಿಕೆಟ್‌ಗಳು ದಾಖಲಾಗಿವೆ. ಜಹೀರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 610 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್‌ನ ಸುದೀರ್ಘ ಸ್ವರೂಪದ ಟೆಸ್ಟ್‌ನಲ್ಲಿ, ಅವರು ತಮ್ಮ ಹೆಸರಿನಲ್ಲಿ 311 ವಿಕೆಟ್‌ಗಳನ್ನು ಮತ್ತು ODIಗಳಲ್ಲಿ 282 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಹೀರ್ ಟಿ20ಯಲ್ಲಿ 17 ವಿಕೆಟ್ ಪಡೆದಿದ್ದಾರೆ.

  Published by:shrikrishna bhat
  First published: