• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Asia Cup 2023: ಏಷ್ಯಾಕಪ್​ 2023ರಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯೋದು ಡೌಟ್​? ಇಂದೇ ಹೊರಬೀಳಲಿದೆ ಅಂತಿಮ ತೀರ್ಪು

Asia Cup 2023: ಏಷ್ಯಾಕಪ್​ 2023ರಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯೋದು ಡೌಟ್​? ಇಂದೇ ಹೊರಬೀಳಲಿದೆ ಅಂತಿಮ ತೀರ್ಪು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Asia Cup 2023: ಭಾರತ ತಂಡ ಏಷ್ಯಾದಲ್ಲಿ ಈ ಬಾರಿ ಭಾಗವಹಿಸಲಿದೆಯೇ ಎನ್ನುವುದರ ಕುರಿತು ಅಂತಿಮ ತೀರ್ಪು ಇಂದು ಹೊರಬೀಳಲಿದೆ.

  • Share this:

ಏಷ್ಯಾಕಪ್‌ 2023ರ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆಯೇ ಎಂಬುದರ ಕುರಿತು ಇಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಏಷ್ಯಾ ಕಪ್ 2023 (Asia Cup 2023) ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ನೀಡುವುದಿಲ್ಲ ಎಂದು ಬಿಸಿಸಿಐ (BCCI) ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ತುರ್ತು ಸಭೆಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಬಹ್ರೇನ್‌ಗೆ ತೆರಳಿದ್ದಾರೆ. ಪಿಸಿಬಿ ಅಧ್ಯಕ್ಷ ನಜಮ್ ಶೇಥಿ ಅವರ ಕೋರಿಕೆಯ ಮೇರೆಗೆ ಈ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ಪಾಕಿಸ್ತಾನದ ಏಷ್ಯಾಕಪ್ ಆತಿಥ್ಯ ಹಕ್ಕುಗಳ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಇಂದು ಈ ಕುರಿತ ಅಂತಿಮ ತೀರ್ಪು ಹೊರಬೀಳಲಿದೆ.


ಪಾಕ್​ನಲ್ಲಿ ನಡೆಯುತ್ತದೆಯೇ ಏಷ್ಯಾಕಪ್:


ಬಿಸಿಸಿಐ ಮೂಲಗಳ ಪ್ರಕಾರ, ಪಾಕಿಸ್ತಾನವು ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಅನ್ನು ಆಯೋಜಿಸುವ ಅವಕಾಶವಿಲ್ಲ. ಪಂದ್ಯಾವಳಿಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಡೆಯಲಿದೆ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೋಸ್ಟಿಂಗ್ ಹಕ್ಕುಗಳನ್ನು ಉಳಿಸಿಕೊಳ್ಳುತ್ತದೆ, ಅಥವಾ ಶ್ರೀಲಂಕಾ ಮತ್ತೊಂದು ಆಯ್ಕೆಯಾಗಿರಬಹುದು ಎಂದು ಹೇಳಲಾಗುತ್ತಿದೆ.


ಬಿಸಿಸಿಐ ಇಂದು ಅಂತಿಮ ತೀರ್ಪು:


ಜಯ್ ಶಾ ಪ್ರಸ್ತುತ ಎಸಿಸಿ ಸಭೆಗಾಗಿ ಬಹ್ರೇನ್‌ನಲ್ಲಿದ್ದಾರೆ. ಬಿಸಿಸಿಐ ತನ್ನ ನಿಲುವು ಬದಲಿಸುವುದಿಲ್ಲ. ಸರ್ಕಾರದಿಂದ ಒಪ್ಪಿಗೆ ಸಿಗದ ಕಾರಣ ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಪೇಶಾವರದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟವು ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಪುನರಾರಂಭಿಸುವ ಬಗ್ಗೆ ಭದ್ರತಾ ಕಳವಳವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಸಿಸಿ ಅಧ್ಯಕ್ಷ ಶಾ ಅವರು ಕಾಂಟಿನೆಂಟಲ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು ಮತ್ತು ಏಷ್ಯಾಕಪ್ ನಡೆಯುವ ಸ್ಥಳವನ್ನು ಉಲ್ಲೇಖಿಸಲಾಗಿಲ್ಲ. ಇದಾದ ಬಳಿಕ ಷಾ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸೇಥಿ ಆರೋಪಿಸಿದರು. ಈ ಹಿಂದೆ ಏಷ್ಯಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾರ್ಗಸೂಚಿ ಸಿದ್ಧಪಡಿಸಿತ್ತು.


ಇದನ್ನೂ ಓದಿ: Pakistan Cricket: 6 ರೂಪಾಯಿ ಕೊಡಿ, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ನೋಡುವ ಅವಕಾಶ ಪಡೆಯಿರಿ! ಇದು ಜೋಕಲ್ಲ, ಸೀರಿಯಸ್ ಮ್ಯಾಟರ್!


18 ವರ್ಷಗಳ ಹಿಂದೆ ಕೊನೆಯ ಪ್ರವಾಸ:


2005-06ರಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ತೆರಳಿತ್ತು. ನಂತರ ಭಾರತ ಏಕದಿನ ಸರಣಿಯಲ್ಲಿ ಪಾಕಿಸ್ತಾನವನ್ನು 4-1 ಅಂತರದಿಂದ ಸೋಲಿಸಿತು. ಅಂದಿನಿಂದ ಇದುವರೆಗೂ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಿಲ್ಲ. ಅದೇ ಸಮಯದಲ್ಲಿ, ಪಾಕಿಸ್ತಾನ ತಂಡವು 2012 ರಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಬಂದಿತ್ತು. ನಂತರ ಉಭಯ ದೇಶಗಳ ನಡುವೆ ಟಿ20 ಹಾಗೂ ಏಕದಿನ ಸರಣಿ ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.
ದ್ವಿಪಕ್ಷೀಯ ಸರಣಿ ಸಹ ಇಲ್ಲ:


ಬಹುರಾಷ್ಟ್ರಗಳ ಪಂದ್ಯಾವಳಿಯ ಹೊರತಾಗಿಯೂ. ಭಾರತೀಯ ಪುರುಷರ ಕ್ರಿಕೆಟ್ ತಂಡವು 2023-2027ರಿಂದ 38 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರಲ್ಲಿ 20 ಸ್ವದೇಶದಲ್ಲಿ ಮತ್ತು 18 ವಿದೇಶಿ ನೆಲದಲ್ಲಿ ಸೇರಿವೆ. ಟೀಂ ಇಂಡಿಯಾ ತವರಿನಲ್ಲಿ 21 ಪಂದ್ಯಗಳನ್ನು ಆಡಲಿದ್ದು. ವಿದೇಶದಲ್ಲೂ ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಲಿದೆ. ಈ ಅವಧಿಯಲ್ಲಿ ಭಾರತ ತವರಿನಲ್ಲಿ 31 ಮತ್ತು ವಿದೇಶದಲ್ಲಿ 30 ಟಿ20 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಟೀಂ ಇಂಡಿಯಾ ಶಡ್ಯೂಲ್ ಸಖತ್ ಬ್ಯುಸಿಯಾಗಿದ್ದು, ಪಾಕ್​ ಜೊತೆಗಿನ ದ್ವಿಪಕ್ಷೀಯ ಸರಣಿ ಬಹುತೇಕ 2027ರವರೆಗೆ ನಡೆಯುವುದು ಡೌಟ್​ ಎನ್ನಲಾಗುತ್ತಿದೆ.

Published by:shrikrishna bhat
First published: