ಫಿಫಾ ವಿಶ್ವಕಪ್ 2018: ಅರ್ಜೆಂಟಿನಾ ಹಾಗೂ ಆಸ್ಟ್ರೇಲಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

news18
Updated:June 21, 2018, 2:58 PM IST
ಫಿಫಾ ವಿಶ್ವಕಪ್ 2018: ಅರ್ಜೆಂಟಿನಾ ಹಾಗೂ ಆಸ್ಟ್ರೇಲಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
news18
Updated: June 21, 2018, 2:58 PM IST
ನ್ಯೂಸ್ 18 ಕನ್ನಡ

ಮಾಸ್ಕೋ (ಜೂ. 21): 21ನೇ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಂದು ಒಟ್ಟು ಮೂರು ಪಂದ್ಯಗಳು ನಡೆಯಲಿದೆ. ಸಮಾರಾ ಅರೇನಾ ಕ್ರೀಡಾಗಂಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್​ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣೆಸಾಟ ನಡೆಸಲಿವೆ.

ಕಳೆದ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತಿರುವ ಆಸೀಸ್ ತಂಡ ಇಂದು ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದು ಸವಾಲಿಗೆ ಸಜ್ಜಾಗಿದೆ. ತಂಡದಲ್ಲಿ ಮೈಲ್ ಜೆಡಿನೆಕ್, ಮ್ಯಾಥ್ಯೂ ಲಿಕೀರಂಥಹ ಸ್ಟಾರ್ ಆಟಗಾರರಿದ್ದಾರೆ. ಇತ್ತ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಪ್ರಿ ಕ್ವಾರ್ಟರ್​​ಫೈನಲ್​ಗೆ ಲಗ್ಗೆ ಇಡುವ ವಿಶ್ವಾಸದಲ್ಲಿರುವ ಡೆನ್ಮಾರ್ಕ್ ತಂಡ ಫೇವರಿಟ್ ಎನಿಸಿದೆ.

ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಪೆರು ತಂಡಗಳು ಮುಖಾಮುಖಿ ಆಗಲಿದೆ. ಎರಡೂ ತಂಡಕ್ಕೆ ಇಂದಿನ ಪಂದ್ಯ ಮುಖ್ಯವಾಗಿದ್ದು ಕನಿಷ್ಠ 1 ಅಂಕವನ್ನಾದರು ಈ ಪಂದ್ಯದಲ್ಲಿ ಪಡೆಯಬೇಕಿದೆ. 36 ವರ್ಷಗಳ ಬಳಿಕ ವಿಶ್ವಕಪ್​ನಲ್ಲಿ ಕಣಕ್ಕಳಿದಿರುವ ಪೆರು ತಂಡ ಪಾವ್ಲೋ ಗೆರೆರೋ, ರೌಲ್ ರುಯಿಡೆಜ್, ಕ್ರಿಸ್ಟಿಯನ್ ಕ್ಯುಯೇವರಂತಹ ಪ್ರಮುಖ ಆಟಗಾರರನ್ನು ಹೊಂದಿದೆ. ಇತ್ತ ಫ್ರಾನ್ಸ್​ ಕೂಡ ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ ವಿಶ್ವಾಸದಲ್ಲಿದ್ದು, ಪೌಲ್ ಪೋಗ್ಬಾ, ಒಲಿವರ್ ಜಿರಾರ್ಡ್​​, ಆಂಟೋನಿಯನ್ ಗ್ರಿಜ್​ಮನ್​ ರಂತ ಅನುಭವಿ ಆಟಗಾರರನ್ನು ಹೊಂದಿದೆ.

ಇನ್ನು ಮೂರನೇ ಪಂದ್ಯದಲ್ಲಿ ಅರ್ಜೆಂಟಿನಾ ಹಾಗೂ ಬಲಿಷ್ಠ ಕ್ರೋವೇಶಿಯಾ ತಂಡವನ್ನು ಎದುರಿಸಲಿದೆ. ಕಳೆದ ಐಸ್​​ಲೆಂಡ್ ವಿರುದ್ಧದ ಪಂದ್ಯದಲ್ಲಿ ಡ್ರಾ ಫಲಿತಾಂಶ ಕಂಡಿರುವ ಅರ್ಜೆಂಟಿನಾಕ್ಕೆ ಇಂದಿನ ಪಂದ್ಯ ಪ್ರಮುಖವಾಗಿದ್ದು ಗೆಲುವು ಅನಿವಾರ್ಯವಾಗಿದೆ. ನಾಯಕ ಲಿಯೋನೆಲ್ ಮೆಸ್ಸಿ ಮುಂದಿನ ಭಾನುವಾರ 31ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಗೆಲುವಿನ ಉಡುಗೊರೆ ನೀಡಬೇಕಾಗಿದೆ. ಇತ್ತ ಇಂದಿನ ಪಂದ್ಯ ಗೆದ್ದು 16ರ ಗಟ್ಟಕ್ಕೇರುವ ವಿಶ್ವಾಸದಲ್ಲಿರುವ ಕ್ರೋವೇಶಿಯಾ ತಂಡ ಲೂಕಾ ಮಾಡ್ರಿಕ್, ಮಾರಿಯೋ ಮಾಂಡುಜುಕಿಕ್, ಇವಾನ್ ಪೆರಿಸಿಕಕ್​ರಂಹಹ ಅನುಭವಿ ಆಟಗಾರರನ್ನು ಹೊಂದಿದೆ. ಎರಡೂ ತಂಡಗಳು ಈ ಹಿಂದೆ 1998ರ ವಿಶ್ವಕಪ್​ನಲ್ಲಿ ಮುಖಾಮುಖಿ ಆಗಿದ್ದು, ಅರ್ಜೆಂಟಿನಾ 1-2 ಯಿಂದ ಗೆಲುವು ದಾಖಲಿಸಿತ್ತು.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ