ಟೀಮ್ ಇಂಡಿಯಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನ (DC) ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ಇಂದು ತಮ್ಮ 25ನೇ ವಸಂತಕ್ಕೆ ಕಾಲಿಡಟ್ಟಿದ್ದಾರೆ. ಆಕರ್ಷಕ ವ್ಯಕ್ತಿತ್ವದ ರಿಷಭ್ ತಮ್ಮ ಲವಲವಿಕೆಯ ವರ್ತನೆ ಮತ್ತು ನಿರ್ಭೀತ ಸ್ಫೋಟಕ ಕ್ರೀಡಾ ಸ್ಫೂರ್ತಿಯಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದರಿಂದಾಗಿ ರಿಷಭ್ ಪಂತ್ ಭಾರತದ ಮುಂದಿನ ಪ್ರಮುಖ ಕ್ರೀಡಾ ಐಕಾನ್ ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ಈಗಾಗಲೇ ಅನೇಕ ಕ್ರಿಕೆಟಿಗರು ಹೇಳುತ್ತಿದ್ದಾರೆ. ಪಂತ್ ಬ್ಯಾಟಿಂಗ್ ಮಾಡಲು ನಿಂತರೆಂದರೆ ಸ್ಫೋಟಕರಾಗಿ ಮಿಂಚುತ್ತಾರೆ ಹಾಗೂ ಬ್ಯಾಟ್ನೊಂದಿಗಿನ ಅವರ ಪರಾಕ್ರಮದ ಪರಿಣಾಮವಾಗಿ ಸಂಪೂರ್ಣ ರಾಷ್ಟ್ರವೇ ರಿಷಭ್ ಅನ್ನು ಪ್ರಶಂಸಿಸಿದೆ.
ರಿಷಭ್ ಗೆಳತಿ ಇಶಾರಿಂದ ಹುಟ್ಟುಹಬ್ಬಕ್ಕೆ ವಿಶ್:
25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಿಷಭ್ಗೆ ಗೆಳತಿ ಇಶಾ ಪ್ರೀತಿಪೂರ್ವಕ ಹುಟ್ಟುಹಬ್ಬದ ಸಂದೇಶವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಿಷಭ್ ಗೆಳತಿ ಇಶಾ ನೇಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಗೆಳೆಯ ರಿಷಭ್ಗಾಗಿ ಸುಂದರವಾದ ಹುಟ್ಟುಹಬ್ಬದ ಸಂದೇಶವನ್ನು ಪೋಸ್ಟ್ ಮಾಡಿದ್ದು ಪ್ರೀತಿಯ ನಲ್ಲನಿಗೆ ಹುಟ್ಟುಹಬ್ಬದ ಶುಭಾಶಯಗಳು (ಹ್ಯಾಪಿ ಬರ್ತ್ಡೇ ಮೈ ಲವ್) ಎಂದು ಬರೆದುಕೊಂಡಿದ್ದಾರೆ. ಇಶಾ ನೇಗಿ ಹೆಚ್ಚು ಇನ್ಸ್ಟಾ ಬಳಸುವ ಸೆಲೆಬ್ರಿಟಿಯಾಗಿದ್ದು ಇವರನ್ನು 2.13 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. ಇಶಾ ಪ್ರತಿದಿನವೂ ಲೇಟೆಸ್ಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇನ್ಸ್ಟಾವನ್ನು ಹೆಚ್ಚಾಗಿಯೇ ಬಳಸುವ ಇಶಾ ದೈನಂದಿನ ಅಪ್ಡೇಟ್ಗಳನ್ನು ಬಗೆ ಬಗೆಯ ಫೋಟೋಗಳ ಮೂಲಕ ಪೋಸ್ಟ್ ಮಾಡುತ್ತಿರುತ್ತಾರೆ.
ಯಾರು ಈ ಇಶಾ ನೇಗಿ?:
1997, ಫೆಬ್ರವರಿ 20 ರಂದು ಇಶಾ ಜನಿಸಿದ್ದು, ಡೆಹ್ರಾಡೂನ್ನ ಗಣ್ಯ ಕುಟುಂಬದಿಂದ ಬಂದಿದ್ದಾರೆ. ಕ್ರಿಕೆಟ್ ಅಭಿಮಾನಿಯೂ ಆಗಿರುವ ಇಶಾರ ಮೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯೆಂದರೆ ನೀವು ನಂಬಲೇಬೇಕು. ಇನ್ನು, 2018 ರಿಂದ ರಿಷಭ್ ಹಾಗೂ ಇಶಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇಬ್ಬರೂ ಜೋಡಿಗಳು ತಮ್ಮ ಬಾಂಧವ್ಯದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
1⃣1⃣9⃣ international games 👌
3⃣8⃣9⃣7⃣ international runs 💪
1⃣7⃣3⃣ international dismissals as a wicketkeeper 👍
Here's wishing @RishabhPant17 - a swashbuckling batter & a solid wicketkeeper - a very happy birthday. 🎂 👏#TeamIndia pic.twitter.com/3E8IlrAWsb
— BCCI (@BCCI) October 4, 2022
ಇಶಾ ಹಾಗೂ ರಿಷಭ್ ಪಂತ್ ಜೋಡಿ:
ಟೀ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಇಂದು ತಮ್ಮ 25 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು ಅವರ ಗೆಳತಿ ಇಶಾ ಸುಂದರವಾದ ಹುಟ್ಟುಹಬ್ಬದ ಪೋಸ್ಟ್ ಅನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ರಿಷಭ್ ಪಂತ್ ಫೋಟೋ ಇರುವ ಸ್ಕ್ರೀನ್ಶಾಟ್ ಬಳಸಿಕೊಂಡು ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಬರೆದಿರುವ ಶೀರ್ಷಿಕೆಯನ್ನು ಇಶಾ ನೇಗಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: IND vs SA: ಭಾರತ-ಆಫ್ರಿಕಾ ಕೊನೆಯ ಟಿ20 ಪಂದ್ಯ, ಟೀಂ ಇಂಡಿಯಾದ ಇಬ್ಬರು ಸ್ಟಾರ್ ಪ್ಲೇಯರ್ಸ್ಗಳಿಗೆ ವಿಶ್ರಾಂತಿ
ಎಡಗೈ ಬ್ಯಾಟ್ಸ್ಮನ್ ಆಗಿರುವ ರಿಷಭ್, ವಿಶ್ವದ ಅತ್ಯಂತ ಮನರಂಜನೆಯ ಆಟವೆಂದೆನಿಸಿರುವ ಕ್ರಿಕೆಟ್ನಲ್ಲಿ ಹೆಸರು ಮೂಡಿಸಿಕೊಂಡಿದ್ದಾರೆ. ಭಾರತ ತಂಡದ ಅತ್ಯಗತ್ಯ ಆಟಗಾರ ಎಂದೆನಿಸಿದ್ದಾರೆ. ರಿಷಭ್ ತಮ್ಮ ಆಕ್ರಮಣಕಾರಿ ಶೈಲಿ ಹಾಗೂ ಗಂಭೀರ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಕ್ರೀಡಾ ರಂಗ ಎರಡೂ ಕಡೆ ಹೆಸರುವಾಸಿಯಾಗಿರುವ ರಿಷಭ್ ಬಹುಕಾಲದಿಂದಲೂ ತಮ್ಮ ಗೆಳತಿ ಇಶಾರೊಂದಿಗೆ ಡೇಟಿಂಗ್ ನಡೆಸಿ ಸುದ್ದಿಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ