• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • KCC 2023: Movie Stars-Cricketers ಎಲ್ಲರನ್ನೂ ಒಟ್ಟಿಗೆ ನೋಡ್ಬೇಕಾ? ಜಸ್ಟ್ 250 ರೂಪಾಯಿ ಜೇಬಲ್ಲಿರಲಿ ಸಾಕು!

KCC 2023: Movie Stars-Cricketers ಎಲ್ಲರನ್ನೂ ಒಟ್ಟಿಗೆ ನೋಡ್ಬೇಕಾ? ಜಸ್ಟ್ 250 ರೂಪಾಯಿ ಜೇಬಲ್ಲಿರಲಿ ಸಾಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

KCC 2023: ಇಂದಿನಿಂದ ಕನ್ನಡ ಚಲನಚಿತ್ರ ಕಪ್ 2023ರ ಮೂರನೇ ಎಡಿಷನ್ ಆರಂಭಗೊಳ್ಳಲಿದೆ. ಇಲ್ಲಿ ಕನ್ನಡ ಸಿನಿಮಾ ಸ್ಟಾರ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಒಂದಾಗಲಿದ್ದಾರೆ.

  • Share this:

ಸಿನಿಮಾ ಶೂಟಿಂಗ್​ ನಡುವೆ ಸ್ಯಾಂಡಲ್​ವುಡ್ (Sandalwood) ಮಂದಿ ಇದೀಗ ಕ್ರಿಕೆಟ್​ ಆಡಲು ಸಿದ್ಧರಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season)​ ಇಂದಿನಿಂದ ಆರಂಭವಾಗಲಿದೆ. ಕೆಸಿಸಿ 2023ರ ಹೊಸ ಆವೃತ್ತಿಯು ಇಂದು ಮತ್ತು ನಾಳೆ (24-25) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನಟ ಸುದೀಪ್ ​(Actor Sudeep)​ ಸೇರಿದಂತೆ ಸ್ಯಾಂಡಲ್​ವುಡ್​ನ ಅನೇಕ ನಟರುಗಳು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಎಲ್ಲಾ ತಂಡಗಳಲ್ಲಿಯೂ ಈ ಬಾರಿ ಸ್ಟಾರ್​ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಗೇಲ್​, ರೈನಾ ಸಹ ಈ ಬಾರಿ ಕೆಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


KCC 2023 ತಂಡಗಳು:


ಒಟ್ಟು ಕೆಸಿಸಿ 2023ರಲ್ಲಿ 6 ತಂಡಗಳು ಸೆಣಸಾಡಲಿದ್ದು, ಇಂದು ಮತ್ತು ನಾಳೆ ಪಂದ್ಯಗಳು ನಡೆಯಲಿದೆ.


ಗ್ರೂಪ್ A: ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್
ಗ್ರೂಪ್ B: ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್​ಸ, ವಡಿಯರ್ ಚಾರ್ಜರ್ಸ್


ಕೆಸಿಸಿ 2023 ವೇಳಾಪಟ್ಟಿ:


ಫೆಬ್ರವರಿ 24ರ ಪಂದ್ಯಗಳು


1. ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್
2. ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್
3. ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್
4. ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್


ಇದನ್ನೂ ಓದಿ: IPL 2023: RCB ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ, ಐಪಿಎಲ್​ ಆರಂಭಕ್ಕೂ ಮುನ್ನ ಸ್ಟಾರ್​ ಪ್ಲೇಯರ್​ ಫುಲ್​ ಫಿಟ್​


ಫೆಬ್ರವರಿ 25ರ ಪಂದ್ಯಗಳು


1. ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್
2. ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್
3. ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್


ಈ ಪಂದ್ಯಗಳನ್ನು ಝೀ ಕನ್ನಡ ಮತ್ತು ವೂಟ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.


250 ರೂಗೆ ಟಿಕೆಟ್​ ಬೆಲೆ ಆರಂಭ:


ಈಗಾಗಲೇ ಟಿಕೆಟ್​ ಬುಕ್ಕಿಂಗ್​​ ಅನ್ನು ಆನ್​ಲೈನ್​ನಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ ಟಿಕೆಟ್​ ಬೇಕಾದರೆ, ನೀವು ಚಿನ್ನಸ್ವಾಮಿ ಮೈದಾನಕ್ಕೆ ತೆರಳಿಯೇ ಪಡೆಯಬೇಕು. ಇನ್ನು, 5 ವಿಭಾಗದಲ್ಲಿ ದರ ನಿಗದಿ ಮಾಡಲಾಗಿದೆ. 250, 750, 1500, 3000, 5000 ಟಿಕೆಟ್ ದರ ಇದೆ.


ಕೆಸಿಸಿ ಚಾರ್ಟ್​


ಕೆಸಿಸಿ ತಂಡಗಳ ಸಂಪೂರ್ಣ ಲಿಸ್ಟ್:


ಹೊಯ್ಸಳ ಈಗಲ್ಸ್: ಕ್ರಿಸ್ ಗೇಲ್, ಸುದೀಪ್ (ನಾಯಕ), ಸಾಗರ್ ಗೌಡ, ಅಭಿಷೇಕ್ ಬಾಡ್ಕರ್, ನಾಗಾರ್ಜುನ ಶರ್ಮಾ, ವಿಶ್ವ, ಸುನೀಲ್ ಗೌಡ, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅನೂಪ್ ಭಂಡಾರಿ, ಅರ್ಜುನ್ ಬಚ್ಚನ್, ತರುಣ್ ಸುಧೀರ್, ಮಂಜು ಪಾವಗಡ.


ಒಡೆಯರ್ ಚಾರ್ಜರ್ಸ್: ಬ್ರಿಯಾನ್ ಲಾರಾ, ಶಿವರಾಜಕುಮಾರ್(ನಾಯಕ), ನಿರೂಪ್ ಭಂಡಾರಿ, ಹರ್ಷ, ಪವನ್, ವಿಜಯ್, ಗಣೇಶ್ ರಾಜ್, ಮಧು, ಆರ್ಯನ್, ಥಮನ್, ಅರ್ಜುನ್ ಯೋಗಿ, ರಾಹುಲ್ ಪ್ರಸನ್ನ, ಮೋಹಿತ್ ಬಿ.ಎ.




ಕದಂಬ ಲಯನ್ಸ್: ತಿಲಕರತ್ನೆ ದಿಲ್ಶಾನ್, ಗಣೇಶ್ (ನಾಯಕ), ಲೋಕಿ, ಪ್ರತಾಪ್, ಯೋಗೇಶ್, ವ್ಯಾಸರಾಜ್, ಪ್ರೀತಂ ಗುಬ್ಬಿ, ರಕ್ಷಿತ್, ರಿಷಿ ಬೋಪಣ್ಣ, ರಾಜೀವ್ ಹನು, ರೇಣುಕ್, ಲೋಕಿ ಸಿಕೆ, ಪವನ್ ಒಡೆಯರ್.


ವಿಜಯನಗರ ಪೇಟ್ರಿಯಾಟ್ಸ್: ಹರ್ಷಲ್ ಗಿಬ್ಸ್, ಉಪೇಂದ್ರ, ಪ್ರದೀಪ್ (ನಾಯಕ), ಸಚಿನ್, ವಿಕಾಸ್, ಧರ್ಮ, ವಿಟ್ಠಲ್, ಕಿರಣ್, ಮಹೇಶ್, ಆದರ್ಶ್, ರಜತ್ ಹೆಗ್ಡೆ, ತ್ರಿವಿಕ್ರಮ್, ಗರುಡ ರಾಮ್.


ಗಂಗಾ ವಾರಿಯರ್ಸ್: ಸುರೇಶ್ ರೈನಾ, ಡಾರ್ಲಿಂಗ್ ಕೃಷ್ಣ (ನಾಯಕ), ಡಾಲಿ ಧನಂಜಯ, ಶಿವಕುಮಾರ್, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ನರೇಶ್, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ಪ್ರವೀಣ್.


ರಾಷ್ಟ್ರಕೂಟ ಪ್ಯಾಂಥರ್ಸ್: ಸುಬ್ರಮಣ್ಯಂ ಬದ್ರಿನಾಥ್, ಜೆಕೆ (ನಾಯಕ), ಧ್ರುವ ಸರ್ಜಾ, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್.

Published by:shrikrishna bhat
First published: