HBD R Ashwin: 36ನೇ ವಸಂತಕ್ಕೆ ಕಾಲಿಟ್ಟ ಅಶ್ವಿನ್​, ಇಂಜಿನಿಯರ್​ ಆಗಬೇಕಿದ್ದವ ಭಾರತೀಯ ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ

HBD R Ashwin: ಅಶ್ವಿನ್  ಕ್ರಿಕೆಟ್ ಆಟಗಾರನಾಗುವ ಮುನ್ನ ಇಂಜಿನಿಯರಿಂಗ್​ ಮಾಡಿದ್ದರು. ಬಿ.ಟೆಕ್ ಪದವಿ ಪಡೆದಿರುವ ಅವರು​, ನಂತರ ಕ್ರಿಕೆಟ್​ ಲೋಕದಲ್ಲಿ ಮಿಂಚಿದರು. ತಮಿಳುನಾಡು ಮೂಲದ ಆರ್ ಅಶ್ವಿನ್, ವೇಗದ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಆರ್​.ಅಶ್ವಿನ್

ಆರ್​.ಅಶ್ವಿನ್

  • Share this:
ಭಾರತೀಯ ಕ್ರಿಕೆಟ್ ಇತಿಹಾಸದ ಬಗ್ಗೆ ಹೇಳುವುದಾದರೆ ಸ್ಪಿನ್ ಬೌಲರ್‌ಗಳು ಇಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಅದೇ ರೀತಿ ಭಾರತೀಯ ಕ್ರಿಕೆಟ್​ನಲ್ಲಿ (Cricket) ತನ್ನದೇ ವಿಶೇಷ ಸ್ಪಿನ್ ಬೌಲಿಂಗ್​ನಿಂದ ಹೆಸರು ಮಾಡಿರುವ ದಿಗ್ಗಜ ಬೌಲರ್ ಎಂದರೆ ಅದು ರವಿಚಂದ್ರನ್ ಅಶ್ವಿನ್ (R Ashwin)​. ಇಂತಹ ಟೀಂ ಇಂಡಿಯಾದ (Team India) ಹಿರಿಯ ಆಟಗಾರರಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಇಂದು ಜನ್ಮದಿನದ (Birthday)  ಸಂಭ್ರಮ. ಅವರು ಇಂದು ತಮ್ಮ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಅಶ್ವಿನ್​ 2022ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ. 

ಇಂಜಿನಿಯರ್​ ಆಗಬೇಕಿದ್ದವ ಕ್ರಿಕೆಟಿಗನಾದ:

ಹೌದು, ಅಶ್ವಿನ್  ಕ್ರಿಕೆಟ್ ಆಟಗಾರನಾಗುವ ಮುನ್ನ ಇಂಜಿನಿಯರಿಂಗ್​ ಮಾಡಿದ್ದರು. ಬಿ.ಟೆಕ್ ಪದವಿ ಪಡೆದಿರುವ ಅವರು​, ನಂತರ ಕ್ರಿಕೆಟ್​ ಲೋಕದಲ್ಲಿ ಮಿಂಚಿದರು. ತಮಿಳುನಾಡು ಮೂಲದ ಆರ್ ಅಶ್ವಿನ್, ವೇಗದ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಆರಂಭಿಕರಾಗಿಯೂ ಆಡಿದರು. ನಂತರ ಅವರು ತಮ್ಮ ಬೌಲಿಂಗ್ ಶೈಲಿಯನ್ನು ಬದಲಾಯಿಸಿದರು ಮತ್ತು ಸ್ಪಿನ್ ಬೌಲರ್ ಆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 50 ವಿಕೆಟ್, 100, 150 ರಿಂದ 400 ವಿಕೆಟ್ ಪಡೆದ ಬೌಲರ್. ಅವರು 2016 ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟ ಭಾರತದ ಮೂರನೇ ಆಟಗಾರರಾದರು.





ವಿಶೇಷ ಸಾಧನೆ ಮಾಡಿರುವ ಅಶ್ವಿನ್​:

ಅಶ್ವಿನ್ ಟೆಸ್ಟ್ ನಲ್ಲಿ ಕನಿಷ್ಠ ಮೂರು ಬಾರಿ ಶತಕ ಬಾರಿಸಿ 5 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಭಾರತೀಯ ಕ್ರಿಕೆಟಿಗ. 2016 ರಲ್ಲಿ, ಅವರು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ತಲುಪಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ದೀರ್ಘಕಾಲ ಆಡಿದ್ದರು. ವಿಶ್ವಕಪ್ ಅಲ್ಲದೆ, ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ ಬಳಿಕ ನಿವೃತ್ತಿ ಹೇಳ್ತಾರಂತೆ ಟೀಂ ಇಂಡಿಯಾದ ಇಬ್ಬರು ಸ್ಟಾರ್​ ಪ್ಲೇಯರ್ಸ್?

5 ವಿಕೆಟ್ 30 ಬಾರಿ:

ಆರ್ ಅಶ್ವಿನ್ 86 ಟೆಸ್ಟ್ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 442 ವಿಕೆಟ್ ಪಡೆದಿದ್ದಾರೆ. 30 ಬಾರಿ 5 ಮತ್ತು 7 ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅವರು 5 ಶತಕ ಮತ್ತು 12 ಅರ್ಧ ಶತಕಗಳ ಸಹಾಯದಿಂದ 2931 ರನ್ ಗಳಿಸಿದ್ದಾರೆ. ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದವರಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮಾರ್ಚ್ 2022 ರಲ್ಲಿ, ಅಶ್ವಿನ್ ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಗಳಿಸಿದ್ದಾರೆ.

ಆರ್ ಅಶ್ವಿನ್ ಭಾರತ ಪರ 113 ಏಕದಿನ ಪಂದ್ಯಗಳಲ್ಲಿ 151 ವಿಕೆಟ್ ಹಾಗೂ 56 ಟಿ20 ಪಂದ್ಯಗಳಲ್ಲಿ 66 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್ ಬಗ್ಗೆ ಮಾತನಾಡುತ್ತಾ ಅವರು 287 ಪಂದ್ಯಗಳಲ್ಲಿ 281 ವಿಕೆಟ್ ಪಡೆದಿದ್ದಾರೆ. 8 ರನ್‌ಗಳಿಗೆ 4 ವಿಕೆಟ್‌ಗಳು ಅತ್ಯುತ್ತಮ ಪ್ರದರ್ಶನವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 684 ವಿಕೆಟ್ ಪಡೆದಿದ್ದಾರೆ.
Published by:shrikrishna bhat
First published: