Mohammed Shami: 3 ಬಾರಿ ಆತ್ಮಹತ್ಯೆಗೆ ಆಲೋಚಿಸಿದ್ದ ಟೀಂ ಇಂಡಿಯಾ ಸ್ಟಾರ್​ ಆಟಗಾರ, ರಿವೀಲ್​ ಆಯ್ತು ಕರಾಳ ಸತ್ಯ!

Mohammed Shami: ಟೀಂ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್ ಶಮಿ ಅವರಿಗೆ ಇಂದು ಜನ್ಮದಿನ ಸಂಭ್ರಮ. ಅವರು ಇಂದು ತಮ್ಮ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದರ ನಡುವೆ ಒಂದು ಶಾಕಿಂಗ್​​ ಮಾಹಿತಿ ರಿವೀಲ್ ಆಗಿದೆ.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

  • Share this:
ರಿವರ್ಸ್ ಸ್ವಿಂಗ್ ಬೌಲಿಂಗ್ ಮೂಲಕ ವಿಶ್ವದ ಬ್ಯಾಟ್ಸ್ ಮನ್ ಗಳನ್ನು ನಡುಗಿಸಿದ್ದ ಭಾರತದ (Team India) ಸ್ಟಾರ್​ ಬೌಲರ್​ ಮೊಹಮ್ಮದ್ ಶಮಿ (Mohammed Shami) ಅವರಿಗೆ ಇಂದು ಜನ್ಮದಿನದ (Birthday) ಸಂಭ್ರಮ. ಶಮಿ ಅವರು ಇಂದು ತಮ್ಮ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅನೇಕ ಗಣ್ಯರು  ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ. ಸೆಪ್ಟೆಂಬರ್ 3, 1990 ರಂದು ಜನಿಸಿದ ಶಮಿ ಇಂದು 32 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಂತಹ ದಿಗ್ಗಜ ಬೌಲರ್​ ಶಮಿ ಕೆಲ ಸಮಯ ಕರಾಳ ಜೀವನವನ್ನು ಅನುಭವಿಸಿದ್ದರಂತೆ. ಅಲ್ಲದೇ ಶಮಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಆತ್ಮಹತ್ಯೆಗೆ ಆಲೋಚಿಸಿದ್ದ ಶಮಿ:

ಹೌದು, ಇದನ್ನು ಕೇಳಿದ ಅವರ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದಾರೆ. 2015 ರ ವಿಶ್ವಕಪ್‌ನಲ್ಲಿ ಗಾಯಗೊಂಡ ನಂತರ ಶಮಿ ಪುನರಾಗಮನಕ್ಕೆ ಸುಮಾರು 18 ತಿಂಗಳುಗಳನ್ನು ತೆಗೆದುಕೊಂಡರು. ಅದರ ನಂತರ, ಅವರ ವೈಯಕ್ತಿಕ ಜೀವನವು ಹೆಚ್ಚು ಚರ್ಚೆಗೆ ಬಂದಿತು. ಪತ್ನಿ ಹಸಿನ್ ಜಹಾನ್ ಅವರು ಶಮಿ ವಿರುದ್ಧ ವಿವಾಹೇತರ ಸಂಬಂಧಗಳಂತಹ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.

ಅವರು ಯುಪಿ ಪರ ಕ್ರಿಕೆಟ್ ಆಡಲು ಬಯಸಿದ್ದರು, ಆದರೆ ಅವರ ಸಾಮರ್ಥ್ಯ ಮತ್ತು ಆಂತರಿಕ ರಾಜಕೀಯದ ಕಾರಣ, ಅವರಿಗೆ ಯುಪಿ ಅಂಡರ್-19 ತಂಡದಲ್ಲಿ ಅವಕಾಶ ಸಿಗಲಿಲ್ಲ. ಆದ್ದರಿಂದ ಅವರು ಬಂಗಾಳಕ್ಕೆ ತೆರಳಿದರು ಮತ್ತು ಅಲ್ಲಿನ ಕ್ಲಬ್ ಮೋಹನ್ ಬಗಾನ್‌ಗಾಗಿ ಆಡಲು ಪ್ರಾರಂಭಿಸಿದರು. ನೆಟ್ಸ್‌ನಲ್ಲಿ ಶಮಿ ಅವರ ಬೌಲಿಂಗ್‌ನಿಂದ ಗಂಗೂಲಿ ಪ್ರಭಾವಿತರಾದರು. ಇದರಿಂದ ಅವರು ಜನವರಿ 2013 ರಲ್ಲಿ, ಪಾಕಿಸ್ತಾನ ವಿರುದ್ಧದ ODI ಪಂದ್ಯದಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಆದರೆ ಬಳಿಕ ಅವರ ವೈವಾಹಿಕ ಜೀವನ, ಇಂಜೂರಿ ಸಮಸ್ಯೆ ಎಲ್ಲವೂ ಅವರನ್ನು ಇನ್ನಿಲ್ಲದಂತೆ ಕಾಡಿತ್ತು.

ಇದನ್ನೂ ಓದಿ: Mohammed Shami: ಶಮಿ ವಿರುದ್ಧ ಗುಡುಗಿದ ಪತ್ನಿ! ಅಪರಾಧಿಗಳಿಂದ ಈ ಜಯ ತಂದುಕೊಡಲು ಸಾಧ್ಯವಿಲ್ಲ ಎಂದಿದ್ಯಾಕೆ?

ಇದರಿಂದಾಗಿ ಬೇಸತ್ತ ಅವರು 3 ಬಾರಿ ಆತ್ಮಹತ್ಯೆ ಮಾಡಿಕೊಳ್ಳು ಆಲೋಚಿಸಿದ್ದರಂತೆ.  ನಮ್ಮ 24ನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಜಿಗಿಯಲು ಯತ್ನಿಸಿದ್ದೆ. ಆದರೆ ಬಳಿಕ ಅಂದಿನ ನನ್ನ ವರ್ತನೆಯಿಂದ ಮನೆಯ ಒಬ್ಬರು ಯಾವಾಗಲೂ ನನ್ನ ಮೇಲೆ ಕಣ್ಣಿಟ್ಟಿರುತ್ತಿದ್ದರು. ಅಲ್ಲದೇ ಈ ವೇಳೆ ಕುಟುಂಬದವರು ಮತ್ತು ಸ್ನೇಹಿತರು ನ್ನನ ಬೆಂಬಲಕ್ಕೆ ನಿಂತ ಕಾರಣ ನಾನು ಮತ್ತೆ ಕಂಬ್ಯಾಕ್​ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

ಟೀಂ ಇಂಡಿಯಾದ ಸ್ಟಾರ್​ ಬೌಲರ್ ಶಮಿ:

ಇನ್ನು, ಭಾರತ ತಂಡದ ಖಾಯಂ ಸದ್ಯರಾಗಿರುವ ಮೊಹಮ್ಮದ್ ಶಮಿ ತಂಡದ ಸ್ಟಾರ್​ ವೇಗದ ಬೌಲರ್ ಆಗಿದ್ದಾರೆ. ಅನೇಕ ಪಂದ್ಯಗಳನ್ನು ಶಮಿ ತಮ್ಮ ಬೌಲಿಂಗ್​ ಮೂಲಕ ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ ಕಳೆದ ಬಾರಿಯ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ 20 ವಿಕೆಟ್ ಕಬಳಿಸಿ ಮಿಂಚಿದ್ದರು. ಸದ್ಯ ಟೀಂ ಇಂಡಿಯಾದಿಂದ ದೂರವಿರುವ ಅವರು,  ಆದಷ್ಟು ಬೇಗ ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಅಲ್ಲದೇ ಮುಂಬರುವ ಟಿ20 ವಿಶ್ವಕಪ್​ ವೇಳೆ ಅವರು ಮತ್ತೆ ತಂಡಕ್ಕೆ ಮರಳಿದರೂ ಅಚ್ಚರಿಯಿಲ್ಲ.

ನಾಳೆ ಮತ್ತೆ ಭಾರತ-ಪಾಕ್​ ಹಣಾಹಣಿ:

ಇನ್ನು,  ಮತ್ತೊಮ್ಮೆ ಪಾಕ್​ ತಂಡವು ಭಾರತದ ವಿರುದ್ಧ ಮುಖಾಮುಖಿಯಾಗಲಿದೆ. ನಾಳೆ (ಸೆ.04) ಇಂಡೋ-ಪಾಕ್​ ಕದನ ನಡೆಯಲಿದೆ. ಕ್ರಿಕೆಟ್​ ಅಭಿಮಾನಿಗಳಿಗೆ ಇದು ಭರ್ಜರಿ ಹಬ್ಬವಾಗಿರಲಿದೆ. ಒಂದು ವಾರದಲ್ಲಿ 2 ಬಾರಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ನೋಡಬಹುದಾಗಿದೆ. ಪಂದ್ಯವು  ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದೆ. ಅಲ್ಲದೇ  ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
Published by:shrikrishna bhat
First published: